ಲೇಡೀಸ್ ಬಾತ್ ರೂಂ ಬಳಸಿದ ಬ್ರಹ್ಮಾಂಡ ಶರ್ಮಾ
ಗುರೂಜಿ ಅವರೇ ನಾನು ನಿಮ್ಮನ್ನು ಕ್ಷಮಿಸಿದ್ದೀನಿ ಎಂದು ಸ್ವತಃ ಚಂದ್ರಿಕಾ ಅವರೇ ಬಂದು ಶರ್ಮಾ ಅವರಿಗೆ ಹೇಳಿದರು. ಆಗ ತಮ್ಮ ಮನಸ್ಸು ಒಂಚೂರು ಹಗುರವಾದಂತೆ ಕಂಡರು ನರೇಂದ್ರ ಬಾಬು ಶರ್ಮಾ.
ಇನ್ನೊಂದು ಕಡೆ ಶರ್ಮಾ ಮತ್ತು ನರ್ಸ್ ಜಯಲಕ್ಷ್ಮಿ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಬ್ರಹ್ಮಾಂಡ ಅವರೇ ನೀವು ಟಾಯ್ಲೆಟ್ ನಲ್ಲಿ ಸರಿಯಾಗಿ ನೀರು ಹಾಕುವುದೇ ಇಲ್ಲ ಎಂದು ಕಂಪ್ಲೇಟ್ ಮಾಡಿದರು. ಇದಕ್ಕೆ ಅಯ್ಯೋ ತೊಳೆದುಕೊಂಡ ಬಳಿಕ ನಾವು ನೀರು ಹಾಕಿಯೇ ಹಾಕುತ್ತೇವೆ. ಇಲ್ಲದಿದ್ದರೆ...ಎಂದು ಕೆಟ್ಟ ಪದಗಳನ್ನು ಬಳಿಸಿದರು. ಆದರೆ ಅವೆಲ್ಲವೂ ಮ್ಯೂಟ್ ಆಗಿದ್ದವು ಬಿಡಿ.

ಅದೆಲ್ಲಾ ಸರಿ ನೀವ್ಯಾಕೆ ಲೇಡೀಸ್ ಬಾತ್ ರೂಂ ಬಳಿಸಿದ್ದು ಎಂದು ಕೇಳಿದರು ನರ್ಸ್ ಜಯಲಕ್ಷ್ಮಿ. ಇದಕ್ಕೆ ಶರ್ಮಾ ಅವರ ಉತ್ತರ ಹೀಗಿತ್ತು, "ಅಯ್ಯೋ ನೆನ್ನೆ ರಾತ್ರಿ ಅರ್ಜೆಂಟ್ ಆಗಿತ್ತು ಅದಕ್ಕೆ ಬಳಸಿದೆ"ಎಂದರು. ಅಲ್ಲಾ ಅಲ್ಲಿ ನಾವೆಲ್ಲಾ ಸೀರೆ ಬಟ್ಟೆ, ಬದಲಾಯಿಸಿಕೊಳ್ಳುತ್ತೇವೆ. ನಿಮಗೆ ಅಷ್ಟೂ ಗೊತ್ತಾಗಲ್ವೆ ಎಂದರು. ಇದಕ್ಕೆ ಶರ್ಮಾ ಅಯ್ಯೋ ಹೋಗ್ಲಿ ಬಿಡ್ರಿ ಎಂದರು.
ಇನ್ನೊಂದು ಕಡೆ ರಿಷಿಕಾ ಮನೆಗೆ ಆಗಮಿಸಿದ ಬಳಿಕ ಎಲ್ಲರೂ ವಿಶ್ ಮಾಡಿ, ಅಪ್ಪಿ ಬರಮಾಡಿಕೊಂಡರು. ಆದರೆ ಶರ್ಮಾ ಮಾತ್ರ ಸುಮ್ಮನೆ ಕುಳಿತಿದ್ದರು. ರಿಷಿಕಾ ಅವರು ಸ್ವತಃ ತಮ್ಮನ್ನು ತಾವು ಶರ್ಮಾ ಬಳಿ ಪರಿಚಯಿಸಿಕೊಂಡರು.


Click it and Unblock the Notifications











