ಚಂದ್ರಿಕಾ ರೀ ಎಂಟ್ರಿ ಮೂಲಕ ಬ್ರಹ್ಮಾಂಡ ತತ್ತರ
ಎಂಬತ್ತೆರಡು ದಿನಗಳ ಬಳಿಕ ಮನೆಯಿಂದ ಹೊರಬಿದ್ದ ಚಂದ್ರಿಕಾ ಪುನಃ ಪ್ರತ್ಯಕ್ಷವಾಗಿದ್ದು 85ನೇ ದಿನ. ಮನೆಯಲ್ಲಿ ತಮ್ಮ ವಿರುದ್ಧ ಏನೆಲ್ಲಾ ಕುತಂತ್ರಗಳು ನಡೆಯುತ್ತಿವೆ ಎಂಬುದನ್ನು ಸುದೀಪ್ ತೋರಿಸಿದ್ದರು. ಈಗ ಎಲ್ಲರ ಅಸಲಿ ಮುಖಗಳು ಚಂದ್ರಿಕಾಗೆ ಗೊತ್ತಾಗಿವೆ.
ಅವರು ಮೊದಲು ಬ್ರಹ್ಮಾಂಡ ಅವರನ್ನು ಕೇಳಿದ್ದೇ ಯಾಕೆ ಒಳಗೊಂದು ಹೊರಗೊಂದು ಎಂದು. ಇದಕ್ಕೆ ಉತ್ತರಿಸಲು ಬ್ರಹ್ಮಾಂಡ ಗುರುಗಳು ತಡಬಡಿಸಿದರು. ಕಡೆಗೂ ಚಂದ್ರಿಕಾ ಪ್ರಶ್ನೆಗೆ ಉತ್ತರಿಸದೆ ಅವರು ಹೇಳಿದ್ದಕ್ಕೆಲ್ಲಾ ಕೋಲೆ ಬಸವನ ತರಹ ತಲೆ ಅಲ್ಲಾಡಿಸಿದರು.

ಬ್ರಹ್ಮಾಂಡ ಗುರುಗಳ ಮುಖವಂತೂ ಬಾಡಿಹೋದ ಹೂವಿನಂತಾಗಿದೆ. ಚಂದ್ರಿಕಾ ಪ್ರತ್ಯಕ್ಷವಾದ ಬಳಿಕ ಮನೆಯಲ್ಲಿ ಎಲ್ಲರ ನಿದ್ದೆಗೂ ಸಂಚಕಾರ ಬಂದಿದೆ. ಮಧ್ಯರಾತ್ರಿವರೆಗೂ ನಿಕಿತಾ, ವಿಜಯ್ ರಾಘವೇಂದ್ರ ಇದನ್ನೇ ಚರ್ಚಿಸುತ್ತಾ ತಲೆ ಮೇಲೆ ಕೈಹೊತ್ತಿ ಕುಳಿತಿದ್ದರು.
ಏನೂ ಭಯ ಬೇಡ. ಏನಾಗುತ್ತದೋ ಆಗಲಿ ಬಿಡಿ ಎಂದು ಅರ್ಧಂಬರ್ಧ ಕನ್ನಡದಲ್ಲಿ ವಿಜಯ್ ಅವರಿಗೆ ನಿಕಿತಾ ಧೈರ್ಯ ತುಂಬುತ್ತಿದ್ದರು. ಇನ್ನು ಬ್ರಹ್ಮಾಂಡ ಗುರುಗಳಂತೂ ತಮ್ಮ ಆಟ ಗೊತ್ತಾಗಿದೆ ಎಂದು ಒಳಗೊಳಗೇ ಗಲಿಬಿಲಿಗೊಂಡಿದ್ದಾರೆ. ಇನ್ನೂ ಎರಡು ವಾರ ಏನೇನಾಗುತ್ತದೋ ಎಂಬ ಭಯ ಅವರನ್ನು ನಕಶಿಖಾಂತ ಕಾಡುತ್ತಿದೆ.


Click it and Unblock the Notifications











