»   » 'ಜೀ ಕನ್ನಡ'ದಿಂದ ದೊಡ್ಡ ಎಡವಟ್ಟು: ಕೋಪೋದ್ರೇಕದಿಂದ ಗುಟುರು ಹಾಕಿದ ಬ್ರಾಹ್ಮಣರು.!

'ಜೀ ಕನ್ನಡ'ದಿಂದ ದೊಡ್ಡ ಎಡವಟ್ಟು: ಕೋಪೋದ್ರೇಕದಿಂದ ಗುಟುರು ಹಾಕಿದ ಬ್ರಾಹ್ಮಣರು.!

Posted By:
Subscribe to Filmibeat Kannada

ಶನಿವಾರ-ಭಾನುವಾರ ರಾತ್ರಿ 9 ಗಂಟೆ ಆಯ್ತು ಅಂದ್ರೆ ಸಾಕು... ಕರುನಾಡಿನ ಜನತೆ ತಪ್ಪದೆ ಜೀ ಕನ್ನಡ ವಾಹಿನಿ ಟ್ಯೂನ್ ಮಾಡುತ್ತಿದ್ದರು. ಯಾಕಂದ್ರೆ, 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದಲ್ಲಿನ ಪುಟಾಣಿಗಳ ಕಲರವ ಕಳೆದ ವರ್ಷ ಹಾಗಿತ್ತು.

ಮಕ್ಕಳ ಮುಗ್ದ ನಟನೆ ಜೊತೆಗೆ ಪ್ರತಿ ಸ್ಕಿಟ್ ನಲ್ಲಿಯೂ ಸಾಮಾಜಿಕ ಸಂದೇಶ ಹೊತ್ತು ತರುತ್ತಿದ್ದ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮ ಕರ್ನಾಟಕದ ಮನೆಮನಗಳಲ್ಲಿಯೂ ಜನಪ್ರಿಯತೆ ಗಳಿಸಿತ್ತು.

'ಡ್ರಾಮಾ ಜ್ಯೂನಿಯರ್ಸ್' ಮೊದಲ ಸೀಸನ್ ಅಭೂತಪೂರ್ವ ಯಶಸ್ಸು ಗಳಿಸಿದ ಬಳಿಕ ಅದೇ ಪ್ರೇರಣೆಯೊಂದಿಗೆ 'ಡ್ರಾಮಾ ಜ್ಯೂನಿಯರ್ಸ್' ಎರಡನೇ ಸೀಸನ್ ಇದೀಗ ಪ್ರಾರಂಭವಾಗಿದೆ. 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮ ಶುರುವಾಗಿ ಎರಡು ವಾರಗಳು ಕಳೆದಿವೆ ಅಷ್ಟೇ. ಅಷ್ಟು ಬೇಗ ಈ ಕಾರ್ಯಕ್ರಮ ವಿವಾದಕ್ಕೆ ಗ್ರಾಸವಾಗಿದೆ.

'ಡ್ರಾಮಾ ಜ್ಯೂನಿಯರ್ಸ್' ಹಾಗೂ ಜೀ ಕನ್ನಡ ವಾಹಿನಿ ವಿರುದ್ಧ ಬ್ರಾಹ್ಮಣರು ಕೋಪಗೊಂಡಿದ್ದಾರೆ. ಅದಕ್ಕೆ ಕಾರಣ, ಕಾರ್ಯಕ್ರಮದಲ್ಲಾದ ಬ್ರಾಹ್ಮಣ ಸಮುದಾಯದ ಕುರಿತ ಅವಹೇಳನ.! ಮುಂದೆ ಓದಿರಿ...

ಕಳೆದ ಶನಿವಾರ ಪ್ರಸಾರವಾದ ಸಂಚಿಕೆಯಲ್ಲಿ....

'ಡ್ರಾಮಾ ಜ್ಯೂನಿಯರ್ಸ್-2' ಮೆಗಾ ಆಡಿಷನ್ ಮುಗಿದ ಬಳಿಕ ಕಳೆದ ಶನಿವಾರದಿಂದ ಪುಟಾಣಿ ಮಕ್ಕಳ ಅಸಲಿ ಡ್ರಾಮಾ ಶುರುವಾಯ್ತು. ಕಳೆದ ಶನಿವಾರ (ಆಗಸ್ಟ್ 5) ಪ್ರಸಾರ ಆದ ಸಂಚಿಕೆಯಲ್ಲಿ ಮಾಡಲಾದ ಮೊದಲ ಸ್ಕಿಟ್ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ.

ಗೃಹಪ್ರವೇಶ ಹಾಗೂ ಬ್ರಾಹ್ಮಣ ಪೂಜಾರಿ

ಸುಮಿತ್, ಶ್ರಾವ್ಯ, ಶ್ರೀಷಾ ಮತ್ತು ಅನುಪ್ ಮಾಡಿದ ಡ್ರಾಮಾ ಇದೀಗ ಬ್ರಾಹ್ಮಣ ಸಮುದಾಯವನ್ನ ಕೆರಳಿಸಿದೆ.

ಬ್ರಾಹ್ಮಣರ ಅವಹೇಳನ

ಮಕ್ಕಳು ಮಾಡಿದ ಡ್ರಾಮಾದಲ್ಲಿ ಬ್ರಾಹ್ಮಣರನ್ನ ಹೀನಾಯವಾಗಿ ತೋರಿಸಲಾಗಿದೆ ಜೊತೆಗೆ ಕಾಮಭಂಗಿಗಳನ್ನು ಪ್ರದರ್ಶಿಸುವ ಪ್ರಹಸನ ನಡೆದಿದೆ ಎಂದು 'ಡ್ರಾಮಾ ಜ್ಯೂನಿಯರ್ಸ್' ತಂಡ ಹಾಗೂ ಜೀ ಕನ್ನಡ ವಾಹಿನಿ ವಿರುದ್ಧ ಬ್ರಾಹ್ಮಣ ಸಮುದಾಯ ತಿರುಗಿ ಬಿದ್ದಿದೆ.

ಫೇಸ್ ಬುಕ್ ನಲ್ಲಿ ಸಮರ ಶುರುವಾಗಿದೆ

ಜೀ ಕನ್ನಡ ವಾಹಿನಿ ಹಾಗೂ ಡ್ರಾಮಾ ಜ್ಯೂನಿಯರ್ಸ್ ವಿರುದ್ಧ ಈಗಾಗಲೇ ಬ್ರಾಹ್ಮಣರು ಸಮರಕ್ಕೆ ನಾಂದಿ ಹಾಡಿದ್ದಾರೆ.

ಬೇಷರತ್ತಿನ ಕ್ಷಮೆ ಕೇಳಲೇಬೇಕು

ಮುಂದಿನ ವಾರದ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮ ಬರುವುದರ ಒಳಗಾಗಿ ಜೀ ಕನ್ನಡ ವಾಹಿನಿ ಬೇಷರತ್ತಿನ ಕ್ಷಮೆ ಕೇಳಲೇಬೇಕು ಎಂದು ಬ್ರಾಹ್ಮಣ ಸಮುದಾಯದವರು ಒತ್ತಾಯಿಸಿದ್ದಾರೆ.

ತೀರ್ಪುಗಾರರ ಮೇಲೂ ಗರಂ

''ಕಾರ್ಯಕ್ರಮದ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿ ತೀರ್ಪುಗಾರರದ್ದು. ಬ್ರಾಹ್ಮಣರನ್ನು ಹೀನಾಯವಾಗಿ ತೋರಿಸಿದಾಗ ತೀರ್ಪುಗಾರರು ಕಡಲೆಕಾಯಿ ತಿನ್ನುತ್ತಿದ್ದರೇ.?'' ಎಂದು ವೀಕ್ಷಕರೊಬ್ಬರು ಫೇಸ್ ಬುಕ್ ನಲ್ಲಿ ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.

ಬೇಜವಾಬ್ದಾರಿ ಪ್ರದರ್ಶನ

ಬ್ರಾಹ್ಮಣ ಸಮುದಾಯದ ಬಗ್ಗೆ ಕೀಳು ಮಟ್ಟದ ಡ್ರಾಮಾ ಮಾಡಿಸಿರುವುದು ಸಮಾಜದ ಕುರಿತಾಗಿ ಜೀ ಕನ್ನಡ ವಾಹಿನಿಯ ಬೇಜವಾಬ್ದಾರಿ ತೋರಿಸುತ್ತದೆ ಎಂದು ವೀಕ್ಷಕರು ಫೇಸ್ ಬುಕ್ ನಲ್ಲಿ ಖಾರಿವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಯಾಕೆ ಹೀಗೆ...

''ಹಾಸ್ಯಕ್ಕೆ ಮೊದಲು ನೆನಪಿಗೆ ಬರುವುದೇ ಬ್ರಾಹ್ಮಣರು. ಯಾಕೆ ಹೀಗೆ.?'' ಎಂಬುದು ವೀಕ್ಷಕರ ಪ್ರಶ್ನೆ.

ಬೆಂಕಿಯೇ ಬೀಳುತ್ತಿತ್ತು.!

''ಬ್ರಾಹ್ಮಣರ ಬದಲು ಲಿಂಗಾಯತರನ್ನೋ... ಒಕ್ಕಲಿಗರನ್ನೋ... ಮುಸ್ಲಿಂ ಅಥವಾ ಕ್ರಿಶ್ಚಿಯನ್ನರನ್ನೋ ಆಡಿಕೊಂಡು ನಕ್ಕಿದ್ದರೆ ಇಪ್ಪತ್ನಾಲ್ಕು ತಾಸುಗಳ ಒಳಗಾಗಿ ಚಾನೆಲ್ ಗೆ ಬೀಗ ಬೀಳುತ್ತಿತ್ತು. ಇಲ್ಲವೇ ಬೆಂಕಿಯೇ ಬೀಳುತ್ತಿತ್ತು'' ಎಂದು ಜೀ ಕನ್ನಡ ವಿರುದ್ಧ ಕೋಪಗೊಂಡ ವೀಕ್ಷಕರೊಬ್ಬರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ನಾಚಿಕೆಯಾಗಬೇಕು ನಿಮಗೆ.!

''ಪುರೋಹಿತರ ವೃತ್ತಿಯನ್ನು ನೀವು ಇಷ್ಟು ಕೆಟ್ಟದಾಗಿ ತೋರಿಸಬಾರದಿತ್ತು. ನಾಚಿಕೆ ಆಗಬೇಕು ನಿಮಗೆ'' ಎಂಬ ಕಾಮೆಂಟ್ ಗಳೇ ಹೆಚ್ಚಾಗಿವೆ.

ನಕ್ಕು ಸುಮ್ಮನಾಗಿ...

''ಕಾಮಿಡಿಯನ್ನ ಕಾಮಿಡಿ ಆಗಿ ನೋಡಿ ನಕ್ಕು ಸುಮ್ಮನಾಗಿ. ಅದಕ್ಕೆ ಬೇರೆ ರೂಪ ಕೊಡಬೇಡಿ'' ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ.

ನಿಮ್ಮ ಅಭಿಪ್ರಾಯ ಏನು.?

'ಡ್ರಾಮಾ ಜ್ಯೂನಿಯರ್ಸ್' ಸ್ಕಿಟ್ ಬಗ್ಗೆ ಎದ್ದಿರುವ ವಿವಾದದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ...

English summary
Brahmin Community is annoyed with Zee Kannada Channel's popular show 'Drama Juniors'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada