Geetha Bhat Weight Loss : ತೆಳ್ಳಾಗಾಗಲು 'ಬ್ರಹ್ಮಗಂಟು' ಗೀತಾ ಅನುಸರಿಸುತ್ತಿರುವ ಡಯೆಟ್ ಪ್ಲಾನ್ ಹೇಗಿದೆ ನೋಡಿ!
'ಬ್ರಹ್ಮಗಂಟು' ಧಾರಾವಾಹಿ ನಟಿ ಗೀತಾ ಭಾರತಿ ಭಟ್ ಭಾರೀ ದಪ್ಪಗೆ ಇದ್ದರು. ನೋಡುಗರೆಲ್ಲರೂ ಯಾಕೆ ಅಷ್ಟೊಂದು ದಪ್ಪಗಿದ್ದಾರೆ? ಸಣ್ಣಗಾಗಲು ಪ್ರಯತ್ನಪಟ್ಟಿಲ್ವಾ? ಅಂತೆಲ್ಲಾ ಗೀತಾ ಅವರಿಗೆ ಬಿಟ್ಟಿ ಸಲಹೆಯನ್ನೂ ಕೊಟ್ಟಿರಬಹುದು.
ಈಗ ಅವೆಲ್ಲವನ್ನೂ ಪಕ್ಕಕ್ಕಿಟ್ಟು ಗೀತಾ ತನ್ನ ಆರೋಗ್ಯಕ್ಕೋಸ್ಕರ ಅನೇಕ ವರ್ಷಗಳ ಬಳಿಕ ಸಣ್ಣಗಾಗಲು ನಿರ್ಧಾರ ಮಾಡಿದ್ದಾರೆ. ಇದು ಗೀತಾ ಅವರ ಹಲವು ವರ್ಷಗಳ ಕನಸು. ಇದೀಗ ಅವರು ಬಹಳ ತೆಳ್ಳಗೆ ಆಗಿದ್ದಾರೆ.
ಡಯೆಟಿಷಿಯನ್ ಸಲಹೆ ಮೇರೆಗೆ ಗೀತಾ ಭಾರತಿ ಭಟ್ ಡಯೆಟ್ ಮಾಡುತ್ತಿದ್ದಾರೆ. ಇದು ಬಹಳ ಉದ್ದದ ಜರ್ನಿ, ಒಂದು ವರ್ಷಗಳಿಗೂ ಕಾಲ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎನ್ನಲಾಗಿದೆ. ಒಂದು ವಾರ ವರ್ಕೌಟ್, ಡಯೆಟ್ ಮಾಡಿರೋದರಿಂದ ಗೀತಾಗೆ ತುಂಬ ಲೈಟ್ ಫೀಲ್ ಆಗಲು ಶುರುವಾಗಿದೆಯಂತೆ. ಒಳ್ಳೆಯ ರೀತಿಯಲ್ಲಿ ಜೀವನ ಶೈಲಿ ಕೂಡ ಬದಲಾಗಿದೆಯಂತೆ.

ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಗೀತಾ ಭಾರತಿ
ಗೀತಾ ಭಾರತಿ ಭಟ್ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಗೀತಾ ಎಂಬ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸೀರಿಯಲ್‌ನಲ್ಲಿರುವ ಪಾತ್ರದಂತೆ ಗೀತಾ ಕೂಡ ತುಂಬ ದಪ್ಪ ಇದ್ದಾರೆ. ಈ ರೀತಿ ಗೀತಾ ದಪ್ಪವಿರೋದಕ್ಕೂ ಕೂಡ ಕಾರಣವಿದೆ. ಕಿರುತೆರೆಗೆ ಕಾಲಿಡುವ ಮುಂಚೆ ಇವರನ್ನು ನೋಡಿ ಹಲವರು ಟೀಕೆ ಮಾಡುತ್ತಿದ್ದರು. ಹೀಯಾಳಿಸುತ್ತಿದ್ದರು. ಆದರೆ ತಮ್ಮ ನಟನೆಯಿಂದ ಅವರು ಈಗ ಕರ್ನಾಟಕದ ಮನೆ ಮನೆಯ ಮಾತಾಗಿದ್ದಾರೆ.

'ಬ್ರಹ್ಮಗಂಟು' ಧಾರಾವಾಹಿಯ ಗೀತಾ ಪಾತ್ರದಲ್ಲಿ ನಟನೆ
'ಬ್ರಹ್ಮಗಂಟು' ಧಾರಾವಾಹಿಯ ಗೀತಾ ಪಾತ್ರದಲ್ಲಿ ಗೀತಾ ಭಾರತಿ ಭಟ್ ನಟಿಸಿದ್ದರು. ಈಕೆ ಕಾರ್ಕಳದ ಹುಡುಗಿಯಾಗಿದ್ದರೂ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಪಕ್ಕದಮನೆಯ ಮಕ್ಕಳು ಸಂಗೀತ ಕಛೇರಿಗೆ ಹೋಗುತ್ತಿದ್ದಾರೆ ಎಂದು ಅವರ ಪಾಲಕರು ಗೀತಾರನ್ನು ಸಂಗೀತ ಕ್ಲಾಸ್‌ಗೆ ಸೇರಿಸಿದರಂತೆ. ಹೀಗಾಗಿ ಸಂಗೀತದಲ್ಲಿ ಅಭಿರುಚಿ ಹೆಚ್ಚಾಗಿ, ಚೆನ್ನಾಗಿ ಹಾಡುತ್ತಾ ಎಲ್ಲರಿಂದಲೂ ಹೊಗಳಿಸಿಕೊಂಡಿದ್ದರು.

ಬ್ಯಾಂಕ್‌ನಲ್ಲಿ 2 ವರ್ಷ ಕೆಲಸ
ತರಗತಿಗೆ ಹೋಗೋದಕ್ಕಿಂತ ಹೆಚ್ಚಾಗಿ ಬೇರೆ ಬೇರೆ ಕಾಲೇಜುಗಳಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರಂತೆ. ಅಪ್ಪ-ಅಮ್ಮನ ಒತ್ತಾಯದಿಂದ ಶಿಕ್ಷಣದ ಕಡೆಗೆ ಗಮನ ನೀಡಿದ ಗೀತಾ, ಕಾಲೇಜು ನಂತರದಲ್ಲಿ ಇವರು ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್‌ನಲ್ಲಿ 2 ವರ್ಷ ಕೆಲಸ ಮಾಡಿದರಂತೆ. ಆದರೆ ಇದು ಇಷ್ಟವಾಗದೆ ಇದ್ದಕ್ಕಿದ್ದಂತೆ ಕೆಲಸ ಬಿಟ್ಟಿದ್ದರಂತೆ. ಆದರೆ ಹಾಡನ್ನು ಮಾತ್ರ ಮುಂದುವರಿಸಲೇಬೇಕು ಎಂಬುದು ಗೀತಾ ಅವರ ಆಶಯವಾಗಿತ್ತು.

ಗೀತಾ ಸಣ್ಣಗಾಗಲು ನಿರ್ಧಾರ ಮಾಡಿದ್ದು ಯಾಕೆ?
ಯಾರೋ ಏನೋ ಹೇಳ್ತಾರೆ ಅಂತ ಗೀತಾ ಸಣ್ಣಗಾಗಲು ನಿರ್ಧಾರ ಮಾಡಿಲ್ಲ. ಈಗಾಗಲೇ ಗೀತಾ ಅವರು ಒಂದು ವಾರಗಳಿಂದ ವರ್ಕ್‌ಔಟ್ ಮಾಡಲು ಆರಂಭಿಸಿದ್ದಾರೆ. ಡಯೆಟ್ ಕೂಡ ಆರಂಭಿಸಿದ್ದಾರೆ. ಸ್ನೇಹಿತರು ಸಿಹಿ, ಪಾನಿಪುರಿ-ಮಸಾಲ್ ಪುರಿ ತಿನ್ನುತ್ತಿದ್ದಾಗ ಗೀತಾಗೂ ಕೂಡ ತಿನ್ನಬೇಕು ಅಂತ ಅನಿಸುತ್ತಿತ್ತು. ಆದರೆ ಸಣ್ಣಗಾಗಲೇಬೇಕು ಎಂದು ನಿರ್ಧಾರ ಮಾಡಿರೋದರಿಂದ ಎಲ್ಲಾ ಜಂಕ್‌ಫುಡ್‌ಗಳಿಗೂ ಬ್ರೇಕ್ ಹಾಕಿದ್ದಾರೆ. ಇನ್ನು ಮನೆಯಲ್ಲಿ ಸಿಗುವ ಆಹಾರವನ್ನು ಬ್ಯಾಲೆನ್ಸ್ ಆಗಿ ಗೀತಾ ಸೇವನೆ ಮಾಡುತ್ತಿದ್ದಾರೆ.


Click it and Unblock the Notifications











