'ಸ್ಪರ್ಶ' ರೇಖಾ ನಿರ್ಮಾಣದ ಚಿತ್ರದಲ್ಲಿ 'ಬ್ರಹ್ಮಗಂಟು' ನಟ
Recommended Video

Brahma Gantu Kannada Serial : ಸ್ಯಾಂಡಲ್ ವುಡ್ ಗೆ ಕಾಲಿಡಲಿದ್ದಾರೆ ಬ್ರಹ್ಮಗಂಟು ಧಾರಾವಾಹಿಯ ಭರತ್ ಬೋಪಣ್ಣ
ಸೀರಿಯಲ್ ನಿಂದ ಸಿನಿಮಾ ಜರ್ನಿ ಶುರು ಮಾಡಿದ ಕಲಾವಿದರ ಸಂಖ್ಯೆ ಬಹಳ ದೊಡ್ಡದಿದೆ. ಈಗ ಕನ್ನಡದ ಒಬ್ಬ ಕಿರುತೆರೆಯ ನಟ ಸಿನಿಮಾದಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.
ಜೀ ಕನ್ನಡ ವಾಹಿನಿಯ 'ಬ್ರಹ್ಮಗಂಟು' ಧಾರಾವಾಹಿಯ ಮೂಲಕ ಪ್ರೇಕ್ಷಕರ ಗಮನ ಸೆಳೆದವರು ನಟ ಭರತ್ ಬೊಪ್ಪಣ್ಣ. ಈ ಧಾರಾವಾಹಿಯ ಲೀಡ್ ಪಾತ್ರ ಮಾಡುತ್ತಿದ್ದ ಇವರಿಗೆ ಈಗ ಸಿನಿಮಾ ಅವಕಾಶ ಸಿಕ್ಕಿದೆ. 'ಡೆಮೋ ಪೀಸ್' ಎಂಬ ಸಿನಿಮಾದಲ್ಲಿ ಭರತ್ ಬೊಪ್ಪಣ್ಣ ನಟಿಸುತ್ತಿದ್ದಾರೆ.
'ಡೆಮೋ ಪೀಸ್' ಸಿನಿಮಾ 'ಸ್ಪರ್ಶ' ರೇಖಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾವಾಗಿದೆ. ಈ ಸಿನಿಮಾವನ್ನು ವಿವೇಕ್ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದ್ದು, ಹಾಡು, ಡ್ಯಾನ್ಸ್, ಫೈಟ್, ರೋಮ್ಯಾನ್ಸ್ ಎಲ್ಲವೂ ಇದೆಯಂತೆ.

'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಭರತ್ ನಟನೆ ಇಷ್ಟ ಹಾಗೆ ಈ ಸಿನಿಮಾಗೆ ಅವರನ್ನು ಆಯ್ಕೆ ಮಾಡಲಾಗಿದೆ. ಸದ್ಯದಲ್ಲಿಯೇ ಸಿನಿಮಾ ಟ್ರೇಲರ್ ಬಿಡುಗಡೆಯಾಗಲಿದೆಯಂತೆ. 'ಪಂಚತಂತ್ರ' ಖ್ಯಾತಿ ಸೋನಾಲ್ ಈ ಸಿನಿಮಾದ ನಾಯಕಿಯಾಗಿದ್ದಾರೆ.
More from Filmibeat
English summary
Bramhagantu kannada serial actor Bharath Bopanna making his sandalwood debut from Demo Piece movie. The movie is producing by Sparha Rekha.


Click it and Unblock the Notifications











