»   » ಮೊದಲ ರಾತ್ರಿಗೂ ಮುನ್ನವೇ ಮದುಮಗ ಪರಾರಿ!

ಮೊದಲ ರಾತ್ರಿಗೂ ಮುನ್ನವೇ ಮದುಮಗ ಪರಾರಿ!

Posted By:
Subscribe to Filmibeat Kannada
<ul id="pagination-digg"><li class="next"><a href="/tv/yogesh-likes-marry-anushree-bigg-boss-074097.html">Next »</a></li></ul>

ಈ ಗುರುವಾರ (ಮೇ 16) ಬಿಗ್ ಬಾಸ್ ಮನೆಯಲ್ಲಿ ಮದುವೆ ಸಂಭ್ರಮ. ಲೂಸ್ ಮಾದ ಅಲಿಯಾಸ್ ಯೋಗೀಶ್ ಅವರ ಮದುವೆ ನಿಕಿತಾ ತುಕ್ರಲ್ ಜೊತೆ ಅದ್ದೂರಿಯಾಗಿ ನಡೆಯಿತು. ಇದು ಬಿಗ್ ಬಾಸ್ ನೀಡಿದ್ದ ಲಕ್ಷುರಿ ಟಾಸ್ಕ್ ಆಗಿತ್ತು. ಈ ಟಾಸ್ಕ್ ಪ್ರಕಾರವೇ ಮದುವೆ ನೆರವೇರಿದೆ.

ಐವತ್ತೆರಡನೇ ದಿನದ ಹೈಲೈಟ್ ಮೇಲೆ ಕಣ್ಣು ಹಾಯಿಸೋಣ ಬನ್ನಿ. ಯೋಗಿ ಮದುವೆಯನ್ನು ನರೇಂದ್ರ ಬಾಬು ಶರ್ಮಾ ಅವರ ಮುಂದಾಳತ್ವದಲ್ಲಿ ನೆರವೇರಿಸಲಾಯಿತು. ವಿಧಿವತ್ತಾಗಿ ಮದುವೆಯೇನೋ ನೆರೆವೇರಿತು. ಅದಕ್ಕೂ ಮುನ್ನ ಕೆಲವೊಂದು ಸ್ವಾರಸ್ವಕರ ಘಟನೆಗಳು ಮನೆಯಲ್ಲಿ ನಡೆದವು.

Bigg boss day 53rd highlights

ಇದೊಂದು ತರಹ ನಿಜವಾದ ಮದುವೆ ಅಲ್ಲದಿದ್ದರೂ ವೀಕ್ಷಕರಿಗಂತೂ ನಿಜವಾದ ಮದುವೆ ಸಂಭ್ರಮವನ್ನಂತೂ ನೆನಪಿಸಿತು. ಆದರೆ ಮದುವೆ ಹೆಣ್ಣು ನಿಕಿತಾ ಬಳಸಿದ್ದದ್ದು ಮಾತ್ರ ನಿಜವಾದ ಚಿನ್ನದ ಆಭರಣಗಳನ್ನು. 'ಭೀಮಾ ಮದುವೆ ಸಂಭ್ರಮ' ಟಾಸ್ಕ್ ನಲ್ಲಿ ನಿಜವಾದ ಮದುವೆ ಆಭರಣಗಳನ್ನು ಬಳಸಲಾಯಿತು.

ಈ ಆಭರಣಗಳ ಜವಬ್ದಾರಿಯನ್ನು ಚಂದ್ರಿಕಾ ಅವರಿಗೆ ನೀಡಲಾಗಿತ್ತು. ಅವು ಕಳೆದುಹೋಗದಂತೆ ಜಾಗ್ರತೆ ವಹಿಸುವಂತೆ ಬಿಗ್ ಬಾಸ್ ಸೂಚಿಸಿದ್ದರು. ಅವುಗಳನ್ನು ಎಚ್ಚರಿಕೆಯಿಂದ ಬಳಸುವಂತೆ, ಬಳಿಕ ಹಿಂತಿರುಗಿಸುವಂತೆ ಹೇಳಲಾಗಿತ್ತು. ಅದರಂತೆಯೇ ನಡೆಯಿತು.

ಮಂಗಳವಾದ್ಯಗಳ ಮೂಲಕ ಮದುಮಗ ಯೋಗಿಯನ್ನು ಮನೆಗೆ ಕರೆತರಲಾಯಿತು. ಮದುಮಗ ಯೋಗಿ ಎಂದು ಗೊತ್ತಾದದ್ದೇ ತಡ ಎಲ್ಲರೂ ಅಯ್ಯೋ ಯೋಗಿ ನೀನಾ ಎಂದು ಕುಣಿದಾಡಿದರು. ಮದುಮಗನ ಕಾಲನ್ನು ವಿಜಯ್ ರಾಘವೇಂದ್ರ ತೊಳೆದು ಮನೆಗೆ ಬರಮಾಡಿಕೊಂಡ.

<ul id="pagination-digg"><li class="next"><a href="/tv/yogesh-likes-marry-anushree-bigg-boss-074097.html">Next »</a></li></ul>
English summary
Etv Kannada's reality show Bigg Boss's luxury budget task "Bhima Maduve Sambrama" held in grand style. Bridegroom Yogesh expressed his desire to marry both siblings Anushree and Nikita. But finally he married Nikita. Here is the day 53rd highlights.
Please Wait while comments are loading...