ಪುಷ್ಪ ಅಲಿಯಾಸ್ ಅಮೂಲ್ಯ ರಿಯಲ್ ಲೈಫ್‌ನಲ್ಲಿ ಹೇಗಿರ್ತಾರೆ ಗೊತ್ತಾ?
ಬೃಂದಾವನ ಧಾರವಾಹಿಯಲ್ಲಿ ನಟನೆ ಮಾಡುತ್ತಿರುವ ಪುಷ್ಪ ಪಾತ್ರಧಾರಿ ಅಮೂಲ್ಯ ಭಾರಧ್ವಜ್ ರಿಯಲ್ ಲೈಫ್ ನಲ್ಲಿ ಹೇಗಿದ್ದಾರೆ ಗೊತ್ತಾ? ಸಖತ್ ಮಾಡರ್ನ್ ಆಗಿರುವ ಪುಷ್ಪ ಖ್ಯಾತಿಯ ಅಮೂಲ್ಯ ನೋಡಲು ಸಖತ್ ಬ್ಯೂಟಿಫುಲ್ ಆಗಿದ್ದಾರೆ. ವೆಸ್ಟರ್ನ್ ಲುಕ್‌ನಲ್ಲೂ ಬಲು ಸುಂದರವಾಗಿ ಕಾಣುವ ನಟಿ ಟ್ರೆಡಿಷನಲ್ ಲುಕ್‌ನಲ್ಲಿ ಅಂತೂ ಅಭಿಮಾನಿಗಳು ಅಮೂಲ್ಯ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ .
ಅಮೂಲ್ಯ ನೋಟಕ್ಕೆ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ. ಅಮೂಲ್ಯ ಆಗಾಗ ಲೇಟೆಸ್ಟ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡು ಹಂಚಿಕೊಳ್ಳುತ್ತಾರೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಗಿ ಮಿಂಚುತ್ತಿರುವ ನಟಿಗೆಅಭಿಮಾನಿಗಳು ಆಲ್ ದಿ ಬೆಸ್ಟ್ ಎಂದು ಹೇಳುತ್ತಿದ್ದಾರೆ. 'ಬೃಂದಾವನ' ಧಾರಾವಾಹಿಯಲ್ಲಿ ಪುಷ್ಪ ಆಗಿ ಅಮೂಲ್ಯ ವೀಕ್ಷಕರ ಮನಗೆದ್ದಿದ್ದಾರೆ.

ನಗು ಮೊಗದಿಂದಲೆ ಎಲ್ಲರನ್ನೂ ಮೋಡಿ ಮಾಡುವ ಚೆಲುವೆ ಈಕೆ ಎಂದರೆ ತಪ್ಪಾಗದು. ಟೆರೆಸ್ ಮೇಲೆ ನಿಂತು ಸೂರ್ಯಾಸ್ತದ ಸಮಯದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಹಾಗೆಯೇ ಅಮೂಲ್ಯ ತನ್ನ ಗೆಳೆಯರ ಜೊತೆ ಅತಿ ಹೆಚ್ಚಾಗಿ ಕಾಲ ಕಳೆಯುತ್ತಾ ಇರುತ್ತಾರೆ. ಸನ್ ಸೆಟ್ ನೋಡಿ ಆಕೆ ಬಹಳ ಖುಷಿ ಪಟ್ಟಿದ್ದಾರೆ. ಹಾಗೆಯೇ ಫೋಟೋಗೆ ನೀಡಿದ ಎಕ್ಸ್‌ಪ್ರೇಶನ್‌ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್ ಆಗಿದ್ದಾರೆ.
ಸೂರ್ಯಾಸ್ತ ನೋಡುತ್ತ ಕುಳಿತ ಪುಷ್ಪ
ಅಮೂಲ್ಯ ಭಾರಧ್ವಾಜ್ ಪಿಂಕ್ ಟೀಶರ್ಟ್ ಹಾಗೂ ನೀಲಿ ಬಣ್ಣದ ಶಾರ್ಟ್ಸ್ ಧರಿಸಿ ಕಾಣಿಸಿಕೊಂಡಿದ್ದರು. ಸಿಂಪಲ್ ಆಗಿ ಮೇಕಪ್ ಮಾಡಿಸಿಕೊಂಡು ಎಲ್ಲರ ಗಮನ ಸೆಳೆದ ಅಮೂಲ್ಯ ಭಾರದ್ವಾಜ್ ನ್ಯಾಚುರಲ್ ಲುಕ್‌ನಿಂದಲೇ ಮೋಡಿ ಮಾಡುತ್ತಿದ್ದಾರೆ. ನಟಿ ಸಿಂಪಲ್ ಆಗಿ ಜುಟ್ಟು ಕಟ್ಟಿಕೊಂಡು ಮಿಂಚಿದ್ದಾರೆ.
ಸಿಕ್ಕಾಪಟ್ಟೆ ಸಿಂಪಲ್ ಅಮೂಲ್ಯ
ಸಿಂಪಲ್ ಆಗಿರುವ ಇಯರಿಂಗ್ಸ್ ಧರಿಸಿದ್ದರು. ಇನ್ನು ಮಕ್ಕಳ ಹಾಗೆ ಸೂರ್ಯಾಸ್ತ ನೋಡಿ ಬಹಳ ಖುಷಿ ಪಟ್ಟಿದ್ದಾರೆ. ಧಾರಾವಾಹಿಯಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಲಂಗದಾವಣಿ ಹಾಗೂ ಸೀರೆಯಲ್ಲಿ ಕಾಣಿಸಿಕೊಳ್ಳುವ ಅಮೂಲ್ಯ ಇವರೇನಾ ಪುಷ್ಪನ ಎನ್ನುವಷ್ಟರ ಮಟ್ಟಿಗೆ ಮಾಡರ್ನ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಆಕೆಯ ಪೋಟೋಗಳಿಗೆ ಸಾಕಷ್ಟು ಲೈಕ್ಸ್ ಸಿಕ್ಕಿದೆ.

ಸ್ಟೈಲಿಶ್ ಲುಕ್‌ನಲ್ಲಿ ಚೆಲುವೆ
ವಾರಕ್ಕೂ ಮುನ್ನ ಇದೇ ರೀತಿ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಫೋಟೊಗಳನ್ನು ತೇಲಿ ಬಿಟ್ಟಿದ್ದಾರೆ. ಬ್ಲ್ಯಾಕ್ ಕಲರ್ ಟಾಪ್, ಕ್ರೀಂ ಕಲರ್ ಪ್ಯಾಂಟ್ ತೊಟ್ಟು ಗಮನ ಸೆಳೆದಿದ್ದರು. ನಿಂತು, ಕುಂತು ವಿಭಿನ್ನ ಕೋನಗಳಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದರು. ಆ ಫೋಟೊಗಳು ವೈರಲ್ ಆಗಿತ್ತು. ಅದಕ್ಕೂ ಮುನ್ನು ಸ್ನೇಹಿತರ ಜೊತೆ ಪಾರ್ಟಿಗೆ ಹೋಗಿದ್ದ ಫೋಟೊಗಳನ್ನು ಹಂಚಿಕೊಂಡಿದ್ದರು.
ಜಾಲಿ ಮೂಡ್‌ನಲ್ಲಿ ಚೆಲುವೆ
ನಟಿ ಇತ್ತೀಚಿನ ದಿನಗಳಲ್ಲಿ ಬಹಳ ಜಾಲಿ ಮೂಡ್‌ನಲ್ಲಿ ಇದ್ದಂತಿದೆ. ಬಿಡುವಿನ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕಾಲ ಕಳೆಯುತ್ತಾರೆ. ಬೃಂದಾವನ ಧಾರಾವಾಹಿಯಲ್ಲಿ ಆಕಾಶ್‌ನ ಹೆಂಡತಿಯ ಪಾತ್ರದಲ್ಲಿ ಪುಷ್ಪ ಕಾಣಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಕಾಶ್‌ನ ನಡವಳಿಕೆಯಲ್ಲಿ ಬಹಳ ಬದಲಾವಣೆಗಳು ಕಂಡು ಬಂದಿರುವುದಂತು ಸತ್ಯ. ಆದರೆ ಸತ್ಯ ತಿಳಿದರೆ ಅದನ್ನು ಅರಗಿಸಿಕೊಳ್ಳಲು ಪುಷ್ಪಳಿಂದ ಸಾಧ್ಯ ಆಗುತ್ತದೆಯೋ? ಎನ್ನುವುದನ್ನು ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಆದರೆ ಆಕಾಶ್‌ನ ಅಜ್ಜಿ ಪುಷ್ಪಳನ್ನೂ ಮನಪೂರ್ವಕವಾಗಿ ಒಪ್ಪಿಕೊಂಡು ಬಿಟ್ಟಿದ್ದಾರೆ.


Click it and Unblock the Notifications











