Don't Miss!
- Sports
ಗ್ಲೆನ್ ಮ್ಯಾಕ್ಸ್ವೆಲ್ ಕೈಯಿಂದ ಆರೆಂಜ್ ಕ್ಯಾಪ್ ಕಸಿದುಕೊಂಡ ಧವನ್
- News
ಉತ್ತರ ಪ್ರದೇಶ ಕೊರೊನಾ ದಾಖಲೆ; ಭಾನುವಾರ ಲಾಕ್ಡೌನ್!
- Finance
ಕೊರೊನಾವೈರಸ್ ಎರಡನೇ ಅಲೆ: ಆರ್ಥಿಕ ಅನಿಶ್ಚಿತತೆಗೆ ಕಾರಣವಾಗಬಹುದು!
- Automobiles
ಆಫ್ಟರ್ ಮಾರ್ಕೆಟ್ ಬಾಡಿ ಕಿಟ್ನೊಂದಿಗೆ ಅಡ್ವೆಂಚರ್ ಬೈಕಿನಂತೆ ಮಾಡಿಫೈಗೊಂಡ ಮಹೀಂದ್ರಾ ಮೊಜೊ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿಫಲ ಹೇಗಿದೆ?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶಮಂತ್ ಇಷ್ಟ ಪಟ್ಟ ಹುಡುಗಿ ಇವರೇ: ಬ್ರೋ ಗೌಡ ಪಾಲಿಗೆ 'ಬಂಡೆ'ಯಾದ ಮಂಜು!
ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಬ್ರೋ ಗೌಡ (ಶಮಂತ್) ಸ್ಪರ್ಧಿಯೊಬ್ಬರನ್ನು ಲವ್ ಮಾಡುತ್ತಿರುವುದಾಗಿ ಮನೆಯ ಕೆಲವು ಸದಸ್ಯರ ಬಳಿ ಹೇಳಿಕೊಂಡಿದ್ದರು. ಶಮಂತ್ ಮನಸ್ಸು ಕದ್ದ ಆ ಹುಡುಗಿ ಯಾರಿರಬಹುದು ಎಂದು ಉಳಿದ ಸದಸ್ಯರು ಊಹಿಸುತ್ತಿದ್ದರು. ಇದೀಗ, ತಾನು ಇಷ್ಟ ಪಟ್ಟ ಹುಡುಗಿ ಯಾರೆಂದು ಖುದ್ದು ಬ್ರೋ ಗೌಡ ಬಹಿರಂಗಪಡಿಸಿದ್ದಾರೆ.
ಪ್ರೀತಿಸುತ್ತಿದ್ದೆ, ಆದರೆ ಮಂಜು ಪಾವಗಡ ಬಂಡೆಯಾಗಿದ್ದಾರೆ ಎಂದು ನಿರಾಸೆ ಹಂಚಿಕೊಂಡಿದ್ದಾರೆ. ಶಮಂತ್ ಲವ್ ವಿಚಾರ ಬಿಗ್ ಬಾಸ್ ಮನೆಯಲ್ಲಿ ನಾಲ್ಕು ಜನರಿಗೆ ಗೊತ್ತಾಗಿದೆ. ಅಷ್ಟಕ್ಕೂ, ಬ್ರೋ ಗೌಡ ಹೃದಯದರಸಿ ಯಾರು? ಶಮಂತ್ ತಮ್ಮ ಪ್ರೀತಿಯ ವಿಚಾರವನ್ನು ಆ ಹುಡುಗಿ ಬಳಿ ಹೇಳ್ತಾರಾ?
ಮೊದಲ ದಿನವೇ ಮಂಜು ಪಾವಗಡ ಹೃದಯ ಕದ್ದ ದಿವ್ಯ ಸುರೇಶ್

ಶಮಂತ್ ಲವ್ಸ್ ದಿವ್ಯಾ ಸುರೇಶ್?
ಬ್ರೋ ಗೌಡ ಸ್ವತಃ ತಿಳಿಸಿರುವಂತೆ 'ಮಿಸ್ ಇಂಡಿಯಾ ಸೌತ್' ವಿಜೇತೆ ದಿವ್ಯಾ ಸುರೇಶ್ ಅವರನ್ನು ಇಷ್ಟ ಪಡುತ್ತಿದ್ದಾರೆ. ಆದರೆ, ಶಮಂತ್ ಪಾಲಿಗೆ ಮಂಜು ಪಾವಗಡ ಬಂಡೆಯಾಗಿ ಎದುರು ನಿಂತಿದ್ದಾರೆ ಎಂದು ತಮ್ಮ ನಿರಾಸೆಯನ್ನು ಮನೆಯ ಇತರೆ ಸದಸ್ಯರ ಬಳಿ ಹೇಳಿಕೊಂಡಿದ್ದಾರೆ.

ಕಿಚ್ಚನ್‌ನಲ್ಲಿ ಶಮಂತ್ ಲವ್ ಸ್ಟೋರಿ ಚರ್ಚೆ
ಗೀತಾ ಭಟ್, ಚಂದ್ರಕಲಾ ಮೋಹನ್, ಧನುಶ್ರೀ ಹಾಗೂ ಶಮಂತ್ ನಾಲ್ಕು ಜನ ಕಿಚ್ಚನ್‌ನಲ್ಲಿರುವ ಸಂದರ್ಭದಲ್ಲಿ ಈ ವಿಚಾರ ಚರ್ಚೆಯಾಗಿದೆ. ಇದಕ್ಕೂ ಮುಂಚೆ ಈ ವಿಷಯ ನಿರ್ಮಲಾ ಮತ್ತು ಗೀತಾ ಭಟ್ ಇಬ್ಬರಿಗೆ ಮಾತ್ರ ತಿಳಿದಿತ್ತು. ಆದರೆ, ಹುಡುಗಿ ಯಾರೆಂದು ಸ್ಪಷ್ಟತೆ ಇರಲಿಲ್ಲ. ಕಿಚ್ಚನ್‌ನಲ್ಲಿ ನಡೆದ ಚರ್ಚೆಯಲ್ಲಿ ಶಮಂತ್ ತಾನು ಇಷ್ಟ ಪಡುತ್ತಿರುವ ಹುಡುಗಿ ದಿವ್ಯ ಎಂದು ಹೇಳಿದರು.
ಬಿಗ್ಬಾಸ್ ಮನೆಯಲ್ಲಿ ಪ್ರೇಮಕತೆ ಆರಂಭ: ಯಾರು 'ಬ್ರೋ ಗೌಡ'ನ ಪ್ರೇಯಸಿ?

ದಿವ್ಯ ಜೊತೆ ಮಂಜು ಕನೆಕ್ಟ್
ಮತ್ತೊಂದೆಡೆ ದಿವ್ಯ ಸುರೇಶ್ ಮತ್ತು ಮಂಜು ಪಾವಗಡ ಫ್ರೆಂಡ್‌ಷಿಪ್ ಗಟ್ಟಿಯಾಗುತ್ತಿದೆ. ಮಂಜುಪಾವಗಡ ಮತ್ತು ದಿವ್ಯ ಮದುವೆ ಆಗಿದೆ, ಅವರಿಬ್ಬರು ಗಂಡ ಹೆಂಡತಿ ಎಂದೆಲ್ಲ ಮನೆಯವರು ರೇಗಿಸಿದ ಘಟನೆಯೂ ಕಾಣಬಹುದು. ಮಂಜು ಸಹ ದಿವ್ಯಾ ಅವರ ಬಗ್ಗೆಯೇ ಹೆಚ್ಚು ಮಾತನಾಡುತ್ತಿರುತ್ತಾರೆ. ಹಾಗಾಗಿ, ದಿವ್ಯ ಮತ್ತು ಮಂಜು ನಡುವೆ ಸಂಥಿಂಗ್ ಕನೆಕ್ಟ್ ಆಗುತ್ತಿದ್ಯಾ ಎಂದು ಪ್ರೇಕ್ಷಕರು ಊಹಿಸುತ್ತಿದ್ದಾರೆ.

ತ್ರಿಕೋನ ಪ್ರೇಮಕಥೆ
ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಕಥೆ ಶುರುವಾದಂತಿದೆ. ದಿವ್ಯಾ ಸುರೇಶ್, ಮಂಜುಪಾವಗಡ ಹಾಗೂ ಬ್ರೋಗೌಡ ನಡುವೆ ಟ್ರಯಾಂಗಲ್ ಲವ್ ಸ್ಟೋರಿ ಹುಟ್ಟಿಕೊಂಡಿದೆ. ಈ ಮೂವರಲ್ಲಿ ಸೀರಿಯಸ್ ಲವ್ ಯಾವುದು, ಪ್ರಿ-ಪ್ಲಾನ್ ಲವ್ ಯಾವುದು ಎನ್ನುವುದು ಪ್ರೇಕ್ಷಕರ ನಿರ್ಧರಿಸಬೇಕಿದೆ.