ಹೋದ್ರೆ ಹೋಗ್ಲಿ ಬಿಡಿ ಎಂದ ಬ್ರೋ ಗೌಡ ಶಮಂತ್!

By Bhagya.s

ಬಿಗ್‌ ಬಾಸ್‌ ಖ್ಯಾತಿಯ ಬ್ರೋ ಗೌಡ ಅಲಿಯಾಸ್‌ ಶಮಂತ್ ಗೌಡ ಎಲ್ಲರಿಗೂ ಗೊತ್ತಿರುವ ಹುಡುಗ. ತಮ್ಮ ಹಾಡುಗಳಿಂದಲೇ ಖ್ಯಾತಿ ಪಡೆದವರು. ಬಿಗ್‌ ಬಾಸ್‌ ಸೀಸನ್‌ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಇವರು, ಇದೀಗ ಮತ್ತೊಂದು ಹಾಡನ್ನು ರಿಲೀಸ್ ಮಾಡಿದ್ದಾರೆ.

ಶಮಂತ್ ಗೌಡ ಹಲವು ಶಾರ್ಟ್‌ ಮೂವಿಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ತಾವೇ ಡೈರೆಕ್ಷನ್ ಅನ್ನು ಕೂಡ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಬಿಗ್‌ ಬಾಸ್‌ ಕಣ್ಣಿಗೆ ಬಿದ್ದ ಬ್ರೋ ಗೌಡ ಈ ರಿಯಾಲಿಟಿ ಶೋ ಮೂಲಕ ಮನೆ ಮಾತಾದರು.

ಬಿಗ್‌ ಬಾಸ್‌ ನಲ್ಲಿ ಶಮಂತ್ ಗೌಡ ಆಟ ಆಡುವುದಕ್ಕಿಂತಲೂ ಹೆಚ್ಚು ಹಾಡುಗಳನ್ನು ಬರೆದು ಹಾಡುತ್ತಿದ್ದರು. ಇನ್ನು ಬಿಗ್‌ ಬಾಸ್‌ ಮನೆಯಲ್ಲಿ ಲವರ್‌ ಬಾಯ್‌ ಎಂದು ಕೂಡ ಹೆಸರು ಪಡೆದುಕೊಂಡಿದ್ದರು. ಕೊನೆ ಕೊನೆಗೆ ಪ್ರಿಯಾಂಕಾ ತಿಮ್ಮೇಶ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂದು ಸುದ್ದಿ ಹರಡಿತ್ತು.

ಭಿನ್ನ ರೀತಿಯಲ್ಲಿ ಗಮನ ಸೆಳೆದ ಬ್ರೋ ಗೌಡ!

ಭಿನ್ನ ರೀತಿಯಲ್ಲಿ ಗಮನ ಸೆಳೆದ ಬ್ರೋ ಗೌಡ!

ಶಮಂತ್ ಗೌಡ ಬಿಗ್ ಬಾಸ್‌ ಮನೆಯಲ್ಲಿ ಆಟಕ್ಕಿಂತ ಜಾಸ್ತಿ ತಮ್ಮ ಹಾಡುಗಳಿಂದಲೇ ಖ್ಯಾತಿ ಪಡೆದವರು. ಬರೋಬ್ಬರಿ 113 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಶಮಂತ್, ಮೊದಲ ದಿನದಿಂದಲೂ ತಮ್ಮ ಅದೃಷ್ಟದಿಂದಲೇ ಬಿಗ್‌ ಬಾಸ್‌ ನಲ್ಲಿ ಉಳಿದುಕೊಂಡಿದ್ದರು. ಮೊದಲ ಹಾಗೂ ಎರಡನೇ ವಾರ ಬಿಗ್‌ ಬಾಸ್‌ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದರು. ಶಮಂತ್ ಆಟ ಚೆನ್ನಾಗಿ ಆಡುತ್ತಿರಲಿಲ್ಲವಾದರೂ, ಬಿಗ್‌ ಬಾಸ್‌ ಮನೆಯಲ್ಲಿ ಹೆಚ್ಚು ಕಾಲ ಉಳಿದುಕೊಂಡಿದ್ದರು. ಆಗಾಗ ಹಾಡುಗಳನ್ನು ಬರೆದು ಹಾಡುತ್ತಿದ್ದರು.

ವೆಬ್‌ ಸಿರೀಸ್ ಮಾಡಿದ್ದ ಶಮಂತ್ ಗೌಡ!

ವೆಬ್‌ ಸಿರೀಸ್ ಮಾಡಿದ್ದ ಶಮಂತ್ ಗೌಡ!

ಶಾರ್ಟ್‌ ಮೂವಿಗಳಲ್ಲಿ ನಟಿಸಿ, ಡೈರೆಕ್ಷನ್ ಮಾಡುತ್ತಿದ್ದ ಶಮಂತ್ ಸಿನಿಮಾ ಒಂದರಲ್ಲಿ ನಟಿಸಿದ್ದರು. ಇದರಲ್ಲಿ ತಮ್ಮ ಪಾತ್ರವನ್ನು ಕಟ್‌ ಮಾಡಲಾಗಿತ್ತು. ಹೀಗಾಗಿ ನೊಂದಿದ್ದ ಶಮಂತ್ ವೆಬ್‌ ಸೀರೀಸ್ ಒಂದನ್ನು ನಿರ್ಮಿಸಿದ್ದರು. ಇದರಲ್ಲಿ ಶಮಂತ್ ನಿಭಾಯಿಸಿದ್ದ ಪಾತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ಹೀಗೆ ಹಠಕ್ಕೆ ಬಿದ್ದು, ಶಮಂತ್ ಕೆಲಸ ಮಾಡುತ್ತಾರಂತೆ. ಇದೀಗ ಶಮಂತ್ 'ಗಜಾನನ ಆಂಡ್‌ ಗ್ಯಾಂಗ್' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಬಿಗ್‌ ಬಾಸ್‌ ನಿಂದ ಹೊರ ಬಂದ ಮೇಲೆ ಶಮಂತ್‌ಗೆ ನಟಿಸುವ ಅವಕಾಶಗಳು ಸಿಕ್ಕಿವೆ.

ಕನಸನ್ನು ನನಸು ಮಾಡಿಕೊಂಡ ಶಮಂತ್!

ಕನಸನ್ನು ನನಸು ಮಾಡಿಕೊಂಡ ಶಮಂತ್!

ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಮೇಲೆ ಶಮಂತ್ ಗೌಡ, ತಮ್ಮ ಹಲವು ವರ್ಷಗಳ ಕನಸನ್ನು ನನಸು ಮಾಡಿಕೊಂಡರು. ಅದೇನೆಂದರೆ, BMW ಕಂಪೆನಿಯ 525D ಕಾರನ್ನು ಖರೀದಿಸಿದರು. ಈ ಕಾರನ್ನು ಕಿಚ್ಚ ಸುದೀಪ್ ಅವರಿಗೆ ತೋರಿಸಿ, ಕಾರಿನ ಮೇಲೆ ಸುದೀಪ್ ಆಟೋಗ್ರಾಫ್ ಪಡೆದುಕೂಂಡಿದ್ದಾರೆ. ಇನ್ನು ಸುದೀಪ್‌ ಶಮಂತ್ ಕಾರನ್ನು ರೈಡ್‌ ತೆಗೆದುಕೊಂಡು ಹೋಗಿದ್ದರು. ಶಮಂತ್ ಗೌಡಗೆ ಚಿಕ್ಕ ವಯಸ್ಸಿನಿಂದಲೂ ಕಾರು ಖರೀದಿಸಬೇಕು ಎಂದು ಆಸೆ ಪಟ್ಟಿದ್ದರು. ಅದನ್ನು ಇತ್ತೀಚೆಗೆ ನೆರವೇರಿಸಿಕೊಂಡಿದ್ದಾರೆ.

ಹೊಸ ಆಲ್ಬಂ ಸಾಂಗ್ ರಿಲೀಸ್!

ಹೊಸ ಆಲ್ಬಂ ಸಾಂಗ್ ರಿಲೀಸ್!

ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಮೇಲೆ ಶಮಂತ್ ಗೌಡ ಅವರು ಮಳೆಯೇ ಸುರಿಯೇ ಎಂದು ಹಾಡಿ, ನಟಿಸಿ ಜನರನ್ನು ಮೆಚ್ಚಿಸಿದ್ದರು. ಇದೀಗ ಹೋದ್ರೆ ಹೋಗ್ಲಿ ಬಿಡಿ ಎಂದು ಹಾಡಿದ್ದು, ಈ ಆಲ್ಬಂ ಸಾಂಗ್ ಅನ್ನು ರಿಲೀಸ್ ಮಾಡಿದ್ದಾರೆ. ಇದರಲ್ಲಿ ಶಮಂತ್ ಅವರು ಪ್ಲೇ ಬಾಯ್‌ ಥರ ಕಾಣಿಸಿಕೊಂಡಿದ್ದಾರೆ. ಸಖತ್‌ ಹಾಡಿನ ಮೂಲಕ ಕಮ್‌ ಬ್ಯಾಕ್‌ ಮಾಡಿರುವ ಶಮಂತ್ ಹಾಡು ಈಗಾಗಲೇ ಲಕ್ಷಾಂತರ ವೀವ್ಸ್ ಪಡೆದಿದೆ.

More from Filmibeat

English summary
Bro Gowda Shamanth New Album Song Release In You Tube
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X