For Quick Alerts
  ALLOW NOTIFICATIONS  
  For Daily Alerts

  ಬಿಗ್‌ ಬಾಸ್‌ ಸೀಸನ್‌ 9ರಲ್ಲಿ ಇವರಿಬ್ಬರು ನನಗಿಷ್ಟ: ಬ್ರೋ ಗೌಡ

  |

  ಕನ್ನಡ ಕಿರುತೆರೆಯಲ್ಲಿ ಮತ್ತೊಂದು ಹೊಸ ಧಾರಾವಾಹಿ ಪ್ರಸಾರವಾಗಲು ಸಿದ್ಧವಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿಅಕ್ಟೋಬರ್ 10ರಿಂದ ಪ್ರತಿದಿನ ಸಂಜೆ 7ಗಂಟೆಗೆ 'ಭಾಗ್ಯಲಕ್ಷ್ಮೀ' ಎಂಬ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಪ್ರೋಮೋ ಮೂಲಕ ಪ್ರೇಕ್ಷಕರ ಕುತೂಹಲ ಹೆಚ್ಚಿಸಿರುವ 'ಭಾಗ್ಯಲಕ್ಷ್ಮೀ' ಧಾರಾವಾಹಿ ಹಲವು ಕಾರಣಗಳಿಂದ ವಿಶೇಷವಾಗಿದೆ.

  ನಿರೂಪಕಿ ಸುಷ್ಮಾ ಸುಮಾರು 10 ವರ್ಷಗಳ ಬಳಿಕ 'ಭಾಗ್ಯಲಕ್ಷ್ಮೀ' ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ವಾಪಸ್‌ ಆಗಿದ್ದಾರೆ. ಹಿರಿಯ ನಟಿ ಪದ್ಮಜಾ ರಾವ್‌ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಭಾಗ್ಯಲಕ್ಷ್ಮೀ ಧಾರಾವಾಹಿ ಉತ್ತಮ ಕಲಾವಿದರ ಬಗಳ ಹೊಂದಿದೆ. ಇನ್ನೂ ವಿಶೇಷವೆಂಬಂತೆ ಬಿಗ್ ಬಾಸ್‌ ಖ್ಯಾತಿಯ ಬ್ರೋಗೌಡ ಶಮಂತ್‌ 'ಭಾಗ್ಯಲಕ್ಷ್ಮೀ' ಧಾರಾವಾಹಿ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ.

  Bigg Boss 9: ಸಂಬರ್ಗಿ, ಅರುಣ್ ಸಾಗರ್‌ಗಿಂತಲೂ ಬೇಡಿಕೆಯ ವ್ಯಕ್ತಿ ರಾಕೇಶ್ ಅಡಿಗ!Bigg Boss 9: ಸಂಬರ್ಗಿ, ಅರುಣ್ ಸಾಗರ್‌ಗಿಂತಲೂ ಬೇಡಿಕೆಯ ವ್ಯಕ್ತಿ ರಾಕೇಶ್ ಅಡಿಗ!

  ಬ್ರೋಗೌಡ 'ಭಾಗ್ಯಲಕ್ಷ್ಮೀ' ಧಾರಾವಾಹಿ ಮೂಲಕ ಕಿರುತೆರೆಗೆ ಬರುತ್ತಿರುವ ಬಗ್ಗೆ ಫಿಲ್ಮಿಬೀಟ್‌ ಕನ್ನಡದ ಜೊತೆ ಮಾತನಾಡಿದ್ದಾರೆ. ನನ್ನಲ್ಲಿ ಈ ಬದಲಾವಣೆ ಯಾಕೆ ಎಂದರೆ ಧಾರಾವಾಹಿಗಾಗಿ. ಎರಡು ಮೂರು ವರ್ಷಗಳ ಹಿಂದೆಯೇ ಈ ಬದಲಾವಣೆ ಆಗಬೇಕಿತ್ತು. ಆದರೆ ಈಗ ಆಗಿದ್ದೀನಿ ಅಷ್ಟೇ. 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ನನ್ನದು ಸೆಕೆಂಡ್‌ ಲೀಡ್‌ ಪಾತ್ರ. ಈ ಬಗ್ಗೆ ತುಂಬಾ ಖುಷಿ ಇದೆ ಎಂದಿದ್ದಾರೆ.

  ' ಭಾಗ್ಯಲಕ್ಷ್ಮೀ'ಯಲ್ಲಿ ನಾನು ಅಮ್ಮನ ಮುದ್ದಿನ ಮಗ

  ' ಭಾಗ್ಯಲಕ್ಷ್ಮೀ'ಯಲ್ಲಿ ನಾನು ಅಮ್ಮನ ಮುದ್ದಿನ ಮಗ

  ಈ ಸ್ಟೋರಿ ಒಪ್ಪಿಕೊಳ್ಳಲು ಒಂದು ಕಾರಣ ಇದೆ. ಈ ಧಾರಾವಾಹಿ ಪಾತ್ರನೂ ಸಿಂಗರ್‌ ಹಾಗೂ ಸೆಲೆಬ್ರೆಟಿ ಹೀಗಾಗಿ ನಿಜ ಜೀವನಕ್ಕೆ ಹೋಲಿಕೆ ಆಗುತ್ತಿತ್ತು ಅದಕ್ಕೆ ಬೇಗ ಈ ಸ್ಟೋರಿಯನ್ನು ಒಪ್ಪಿಕೊಂಡೆ ಎಂದರು. ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತುಂಬಾ ಒಳ್ಳೆ ಸ್ಟೋರಿ ಇದೆ. ಈ ಧಾರಾವಾಹಿಯಲ್ಲಿ ನನ್ನ ಪಾತ್ರ ಹೇಗಂದರೆ ಎಲ್ಲರ ಜೊತೆ ಖುಷಿಯಲ್ಲಿ ಚೆನ್ನಾಗಿರುವ ಹುಡುಗ. ಅಮ್ಮನ ಮುದ್ದಿನ ಮಗ, ಒಳ್ಳೆ ಸಿಂಗರ್‌, ಫ್ಯಾಮಿಲಿಯಲ್ಲಿ ಎಲ್ಲರಿಗೆ ಬೇಕಾದ ಹುಡುಗನಾಗಿರುತ್ತಾನೆ. ಇವನಿಗೆ ಕೋಪ ಬಂದಿದೆ ಎಂದರೆ ಬೇರೆಯವರದ್ದೇ ತಪ್ಪು ಇರುತ್ತದೆ ಎನ್ನುವ ಒಬ್ಬ ಸಿಂಗರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದರು.

  ಈ ಧಾರಾವಾಹಿಯಲ್ಲಿ ತುಂಬಾ ಕಲಿತ್ತಿದ್ದೇನೆ

  ಈ ಧಾರಾವಾಹಿಯಲ್ಲಿ ತುಂಬಾ ಕಲಿತ್ತಿದ್ದೇನೆ

  ನನ್ನ ನಿಜ ಜೀವನಕ್ಕೂ 'ಭಾಗ್ಯಲಕ್ಷ್ಮೀ' ಧಾರಾವಾಹಿ ಪಾತ್ರಕ್ಕೂ ನನ್ನ ನಿಜ ಜೀವನಕ್ಕೂ ತುಂಬಾ ಹೋಲಿಕೆ ಇದೆ. ಆದರೆ ಇದರಲ್ಲಿ ಒಂದು ರಿಲೇಷನ್‌ಶಿಪ್‌, ಲವ್‌ ಅಂತೆಲ್ಲಾ ಇದೆ. ಅದು ಬಿಟ್ಟು ಉಳಿದದೆಲ್ಲ ನನಗೆ ಹೋಲಿಕೆ ಇದೆ ಎಂದರು. ಈ ಧಾರಾವಾಹಿಯಲ್ಲಿ ಹೆಚ್ಚಿನ ಹಿರಿಯ ಕಲಾವಿದರು ಇರುವುದರಿಂದ ಅವರಿಂದ ನಾನು ನೋಡಿ ಕಲಿಯುತ್ತಿದ್ದೇನೆ. ಈ ಧಾರಾವಾಹಿಯಲ್ಲಿ ತುಂಬಾ ಕಲಿತ್ತಿದ್ದೇನೆ. ಇದೊಂಥರಾ ಐಟಿ ಕೆಲಸ ತರ ದಿನಾ ರಜಾ ಹಾಕುವ ಹಾಗಿಲ್ಲ. ಈ ಕೆಲಸಕ್ಕೆ ಬದ್ಧತೆ ಬೇಕು. ಟೈಮ್‌ ಮ್ಯಾನೇಜ್‍ಮೆಂಟ್ ಕೂಟ ತುಂಬಾ ಮುಖ್ಯ ಎಂದರು.

  ಬಿಗ್‌ ಬಾಸ್‌ನಲ್ಲಿ ಮನೆಯಲ್ಲಿ ನಮ್ಮ ಗೆಳೆಯರೇ ಇದ್ದಾರೆ

  ಬಿಗ್‌ ಬಾಸ್‌ನಲ್ಲಿ ಮನೆಯಲ್ಲಿ ನಮ್ಮ ಗೆಳೆಯರೇ ಇದ್ದಾರೆ

  ಇನ್ನು ಬಿಗ್‌ ಬಾಸ್‌ ಸೀಸನ್‌ 8ರ ಸ್ಫರ್ಧಿಯಾಗಿದ್ದ ಶಮಂತ್‌, ಬಿಗ್‌ ಬಾಸ್‌ ಸೀಸನ್‌ 9 ರ ಬಗ್ಗೆ ಮಾತನಾಡಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 9 ನೋಡುತ್ತಿದ್ದೇನೆ. ಈಗ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿರುವ ಕಾರಣ ಬರಿ ಪ್ರೋಮೋಗಳನ್ನು ಹೆಚ್ಚಾಗಿ ನೋಡುತ್ತೇನೆ. ಈ ಬಾರಿ ಬಿಗ್‌ ಬಾಸ್‌ನಲ್ಲಿ ನಮ್ಮ ಗೆಳೆಯರೇ ಇದ್ದಾರೆ. ಈ ಧಾರಾವಾಹಿ ಶೂಟಿಂಗ್‌ ಇಲ್ಲ ಅಂದಿದ್ರೆ ನಾನು ಖಂಡಿತವಾಗಿಯೂ ಹೋಗುತ್ತಿದ್ದೆ ಎಂದರು.

  ಬಿಗ್‌ ಬಾಸ್‌ನಲ್ಲಿ ಇವರಿಬ್ಬರು ನನ್ನ ಫೇವರೇಟ್‌

  ಬಿಗ್‌ ಬಾಸ್‌ನಲ್ಲಿ ಇವರಿಬ್ಬರು ನನ್ನ ಫೇವರೇಟ್‌

  ಬಿಗ್‌ ಬಾಸ್‌ ಸೀಸನ್‌ 9ರ ಸ್ಫರ್ಧಿಗಳ ಬಗ್ಗೆ ಮಾತನಾಡಿದ ಅವರು, ಪ್ರಶಾಂತ್‌ ಸಂಬರ್ಗಿ ಅವರು ಹಾಗೆ ಇರಲಿಲ್ಲ, ದಿವ್ಯಾ ಉರುಡುಗ ಅವರು ಕೂಡ ಹಾಗೆ ಇರಲಿಲ್ಲ. ಇಬ್ಬರಲ್ಲೂ ಬದಲಾವಣೆ ಇದೆ. ದಿವ್ಯಾ ಉರುಡುಗ ಸೈಲೆಂಟ್‌ ಆಗಿದ್ದಾರೆ. ಗೇಮ್‌ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಪ್ರಶಾಂತ್‌ ಸಂಬರ್ಗಿ ಅವರು ಕೂಡ ಕೂಡಲೇ ಕೋಪ ಮಾಡಿಕೊಳ್ಳುತ್ತಿದ್ದಾರೆ. ತುಂಬಾ ಚಿಕ್ಕವರಾಗಿದ್ದಾರೆ ಅನಿಸುತ್ತಿದೆ. ತುಂಬಾ ಯಂಗ್‌ ಆಗಿದ್ದಾರೆ. ಈ ಸೀಸನ್‌ನಲ್ಲಿ ನನಗೆ ಸೈಕ್‌ ನವಾಜ್‌ ಹಾಗೂ ರಾಕೇಶ್‌ ಅಡಿಗ ಇಷ್ಟ ಇವರಿಬ್ಬರು ಫಿನಾಲೇ ವೀಕ್‌ನಲ್ಲಿ ಬರಬೇಕು ಎಂದರು.

  ದಿವ್ಯಾ-ಸಂಬರ್ಗಿ ಮನಸ್ತಾಪದಿಂದ ನನಗೆ ಅವಕಾಶ ಸಿಗಲಿಲ್ಲ: ಐಶ್ವರ್ಯಾ ಪಿಸೆದಿವ್ಯಾ-ಸಂಬರ್ಗಿ ಮನಸ್ತಾಪದಿಂದ ನನಗೆ ಅವಕಾಶ ಸಿಗಲಿಲ್ಲ: ಐಶ್ವರ್ಯಾ ಪಿಸೆ

  English summary
  Bro Gowda Shamanth acted in Bhagyalakshmi serial and he reacted on Bigg boss season 9 contestants.
  Wednesday, October 5, 2022, 16:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X