Brundavana: ಪುಷ್ಪ ಮಾಯಗಾತಿಯಂತೆ!; ಸಹನಾಗಾಗಿ ಪುಷ್ಪಳನ್ನು ಮನೆಯಿಂದ ಹೊರಹಾಕಲು ಹೊರಟ ಆಕಾಶ್!
ಪುಷ್ಪ ಒಳ್ಳೆತನ ಆಕೆಯ ಗಂಡನಿಗೆ ಇನ್ನೂ ಅರ್ಥ ಆಗಿಲ್ಲ. ಆದರೆ, ಆಕೆಯ ಮನೆಯವರು ಮಾತ್ರ ಪುಷ್ಪಳನ್ನು ತಲೆಯಲ್ಲಿ ಹೊತ್ತು ಮೆರೆಸುತ್ತಾ ಇದ್ದಾರೆ. ಆಕೆಗೆ ಮನೆ ನಿರ್ವಹಣೆ ಮಾಡುವ ಹೊಸ ಜವಾಬ್ದಾರಿಯನ್ನು ಅಮ್ಮಮ್ಮ ನೀಡುತ್ತಾರೆ. ಆದರೆ ಇದು ಯಾವುದನ್ನು ಆಕಾಶ್‌ಗೆ ಸಹಿಸಲು ಆಗುವುದಿಲ್ಲ . ಪುಷ್ಪ ಇಷ್ಟ ಇಲ್ಲದೆ ಇದ್ದರೂ ಆಕೆಯ ಜೊತೆ ಮೃದುವಾಗಿ ನಡೆದುಕೊಳ್ಳುತ್ತಾನೆ.
ಆದರೆ, ಆತನ ಗೆಳೆಯನ ಬಳಿ ಬಂದು ಪುಷ್ಪ ಒಬ್ಬಳು ಮಾಯಗಾತಿ ಎಂದು ಹೇಳಿದ್ದಾನೆ. ಆಕೆಯನ್ನು ಮನೆಯವರು ಅಷ್ಟೊಂದು ನಂಬಿದ್ದಾರೆ. ಪುಷ್ಪ ಏನೇ ಮಾಡಿದರೂ ಸರಿ ಎನ್ನುವುದು ಮನೆಯವರ ಭಾವನೆ ಎಂದು ತನ್ನ ಸ್ನೇಹಿತನ ಬಳಿ ಹೇಳಿಕೊಂಡು ಇರುತ್ತಾನೆ. ಇದಕ್ಕೆ ಆಕಾಶ್ ಸ್ನೇಹಿತ ಹೇಳುತ್ತಾನೆ ನಿನಗೆ ಅತ್ತಿಗೆಯ ಮೇಲೆ ಅನುಮಾನ. ಮನೆಯವರೆಲ್ಲ ಅದೆಷ್ಟು ಅತ್ತಿಗೆಯನ್ನು ನಂಬಿದ್ದಾರೆ. ಆದರೆ ನೀನು ಯಾಕೆ ಅನುಮಾನ ಪಡುತ್ತಿಯಾ? ಎಂದು ಕೇಳುತ್ತಾನೆ.

ನೀನು ಸಹನಳನ್ನು ಮನಸ್ಸಿನಿಂದ ಕಿತ್ತು ಹಾಕು. ಇಲ್ಲವಾದರೆ ನಿನಗೆ ಅತ್ತಿಗೆಯ ಮೇಲೆ ಪ್ರೀತಿ ಹುಟ್ಟಲ್ಲ ಎಂದು ಹೇಳುತ್ತಾನೆ . ಆದರೆ ಆಕಾಶ್‌ದ್ದು ಬೇರೆಯೇ ಕಥೆ. ಆತನ ಮಾತೆಂದರೆ ಒಬ್ಬರ ಮೇಲೆ ಪ್ರೀತಿ ಇರುವಾಗ, ಬೇರೆಯವರ ಮೇಲೆ ಪ್ರೀತಿ ಬರಲು ಅದು ಹೇಗೋ ಸಾಧ್ಯ ಎಂದು ತನ್ನ ಗೆಳೆಯನನ್ನು ಪ್ರಶ್ನೆ ಮಾಡುತ್ತಾನೆ ಆಕಾಶ್. ಆದರೆ, ಆತನ ಗೆಳೆಯ ಹೇಳುವುದು ಏನೆಂದರೆ ಪುಷ್ಪಳನ್ನು ಮದುವೆ ಆಗಿದ್ದೀಯಾ ಆಕೆಯನ್ನು ಚೆನ್ನಾಗಿ ನೋಡಿಕೋ. ಆಕೆಗೆ ಯಾವ ತೊಂದರೆ ಬಾರದ ಹಾಗೆ ನೋಡಿಕೋ ಇದರಿಂದ ನಿನ್ನ ಮನೆ ಮಂದಿಗೆ ಬಹಳ ಖುಷಿ ಆಗುವುದುಂತು ಸತ್ಯ ಎಂದು ಹೇಳುತ್ತಾರೆ.
ಪುಷ್ಪ ಬಗ್ಗೆ ಆಕಾಶ್ ಮನದಲ್ಲಿದೆ ಬೇರೆ ಯೋಚನೆ
ಆಕಾಶ್ ಸಹನಾಳನ್ನು ಬಿಟ್ಟು ಪುಷ್ಪ ಜೊತೆ ಇರಲು ಇಷ್ಟ ಪಡುವುದಿಲ್ಲ. ಆತ ತಾನು ಪ್ರೀತಿ ಮಾಡಿದಾಕೆಯನ್ನು ಬಿಟ್ಟು ಬೇರೆ ಹೋಗುವುದಿಲ್ಲ ಎನ್ನುವ ಮಾತು ಬಿಟ್ಟರೆ ಇನ್ನೇನು ಇಲ್ಲ. ಇನ್ನು ಆಕಾಶ್ ಗೆಳೆಯ ಆತನಿಗೆ ಒಂದು ಕಿವಿ ಮಾತು ಹೇಳುತ್ತಾನೆ. ಮೊನ್ನೆ ಮಾವ ಮಾತಿನ ಭರದಲ್ಲಿ ಮನೆ ಬಿಟ್ಟು ಹೋಗುತ್ತೇನೆ ಎಂದು ಹೇಳಿದರು. ಆದರೆ ಆಗ ಅಜ್ಜಿ ಬಹಲ ಬೇಸರ ಮಾಡಿಕೊಂಡು ಇದ್ದರೂ ಆದರೆ ಇದೀಗ ನೀನು ಪುಷ್ಪನ ಇಷ್ಟ ಪಟ್ಟಿದ್ದಿಯಾ ಎನ್ನುವ ಕಾರಣಕ್ಕೆ ನಿನಗೆ ಮದುವೆ ಮಾಡಿಸಿದರು. ಆದರೆ ಆಕೆಯನ್ನು ಮನೆಯಿಂದ ಹೊರ ಹಾಕಿದರೆ ಅಜ್ಜಿ ಮಾತ್ರ ಇದೆಲ್ಲವನ್ನೂ ನೋಡಿಕೊಂಡು ಇರುವುದಿಲ್ಲ. ಅಜ್ಜಿಗೆ ಇದೆಲ್ಲ ಸಹಿಸಲು ಆಗುವುದು ಇಲ್ಲ ಎಂದು ಸ್ನೇಹಿತ ಆಕಾಶ್‌ಗೆ ತಿಳಿ ಹೇಳುತ್ತಾನೆ.

ಆಕಾಶ್‌ನನ್ನು ಹಚ್ಚಿಕೊಂಡಿರುವ ಪುಷ್ಪ
ಇತ್ತ, ಪುಷ್ಪ ಆಕಾಶ್‌ನನ್ನು ಬಹಳ ಪ್ರೀತಿ ಮಾಡುತ್ತಾ ಇದ್ದಾಳೆ. ಆಕೆಗೆ ಆಕಾಶ್ ಎಂದರೆ ಜೀವ. ಆದರೆ ಆಕಾಶ್ ಬೇರೆ ಹುಡುಗಿಯ ಸಹವಾಸದಲ್ಲಿ ಇದ್ದಾನೆ ಎಂಬುವುದು ತಿಳಿದರೆ ಪುಷ್ಪ ಮನಸ್ಸು ಒಡೆದು ಹೋಗುವುದಂತು ಸತ್ಯ.


Click it and Unblock the Notifications











