Brundavana: ಹಳ್ಳ ಹಿಡಿಯುತ್ತಿದೆ 'ಬೃಂದಾವನ' ಸ್ಟೋರಿ, ಆಕಾಶ್-ಪುಷ್ಪ ಗೋಳಿನ ಕಥೆ ನೋಡಿ ಬೇಸರಪಟ್ಟ ಧಾರಾವಾಹಿ ವೀಕ್ಷಕರು

By Poorva

ಮೊದಲ ದಿನದಿಂದಲೇ ವೀಕ್ಷಕರು ಬಹಳ ಕಾತರತೆಯಿಂದ ನೋಡುತ್ತಾ ಬಂದ ಧಾರಾವಾಹಿ ಬೃಂದಾವನ. ಆದರೆ ಇತ್ತೀಚಿನ ದಿನಗಳಲ್ಲಿ ಅದ್ಯಾಕೋ ಹಳ್ಳ ಹಿಡಿಯುತ್ತಿದೆ. ಕೂಡು ಕುಟುಂಬದ ಫ್ಯಾಮಿಲಿ ಇದೀಗ ಕಾಣ ಸಿಗುವುದು ಬಲು ಅಪರೂಪ. ಆದರೆ, ಧಾರಾವಾಹಿಯಲ್ಲಿ ಇದನ್ನು ಕಾಣಬಹುದು ಎಂದುಕೊಂಡ ಜನರಿಗೆ ನಿರಾಸೆ ಆಗಿದೆ. ಆಕಾಶ್ ಹಾಗೂ ಪುಷ್ಪ ಜೀವನ ಬರು ಬರುತ್ತಾ ಹಳ್ಳ ಹಿಡಿಯುತ್ತಿದೆ.

ಇದರಿಂದ ವೀಕ್ಷಕರಿಗೆ ಬಹಳ ಬೇಸರ ಆಗುತ್ತಿದೆ. ಪುಷ್ಪ ಅತ್ತಿಗೆ ಮಾಡಿದ ಒಂದೇ ಒಂದು ತಪ್ಪು ಕೆಲಸಕ್ಕೆ ಪುಷ್ಪ ಕಷ್ಟ ಅನುಭವಿಸುವ ಹಾಗೆ ಆಗಿದೆ. ತವರು ಮನೆಯಲ್ಲಿ ಪುಷ್ಪ ಬಹಳ ನೋವಿನ ದಿನವನ್ನೇ ಕಳೆದಿದ್ದಳು. ಆಕೆಗೆ ಗಂಡನ ಮನೆಯಲ್ಲಿ ಆದರೂ ಖುಷಿ ಸಿಗಬಹುದು ಎನ್ನುವ ಆಸೆ ಇತ್ತು ಆದರೆ ಅದು ಕೂಡ ನುಚ್ಚು ನೂರಾಗಿದೆ. ಆಕಾಶ್ ಪುಷ್ಪಳನ್ನ ನಡೆಸಿಕೊಂಡು ಇರುವ ರೀತಿ ನೋಡಿದರೆ ಬಹಳ ಬೇಸರ ಎನ್ನಿಸುತ್ತಿದೆ. ಬೃಂದಾವನ ಧಾರವಾಹಿ ಹೀರೋ ಬದಲಾವಣೆ ಆದ ಬಳಿಕ ವೀಕ್ಷಕರು ಅಷ್ಟಾಗಿ ಧಾರಾವಾಹಿಯನ್ನು ಮೆಚ್ಚುತ್ತಿಲ್ಲ.

Brundavana kannada serial 24th December written update.

ಹೀರೋ ಬದಲಾವಣೆ ಮಾಡಿದ್ದಕ್ಕೆ ಎಲ್ಲರಿಗೂ ಬಹಳ ಸಿಟ್ಟಿತ್ತು. ಆದರೆ ಇದೀಗ ಆಕಾಶ್ ಹಾಗೂ ಪುಷ್ಪ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡು ಇರುವುದು ಕೂಡ ವೀಕ್ಷಕರಲ್ಲಿ ಸಹಿಸಲು ಆಗುತ್ತಿಲ್ಲ. ಇದನ್ನೆಲ್ಲ ನೋಡಿದ ಸೀರಿಯಲ್ ಪ್ರೇಮಿಗಳು ಹೆಸರಿಗಷ್ಟೇ ಬೃಂದಾವನ ಎಂದು ಮನದಲ್ಲಿ ಗುಣಗುತ್ತಿದ್ದಾರೆ. ಇನ್ನು ಆಕಾಶ್ ಮನೆ ಮಂದಿಯ ಬಳಿ ದಾಂಪತ್ಯ ಜೀವನದ ಬಗ್ಗೆ ತಿಳಿಸಲು ಮುಂದಾಗುತ್ತಾನೆ.

ಪುಷ್ಪ ಮಾತಿಗೆ ಆಕಾಶ್ ಶಾಕ್

ಆದರೆ ಅದನ್ನು ಹೇಳಲು ಆಗದೆ ತಡಕಾಡುತ್ತ ಇರುವಾಗ ಪುಷ್ಪ ಆಕಾಶ್ ವಿಧ್ಯಾಭ್ಯಾಸದ ಬಗ್ಗೆ ಮಾತನಾಡುತ್ತಾಳೆ. ಇದನ್ನು ಕೇಳಿದ ಆಕಾಶ್ ಗೆ ಶಾಕ್ ಆಗುತ್ತದೆ ಆತ ಏನೋ ಹೇಳಲು ಮುಂದಾಗುತ್ತಾನೆ. ಆದರೆ, ಅದ್ಯಾವುದನ್ನೂ ಕೇಳಲು ಹೇಳಲು ಬಿಡುವುದಿಲ್ಲ. ಪುಷ್ಪ ಹೇಳಿದ ಮಾತು ಕೇಳಿ ಮನೆ ಮಂದಿಗೆ ಖುಷಿ ಆಗುತ್ತದೆ. ಆದರೆ ಆಕಾಶ್ ಮಾತ್ರ ಸಪ್ಪೆ ಮುಖ ಹಾಕಿಕೊಂಡು ಇರುತ್ತಾನೆ. ಬೃಂದಾವನ ಧಾರಾವಾಹಿ ಸೋಮವಾರದಿಂದ ಶನಿವಾರದ ವರೆಗೆ ರಾತ್ರಿ 8 ಗಂಟೆಗೆ ತೆರೆಗೆ ಬರುತ್ತಿದೆ.

Brundavana kannada serial 24th December written update.

ಪುಷ್ಪ ತವರು ಮನೆಯಲ್ಲಿ ನಟನೆ ಮಾಡಿದ ಆಕಾಶ್

ಪುಷ್ಪನ ತವರು ಮನೆಗೆ ಹೋಗಿದ್ದ ಆಕಾಶ್ ಹಾಗೂ ಪುಷ್ಪಗೆ ಉತ್ತಮ ಆತಿಥ್ಯ ದೊರಕಿದೆ. ತನ್ನ ತಂಗಿ ಹೋದ ಮನೆಯಲ್ಲಿ ಆದರೂ ಖುಷಿಯಾಗಿ ಇದ್ದಾಳಲ್ವ ಎಂದು ಪುಷ್ಪ ಅಣ್ಣ ಬಹಳ ಖುಷಿ ಪಡುತ್ತಾರೆ. ಬಳಿಕ ಅವರನ್ನು ಉಪಚರಿಸಿ ಕಳುಹಿಸಿಕೊಡುತ್ತಾರೆ. ಮೊದಲ ದಿನ ಆಕಾಶ್ ಪುಷ್ಪ ಜೊತೆ ಬಹಳ ರೂಡ್ ಆಗಿ ಮಾತನಾಡುತ್ತಾರೆ.

ಆಕಾಶ್ ಒಳ ಮನಸ್ಸು ಅರಿಯದಷ್ಟು ಮುಗ್ಧೆ ಆಗಿರುವ ಪುಷ್ಪ

ಅದಾದ ಬಳಿಕ ಪುಷ್ಪ ಜೊತೆ ಆಕಾಶ್ ನಾಟಕೀಯವಾಗಿ ಮಾತನಾಡುತ್ತಾನೆ. ಇದನ್ನು ನೋಡಿ ಪುಷ್ಪ ಗೆ ಆಶ್ಚರ್ಯ ಆಗುತ್ತದೆ. ಇನ್ನು ಇದೆ ರೀತಿ ನಡೆದುಕೊಂಡ ಆಕಾಶ್ ಒಳ ಮನಸ್ಸು ಅರಿವಾಗದೆ ಇರುವಷ್ಟು ಮುಗ್ಧಳಾಗಿ ಇರುತ್ತಾಳೆ ಪುಷ್ಪ. ಇನ್ನು ಮನೆಯವರ ಮುಂದೆಯಲ್ಲಾ ಬಹಳ ಖುಷಿಯಲ್ಲಿ ಇರುತ್ತಾಳೆ. ಇದನ್ನ ತಿಳಿದ ಮನೆ ಮಂದಿ ಕೂಡ ಇವರ ದಾಂಪತ್ಯ ಚೆನ್ನಾಗಿ ಇದೆ. ಇಬ್ಬರು ಖುಷಿಯಲ್ಲಿ ಇದ್ದಾರೆ ಎಂದು ಕೊಂಡು ಇರುತ್ತಾರೆ . ಆಕಾಶ್ ನಿರ್ಧಾರ ಕೇಳಿ ಪುಷ್ಪ ಮೇಲೆ ಇನ್ನಷ್ಟು ಖುಷಿ ಪಡುತ್ತಾರೆ ಮನೆ ಮಂದಿ. ಇನ್ನು ಅಮ್ಮಮ್ಮನ ಬಳಿ ಎನು ಹೇಳಬೇಕೋ ಅಂದುಕೊಂಡು ಇದ್ದನ್ನೋ ಆದನ್ನೂ ಹೇಳಲು ಆಗದೆ ತಡಕಾಡುತ್ತ ಇರುತ್ತಾನೆ.

More from Filmibeat

English summary
Brundavana serial 24th December written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X