Brundavana: ಗಿರಿಜಾ ಎಂಬ ಖಡಕ್ ಅತ್ತಿಗೆ.. ಬೃಂದಾವನ ನಟಿ ಅನುಪಲ್ಲವಿ ಗೌಡ ನಟನೆಗೆ ಮಿಶ್ರ ಪ್ರತಿಕ್ರಿಯೆ!

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬೃಂದಾವನ' ಧಾರಾವಾಹಿ ಇತ್ತೀಚೆಗೆ ಬಹಳಷ್ಟು ಕಾರಣಗಳಿಗೆ ಸದ್ದು ಮಾಡಿದೆ. ಮುಖ್ಯವಾಗಿ ಧಾರಾವಾಹಿ ಆರಂಭವಾದ ಕೆಲವೇ ವಾರಗಳಲ್ಲಿ ನಾಯಕನನ್ನೇ ಬದಲಾಯಿಸಿದ ಕಾರಣಕ್ಕೆ, ಧಾರಾವಾಹಿ ತಂಡದ ಈ ನಿರ್ಧಾರದ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಿದೆ.

ಬಿಗ್ ಬಾಸ್ ಸ್ಪರ್ಧಿ 21 ವರ್ಷದ ಗಾಯಕ ವಿಶ್ವನಾಥ್ ನಟಿಸಿದ ಮೊದಲ ಧಾರಾವಾಹಿ ಇದಾಗಿತ್ತು. ಆದರೆ, ನಟನೆಗೆ ಬಂದ ಕೆಲವೇ ವಾರಕ್ಕೆ ನಾಯಕನನ್ನು ಬದಲಾಯಿಸಿರುವ ಧಾರಾವಾಹಿ ತಂಡ ಬಹಳಷ್ಟು ಆಕ್ರೋಶಕ್ಕೆ ಗುರಿಯಾಗಿದೆ.

brundavana-serial-actor-anupallavi-gowda

ಇದೆಲ್ಲದರ ಹೊರತಾಗಿ ಧಾರಾವಾಹಿಯಲ್ಲಿ ಮುಖ್ಯವಾದ ಒಂದು ಪಾತ್ರ ಜನರನ್ನು ಚರ್ಚೆಗೆ ಒಳಪಡಿಸಿದೆ. ಅದು ಧಾರಾವಾಹಿ ನಾಯಕಿ ಪುಷ್ಪ ಅವರ ಅತ್ತಿಗೆಯ ಪಾತ್ರ. ಹಣಕ್ಕಾಗಿ ಜೀವ ಬಿಡುವ ಬೊಂಬಾಯಿ ಅತ್ತಿಗೆಯ ಪಾತ್ರದಲ್ಲಿ ನಟಿ ಅನುಪಲ್ಲವಿ ಗೌಡ ಕಾಣಿಸಿಕೊಂಡಿದ್ದಾರೆ. ಆದ್ರೀಗ ಅವರ ನಟನೆ ಹೇಗಿದೆ? ಜನ ಫಿದಾ ಆಗಿದ್ದಾರಾ? ಅನ್ನೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಅಂದ ಹಾಗೆ ಹಣಕ್ಕಾಗಿ ಏನನ್ನು ಬೇಕಾದರೂ ಮಾಡಲು ತಯಾರು ಇರುವ ಬಡ ಮನೆಯ ಈ ಹೆಣ್ಣುಮಗಳು ಗಿರಿಜಾ ತನ್ನ ನಾದಿನಿಯನ್ನೇ ಯಾರಿಗೆ ಬೇಕಾದರೂ ಮದುವೆ ಮಾಡಿಕೊಡಲು ಗಿರಿಜಾ ಪಾತ್ರ ತಯಾರಾಗಿದ್ದಾಳೆ. ಇದೇ ಪಾತ್ರದಲ್ಲಿ ಅನುಪಲ್ಲವಿ ಗೌಡ ನಟಿಸುತ್ತಿದ್ದಾರೆ.

ಇಂತಹ ಒಂದು ಸಂದರ್ಭದಲ್ಲಿ ನಾದಿನಿ ಪುಷ್ಪಾಳನ್ನು ಶ್ರೀಮಂತ ಮನೆಗೆ ಕೊಡುವ ಹುನ್ನಾರ ಹಾಕಿದ್ದಾಳೆ. ಈ ಮೂಲಕ ಆ ಮನೆಯಿಂದ ಹಣವನ್ನು ಪಡೆಯಬಹುದೆಂಬ ಯೋಚನೆ ಗಿರಿಜಾಳದ್ದು. ಅಂತೆಯೇ ಎರಡು ಕೋಟಿ ಡಿಮಾಂಡ್ ಮಾಡಿರುವ ಈಕೆ ಈಗಾಗಲೇ ಒಂದು ಕೋಟಿಯನ್ನು ಪಡೆದು ಮದುವೆ ತಯಾರಿಯಲ್ಲಿ ಮುಳುಗಿದ್ದಾಳೆ. ಮಾತು ನಡೆ, ನುಡಿ, ಕುಹಕ ಎಲ್ಲದರಲ್ಲಿಯೂ ಹಣದ ದಾಹ, ಆಸೆ ಬರುಕುತನವನ್ನು ತೋರಿಸುವಂತ ಈ ಪಾತ್ರಕ್ಕೆ ಜೀವ ತುಂಬುತ್ತಿರುವ ಅನುಪಲ್ಲವಿ ಗೌಡ ಅವರನ್ನು ಪ್ರೇಕ್ಷಕರು ಕೂಡಾ ಪ್ರಶ್ನಿಸಿದ್ದಾರೆಯಂತೆ.

brundavana-serial-actor-anupallavi-gowda

ನೀವು ನಿಜ ಜೀವನದಲ್ಲೂ ಇಷ್ಟೇ ಘಾಟಿನಾ? ಎಂಬ ಪ್ರಶ್ನೆಗೆ ಇಷ್ಟೊಂದು ಘಾಟಿ ಅಲ್ಲದಿದ್ದರೂ ಸ್ವಲ್ಪ ಘಾಟಿನೇ ಎಂದು ಉತ್ತರಿಸಿದ್ದಾರೆಯಂತೆ ನಟಿ ಅನುಪಲ್ಲವಿ ಗೌಡ. ಅಂದ ಹಾಗೆ ನಟಿ ಅನುಪಲ್ಲವಿ ಗೌಡ ಅವರಿಗೆ ಇದೇನು ಮೊದಲ ಧಾರಾವಾಹಿ ಅಲ್ಲ. ಈ ಮೊದಲು ಅವರು 'ಪರ್ವ', 'ಹೂ ಮಳೆ', 'ನಮ್ಮನೆ ಯುವರಾಣಿ' ಧಾರಾವಾಹಿಗಳ ಜೊತೆಗೆ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಅದಕ್ಕೂ ಮೊದಲು ರಂಗಭೂಮಿಯಲ್ಲಿ ವರ್ಷಗಳಿಂದ ಅನುಭವ ಇರುವ ಈಕೆ ಹಲವಾರು ನಾಟಕಗಳಲ್ಲಿ ನಟಿಸಿರುವುದಲ್ಲದೇ ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಕೂಡ ಹೌದು. ಸೋಶಿಯಲ್ ಮೀಡಿಯಾದಲ್ಲೂ ಬಹಳಷ್ಟು ಆ್ಯಕ್ಟೀವ್ ಇರುವ ಇವರು ತಮ್ಮ ಧಾರಾವಾಹಿ ತಂಡದೊಂದಿಗೆ ಮಾಡುವ ಮೋಜು ಮಸ್ತಿಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

ಇವರ ಪಾತ್ರವನ್ನು ನೋಡಿ ಎಷ್ಟು ನೈಜ ಎಂದು ಹೊಗಳಿರುವಂತೆಯೇ ಇದೇನಪ್ಪಾ ಇಷ್ಟೊಂದು ಅತಿಯಾದ ಹಣದ ದಾಹ ಎಂದು ತೆಗಳಿರುವ ಜನರೂ ಇದ್ದಾರೆ. ಒಟ್ಟಿನಲ್ಲಿ ಒಂದು ಮಿಶ್ರ ಪ್ರತಿಕ್ರಿಯೆ ಒಂದಿಗೆ ಜನರಿಗೆ ಹತ್ತಿರವಾಗುತ್ತಿದ್ದಾರೆ ನಟಿ ಅನುಪಲ್ಲವಿ ಗೌಡ ಎಂದರೆ ತಪ್ಪಾಗಲ್ಲ. ಇನ್ನು ಈ ಮೊದಲು ಅನುಪಲ್ಲವಿ ಗೌಡ ಅವರು ಮಾಡಿರುವ ಧಾರವಾಹಿಗಳಿಗಿಂತಲೂ, ಅಭಿನಯಿಸಿರುವಂತಹ ಪಾತ್ರಗಳಿಂದಲೂ ಈ ಧಾರಾವಾಹಿ ಈಕೆಗೆ ಹೆಚ್ಚಿನ ಹೆಸರು ಹಾಗೂ ಪಾಪ್ಯುಲಾರಿಟಿಯನ್ನು ಕೊಡುತ್ತಿದೆ ಎನ್ನುವುದು ದಿಟ.

More from Filmibeat

English summary
Anupallavi Gowda who attracted attention with her negative role
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X