ಒತ್ತಾಯಕ್ಕೆ ಮಣಿದು ಬೃಂದಾವನ ಧಾರಾವಾಹಿ ಹೀರೋನನ್ನು ಬದಲಾಯಿಸಿತೇ ಕಲರ್ಸ್ ಕನ್ನಡ! ಏನಿದು ಗಾಸಿಪ್?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ ಬೃಂದಾವನ ಉತ್ತಮವಾಗಿ ಮೂಡಿ ಬರುತ್ತಿದೆ. ಈ ಧಾರವಾಹಿಯಲ್ಲಿ ನಾಯಕ ನಟನಾಗಿ ನಟಿಸುತ್ತಿರುವ ಆಕಾಶ್, ಬಿಗ್ ಬಾಸ್ ಸ್ಪರ್ಧಿಯಾಗಿ ಬಂದಿದ್ದ, ಗಾಯಕ ವಿಶ್ವನಾಥ್ ಹಾವೇರಿ. ತಮ್ಮ ಪಾತ್ರಕ್ಕೆ ತಕ್ಕ ಹಾಗೆ ನಟನೆಯನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.. ಧಾರವಾಹಿ ಕೂಡ ಇದೀಗ 25 ಸಂಚಿಕೆಯನ್ನು ಪೂರ್ಣಗೊಳಿಸಿದೆ.
ಆದರೆ ಇದೀಗ ಧಾರಾವಾಹಿ ಪ್ರೇಮಿಗಳು ಒಂದು ಮಾತು ಹೇಳುತ್ತಾ ಇದ್ದಾರೆ. ಹೌದು ಧಾರವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ.. ಆದರೆ ನಾಯಕ ನಟ ಬಹಳ ಚಿಕ್ಕವರ ಹಾಗೆ ಕಾಣಿಸುತ್ತ ಇದ್ದಾರೆ.. ಅವರು ನಾಯಕ ನಟಿಗಿಂತಲು ಬಹಳ ಚಿಕ್ಕವರ ಹಾಗೆ ಕಾಣಿಸುತ್ತಾ ಇದ್ದಾರೆ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.. ಆದರೆ ಇದೀಗ ದಿಢೀರ್ ಆಗಿ ನಾಯಕ ನಟ ಬದಲಾಗುತ್ತಾ ಇದ್ದಾನೆ ಎನ್ನುವ ವದಂತಿ ಕೂಡ ಹರಡಿದೆ.

ಸೀರಿಯಲ್‌ನಲ್ಲಿ ಹೀರೋ ಮದುವೆ ಸಿದ್ಧತೆ ಜೋರಾಗಿದೆ. ಹೀರೋ ಮದುವೆ ನಿರೀಕ್ಷೆಯಲ್ಲಿ ಜನರು ಕಾಯುತ್ತಿದ್ದಾರೆ. ಇದಾದ ಬಳಿಕ ನಾಯಕ ನಟನೆ ಬದಲಾವಣೆ ಮಾಡುತ್ತಿರುವ ಚರ್ಚೆಗಳು ಆಗುತ್ತಿದೆ. ಆರಂಭದಿಂದಲೂ ವಿಶ್ವನಾಥ್ ಬಹಳ ಚಿಕ್ಕವರಾಗಿ ಕಾಣಿಸುತ್ತಿದ್ದಾರೆ. ಈ ಕಾರಣದಿಂದ ಆಗಿ ಬೇರೆ ನಾಯಕ ನಟ ಬರುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ. ಈ ಬಗ್ಗೆ ಧಾರಾವಾಹಿ ತಂಡದವರು ಏನು ಮಾತನಾಡಿಲ್ಲ.. ಆದರೂ ಜನರು ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.
ನೋಡುಗರನ್ನು ಸೆಳೆಯುತ್ತಿದೆ ಬೃಂದಾವನ ಧಾರವಾಹಿ
ಪುಷ್ಪ ಜೊತೆ ಮದುವೆ ಆದ ಬಳಿಕ ನಾಯಕ ನಟನನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ಚರ್ಚೆ ಈಗಾಗಲೇ ಆಗುತ್ತಿದೆ. ಬೃಂದಾವನ ಧಾರವಾಹಿ ಜನರಿಗೆ ಹತ್ತಿರವಾಗಿದ್ದು ಈ ಧಾರವಾಹಿ ನೋಡಿದ ಜನರು ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಈ ಧಾರವಾಹಿ ಕೂಡು ಕುಟುಂಬದ ಬಗ್ಗೆ ಕಥೆಯನ್ನು ಹೊಂದಿದ್ದು ನೋಡುಗರಿಗೆ ಬಹಳಷ್ಟು ಖುಷಿ ನೀಡುತ್ತಿದೆ.

ಕೂಡು ಕುಟುಂಬ ನೋಡಿ ಖುಷಿಪಟ್ಟ ಜನ
ಇತ್ತೀಚಿನ ದಿನಗಳಲ್ಲಿ ಕೂಡು ಕುಟುಂಬ ನೋಡುವುದೇ ಬರುವ ಅಪರೂಪ ಆದ ಕಾರಣ ಧಾರಾವಾಹಿಯ ಮೂಲಕನಾದರೂ ಕಾಣಿಸುತ್ತಿರುವುದು ನಮ್ಮ ಪುಣ್ಯ ಎಂದೆಲ್ಲ ಜನರು ಮಾತನಾಡಿಕೊಂಡು ಇದ್ದಾರೆ. ಈ ಧಾರಾವಾಹಿಯ ನಾಯಕ ನಟ ಫಾರಿನ್ ನಲ್ಲಿ ತನ್ನೆಲ್ಲ ವಿದ್ಯಾಭ್ಯಾಸವನ್ನು ಮುಗಿಸಿ, ಬಳಿಕ ತಾನು ಅಜ್ಜಿ ಮೆಚ್ಚಿದ ಹುಡುಗಿಯನ್ನು ಮದುವೆ ಆಗಬೇಕು ಎನ್ನುವ ಆಸೆಯಿಂದ ಭಾರತಕ್ಕೆ ಬಂದಿದ್ದಾನೆ.
ಚಾಕ್ಲೇಟ್ ಬಾಯ್ ಆಗಿ ನಟಿಸುತ್ತಿರುವ ವಿಶ್ವನಾಥ್
ಬೃಂದಾವನದ ನಾಯಕ ನಟನಾಗಿ ಅಭಿನಯ ಮಾಡುತ್ತಿರುವ ವಿಶ್ವನಾಥ್ ಧಾರಾವಾಹಿ ಪ್ರೇಮಿಗಳ ಮನಸಿಗೆ ಬಹಳಷ್ಟು ಹತ್ತಿರ ಆಗಿದ್ದಾರೆ.. ಆದರೆ ,ಇದೀಗ ದಿಢೀರ್ ಆಗಿ ನಾಯಕ ನಟ ಬದಲು ಮಾಡಲಾಗುತ್ತಿದೆ ಎಂದೆಲ್ಲ ಸುದ್ದಿ ಕೇಳಿ ಸೀರಿಯಲ್ ಪ್ರೇಮಿಗಳು ಬೇಸರಗೊಂಡಿದ್ದಾರೆ.


Click it and Unblock the Notifications











