ಮಿನಿ ಸ್ಕರ್ಟ್‌ನಲ್ಲಿ ಕಾಣಿಸಿಕೊಂಡ ಅಮೂಲ್ಯ: 'ಬೃಂದಾವನ' ಪುಷ್ಪಾ ಲುಕ್‌ಗೆ ಫ್ಯಾನ್ಸ್ ಫಿದಾ
ಬೃಂದಾವನ ಧಾರಾವಾಹಿಯ ಹೀರೋಯಿನ್ ಹೊಸ ಅವತಾರ ಕಂಡು ನೆಟ್ಟಿಗರು ಕೊಂಚ ಶಾಕ್ ಆಗಿದ್ದಾರೆ. ಧಾರಾವಾಹಿಯಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಮಿಂಚಿರುವ ನಟಿಯನ್ನು ಇದೀಗ ಮಾಡರ್ನ್ ಲುಕ್‌ನಲ್ಲಿ ನೋಡಿದಾಗ ಕೆಲವರು ಅದನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಾರೆ.
ಕಲರ್ಸ್ ಕನ್ನಡ ವಾಹಿನಿಯ 'ಬೃಂದಾವನ' ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಪುಷ್ಪ ಪಾತ್ರ ನಿರ್ವಹಿಸುತ್ತಿರುವ ಅಮೂಲ್ಯ ಭಾರಧ್ವಜ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆಯ ಹೊಸ ಲುಕ್‌ಗೆ ಫಿದಾ ಆಗದವರೇ ಇಲ್ಲ. ಇವರೇನಾ ಬೃಂದಾವನದಲ್ಲಿ ಬರುವ ಪುಷ್ಪ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.

ಕೆಂಪು ಬಣ್ಣದ ಆಫ್ ಶೋಲ್ಡರ್ ಕ್ರಾಪ್ ಟಾಪ್ ಜೊತೆಗೆ ಕಪ್ಪು ಬಣ್ಣದ ಮಿನಿ ಸ್ಕರ್ಟ್ ಧರಿಸಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ. ಗೆಳೆಯರ ಜೊತೆ ಔಟಿಂಗ್ ಹೋಗಿದ್ದಾಗ ಈ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ.
ಗೆಳೆಯರ ಜೊತೆ ಔಟಿಂಗ್
ಅಮೂಲ್ಯ ಜೊತೆ ಗೆಳತಿ ಜೊತೆಗೆ ಲಕ್ಷಣ ಸೀರಿಯಲ್ ನಾಯಕಿಯೂ ಆಗಿರುವ ವಿಜಯಲಕ್ಷ್ಮಿ ಸಹ ಕಾಣಿಸಿಕೊಂಡಿದ್ದು ನೆಟ್ಟಿಗರ ಗಮನ ಸೆಳೆದಿದೆ. ಎಲ್ಲರೂ ರೆಸ್ಟೋರೆಂಟ್‌ವೊಂದರಲ್ಲಿ ಪಾರ್ಟಿ ಮಾಡಿ ಎಂಜಾಯ್ ಮಾಡಿರೋದು ಗೊತ್ತಾಗುತ್ತದೆ. ಪೋಸ್ಟ್‌ಗೆ ಸಿಕ್ಕಾಪಟ್ಟೆ ಲೈಕ್ಸ್, ಕಾಮೆಂಟ್ಸ್ ಸಿಕ್ಕಿದೆ.

ಪುಷ್ಪ ನಟನೆಗೆ ಫುಲ್ ಮಾರ್ಕ್ಸ್
ತವರು ಮನೆಯಲ್ಲಿ ನೆಮ್ಮದಿ ಕಾಣದ ಪುಷ್ಪ ಗಂಡನ ಮನೆಯಲ್ಲಿ ಕೂಡ ನೆಮ್ಮದಿಯಾಗಿ ಇರೋಕೆ ಸಾಧ್ಯವಾಗದಂತಾಗಿದೆ. ಬಹಳ ಅದ್ಧೂರಿಯಾಗಿ ಧಾರಾವಾಹಿ ಮೂಡಿ ಬರುತ್ತಿದೆ. ರಾಮ್‌ಜೀ ನಿರ್ದೇಶನದ ಈ ಧಾರಾವಾಹಿಯ ನಾಯಕ ನಟ ಬದಲಾಗಿದ್ದು ಇತ್ತೀಚೆಗೆ ಭಾರೀ ಸುದ್ದಿ ಆಗಿತ್ತು. ವಿಶ್ವನಾಥ್ ಬದಲು ವರುಣ್ ಈಗ ಆಕಾಶ್ ಪಾತ್ರ ನಿಭಾಯಿಸುತ್ತಿದ್ದಾರೆ.
ದಾಸ ಪುರಂದರ ಧಾರಾವಾಹಿಯಲ್ಲಿ ನಟನೆ
ಅಮೂಲ್ಯ ಮೊದಲನೇ ಬಾರಿಗೆ ಕಿರುತೆರೆಗೆ ಎಂಟ್ರಿ ಆಗಿದ್ದು 'ದಾಸ ಪುರಂದರ' ಧಾರಾವಾಹಿಯ ಮೂಲಕ. ನಾರಾಯಣನ ಪತ್ನಿಯಾಗಿ ಅಭಿನಯ ಮಾಡಿದ್ದಾರೆ. ಅಮೂಲ್ಯ ಈ ಹಿಂದೆ 'ಶಾಂತಂ ಪಾಪಂ'ನಲ್ಲಿ ಸರಣಿಯಲ್ಲೂ ಕಾಣಿಸಿಕೊಂಡಿದ್ದರು. ಬಳಿಕ ಒಳ್ಳೆಯ ಧಾರಾವಾಹಿಯಲ್ಲಿ ನಟನೆ ಮಾಡಲು ಕಾಯುತ್ತಿದ್ದರು.
ಆಡಿಷನ್‌ಗಳಲ್ಲಿ ಭಾಗವಹಿಸಿದ ನಟಿ
ಹಲವಾರು ಬಾರಿ ಆಡಿಷನ್ ನೀಡಿದರು ಆದರೆ ಯಾವುದರಲ್ಲೂ ಅವಕಾಶ ಸಿಕ್ಕಿರಲಿಲ್ಲ. ಇದೀಗ 'ಬೃಂದಾವನ' ಧಾರಾವಾಹಿಯಲ್ಲಿ ಪುಷ್ಪ ಪಾತ್ರಧಾರಿಯಾಗಿ ನಟನೆ ಮಾಡುತ್ತಿದ್ದಾರೆ. ಇನ್ನು ಅಮೂಲ್ಯ ಹೆಚ್ಚಾಗಿ ಟ್ರಾವೆಲಿಂಗ್ ಮಾಡುತ್ತಾ ಇರುತ್ತಾರೆ. ಮುದ್ದು ಮುದ್ದಾಗಿ ನಟನೆ ಮಾಡುವ ಆಕೆಗೆ ವೀಕ್ಷಕರು ಆಲ್ ದಿ ಬೆಸ್ಟ್ ಹೇಳುತ್ತಿದ್ದಾರೆ. ಬೃಂದಾವನ ಧಾರವಾಹಿ ಮೂಲಕ ಈಗ ವೀಕ್ಷಕರಿಗೆ ಬಹಳ ಹತ್ತಿರವಾಗಿದೆ.


Click it and Unblock the Notifications











