Brundavana Serial: ಪುಷ್ಪಾಳ ಜೀವನ ಹಾಳು ಮಾಡಲು ಹೊರಟ ಅತ್ತಿಗೆ ಲಾಕ್.. ಮುಂದೇನಾಯ್ತು?

By ಎಸ್ ಸುಮಂತ್

ಕೂಡು ಕುಟುಂಬಕ್ಕೆ ಪುಷ್ಪಾ ಸೊಸೆಯಾಗಿ ಹೊರಟಿದ್ದಾಳೆ. 32 ಜನರಿರುವ ಕುಟುಂಬವನ್ನು ಅದೇಗೆ ಸಂಭಾಳಿಸುತ್ತಾಳೋ ಗೊತ್ತಿಲ್ಲ. ವಿದೇಶದಲ್ಲಿ ಓದುತ್ತಿರುವ ಆಕಾಶನಿಗೆ ಮದುವೆ ಮಾಡಬೇಕೆಂಬ ಬಯಕೆ. ಆದರೆ ಈಗಾಗಲೇ ಮನೆ ತುಂಬಿದೆ. ಈ ತುಂಬಿದ ಮನೆಗೆ, ತುಂಬು ಸಂಸಾರ ಕಾಪಾಡುವಂತ ಹುಡುಗಿಯೇ ಬೇಕು ಎಂದು ಅಜ್ಜಿ ಹುಡುಗಿ ಹುಡುಕಿದ್ದಾರೆ.

ಪುಷ್ಪಾಳ ಹಾಡು ಕೇಳಿಯೇ ಅಜ್ಜಿ ತೀರ್ಮಾನ ಮಾಡಿ ಆಗಿದೆ. ಇವಳೇ ತುಂಬು ಸಂಸಾರದ ಹುಡುಗಿ ಎಂದು ನಿರ್ಧರಿಸಿ ಆಗಿದೆ. ಹುಡುಗಿ ನೋಡುವ ಶಾಸ್ತ್ರಕ್ಕೂ ಇಡೀ ಮನೆ ಮಂದಿ ಬಂದು ಆಗಿದೆ. ಪುಷ್ಪಾಳನ್ನು ವಿರೋಧಿಸುವವರಿಗೆ ಮೈನೆಸ್ ಪಾಯಿಂಟ್ ತೋರಿಸಿದರೆ ಮದುವೆ ಕ್ಯಾನ್ಸಲ್ ಎಂಬ ಖುಷಿಯನ್ನು ಅಜ್ಜಿ ನೀಡಿದ್ದರು. ಆದರೆ ಅದು ಸಾಧ್ಯವೇ ಆಗಲಿಲ್ಲ.

Brundavana Serial Written Update on October 30th episode

'ಬೃಂದಾವನ'ದ ಮನಸ್ಸು ಗೆದ್ದ ಪುಷ್ಪಾ

'ಬೃಂದಾವನ'ದ ಹಿರಿಯರಿಗೆ ಹುಡುಗಿ ಇಷ್ಟವಾದ ಮೇಲೆ ಎಲ್ಲರಿಗೂ ಇಷ್ಟವಾಗಲೇಬೇಕು. ಮನೆಯಲ್ಲಿದ್ದ ಮಕ್ಕಳಿಂದ ಹಿಡಿದು ಹಿರಿಯರೆಲ್ಲ ಹೆಣ್ಣು ನೋಡುವ ಶಾಸ್ತ್ರಕ್ಕೆ ಬಂದಾಗಿದೆ. ಪುಷ್ಪಾಳ ಮನೆ ಇಕ್ಕಟ್ಟೇನು ಆಗಲಿಲ್ಲ. ಮನೆಯಲ್ಲಿರುವ ಬಡತನದ ನಡುವೆಯೂ ಎಲ್ಲರಿಗೂ ಪುಷ್ಪಾ ಬುದ್ದಿವಂತಿಕೆಯಿಂದ ಸತ್ಕಾರ ಮಾಡಿದ್ದಾಳೆ. ಯಾವುದೇ ನೆಗೆಟಿವ್ ಪಾಯಿಂಟ್ ಹುಡುಕುವುದಕ್ಕೇನೆ ಬಿಟ್ಟಿಲ್ಲ. ತನ್ನ ಬುದ್ದಿವಂತಿಕೆ, ತನ್ನ ವಿನಯವಂತಿಕೆಯಿಂದಾನೇ ಸತ್ಕಾರ ನಡೆದಿದೆ.

ಪುಷ್ಪಾ ನೋಡಲು ಮೊಮ್ಮಗ ಬರ್ತಾನಾ?

ಪುಷ್ಪಾಳ ಗುಣಕ್ಕೆ ಎಲ್ಲರೂ ಒಕೆ ಎಂದಿದ್ದಾರೆ. ಬಡತನವಿದ್ದರೂ ಸಂಸ್ಕಾರಕ್ಕೆ ಕಡಿಮೆ ಇಲ್ಲ. ಹಾಗೇ ಅವಳಾಡುವ ಒಂದೊಂದು ಮಾತುಗಳು ಸಹ ಎಲ್ಲರ‌ ಮನಸ್ಸನ್ನು ತಟ್ಟಿದೆ. ಹೀಗಾಗಿ ಎಲ್ಲರೂ ಹುಡುಗಿ ಓಕೆ ಎಂದಿದ್ದಾರೆ. ಆಕಾಶ ಕೂಡ ಮನೆಯವರ ಮಾತನ್ನು ತೆಗೆದು ಹಾಕಲ್ಲ. ಹೀಗಾಗಿ ಅಜ್ಜಿ ಆ ನಂಬಿಕೆಯಿಂದಾನೇ ಹುಡುಗಿಯ ಮನೆಯವರಿಗೆ ಭರವಸೆ ಕೊಟ್ಟು ಹೋಗಿದ್ದಾರೆ. ಆದರೆ, ಅದರ ನಡುವೆ ಆಕಾಶ ಕೂಡ ಬಂದು ನೋಡಿಬಿಡಲಿ. ಆಮೇಲೆ ಮದುವೆ ಮಾತುಕತೆ ನಡೆಸೋಣಾ‌ ಎಂದಿದ್ದಾರೆ.

ಗಂಡನಿಂದ ಕಾದಿದೆ ಗ್ರಹಚಾರ

ಗಂಡಿನ ಕಡೆಯವರು ಬರಬಾರದು, ಪುಷ್ಪಾಳಿಗೆ ಇಷ್ಟು ಒಳ್ಳೆಯ ಸಂಬಂಧ ಸಿಗಬಾರದು ಎಂಬುದೇ ಅತ್ತಿಗೆಯ ಮನಸ್ಥಿತಿ. ಹೀಗಾಗಿ ಬೃಂದಾವನದ ನಂಬರ್ ತೆಗೆದುಕೊಂಡಿದ್ದಾಕೆ ಪುಷ್ಪಾ ಬಗ್ಗೆ ಕೆಟ್ಟದಾಗಿ ಹೇಳಿದ್ದಾಳೆ. ಇದು ಅಣ್ಣನಿಗೆ ಗೊತ್ತಿರಲಿಲ್ಲ. ಆದರೆ ಹೆಣ್ಣು ನೋಡಿ ಹೊರಡುವಾಗ, ಅಜ್ಜಿ ನಡೆದ ವಿಚಾರ, ಫೋನ್ ಬಂದ ವಿಚಾರವನ್ನು ತಿಳಿಸಿದ್ದಾರೆ. ಪುಷ್ಪಾಳ ಅಣ್ಣನಿಗೆ ಈ ಕೆಲಸ ಮಾಡಿರುವುದು ಬೇರೆ ಯಾರು ಅಲ್ಲ ಅನ್ನೋ ಅನುಮಾನ ಆಗಲೇ‌ ಮೂಡಿದೆ. ಕೋಪದ ಕಣ್ಣು ಬಿಟ್ಟಾಗಲೇ ಪುಷ್ಪಾಳ ಅತ್ತಿಗೆ ಭಯಕ್ಕೆ ಒಳಗೆ ಓಡಿದ್ದಾಳೆ.

Brundavana Serial Written Update on October 30th episode

ಪುಷ್ಪಾಳ ಫೋಟೋ ಕಳುಹಿಸಲು ಒದ್ದಾಟ

ಪುಷ್ಪಾಳಿಗೆ ತಾನೂ ಮದುವೆಯಾಗುತ್ತಿರುವ ಹುಡುಗ ವಿದೇಶದಲ್ಲಿ ಓದುತ್ತಾ ಇರುವುದು ಎಂಬುದು ಗೊತ್ತಿದೆ. ಆದರೆ, ಅವನು ಹೇಗಿದ್ದಾನೆ ಅನ್ನೋದು ಮಾತ್ರ ಗೊತ್ತಿರಲಿಲ್ಲ. ಈಗ ಆಕಾಶನ ಫೋಟೋ ಕೂಡ ಬಂದಿದೆ. ಪುಷ್ಪಾ ಆ ಫೋಟೋ ನೋಡಲು ಸಾಕಷ್ಟು ಕಾತುರಳಾಗಿದ್ದಳು. ನೋಡಿ ತುಂಬಾ ಖುಷಿ ಪಟ್ಟಿದ್ದಾಳೆ. ಈಗ ಬೃಂದಾವನದ ಮನೆಯವರು ಹುಡುಗಿಯ ಫೋಟೋ ಕಳುಹಿಸಲು ಹೇಳಿದ್ದಾರೆ. ಇದನ್ನು ಕೇಳಿದ ಪುಷ್ಪಾಳ ಅಣ್ಣನಿಗೆ ಒಂದು ಕಡೆ ಖುಷಿ. ಮೊದಲು ತಂಗಿಯನ್ನು ಅಲಂಕರಿಸಿ ಫೋಟೋ ತೆಗೆಸಿದ್ದಾರೆ. ಆದರೆ ಅವರಿಗೆ ಮೇಲ್ ಮಾಡುವುದು ಹೇಗೆ ಅನ್ನುವುದು ತಿಳಿಯದೆ ಒದ್ದಾಡುತ್ತಿದ್ದಾರೆ.

More from Filmibeat

English summary
Kannada News: Brundavana Serial Written Update on October 30th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X