»   » ರಿಯಾಲಿಟಿ ಶೋನಲ್ಲಿದ್ದು ಬಂದವರಿಗೆ ಚಂದನ್ ಶರ್ಮಾ ಉಪದೇಶ!

ರಿಯಾಲಿಟಿ ಶೋನಲ್ಲಿದ್ದು ಬಂದವರಿಗೆ ಚಂದನ್ ಶರ್ಮಾ ಉಪದೇಶ!

Posted By:
Subscribe to Filmibeat Kannada

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಕನ್ನಡ-4' ಈಗಷ್ಟೆ ಮುಗಿದಿದೆ. 'ದೊಡ್ಮನೆ'ಯಲ್ಲಿದ್ದು ಬಂದವರೆಲ್ಲ ಸದ್ಯ ಫೇಸ್ ಬುಕ್ ನಲ್ಲಿ ಯದ್ವಾತದ್ವಾ ಆಕ್ಟೀವ್ ಆಗಿದ್ದಾರೆ. ಇಷ್ಟ ಆದಾಗೆಲ್ಲಾ ಲೈವ್ ಮಾಡ್ಕೋತಾರೆ, 'ಅಭಿಮಾನಿ'ಗಳ ಜೊತೆ ಚಿಟ್-ಚಾಟ್ ಮಾಡ್ತಾರೆ. ಜನಪ್ರಿಯತೆ ಸಿಗಬೇಕು ಅಂದುಕೊಂಡವರಿಗೆ ಇದಕ್ಕಿಂತ ಹೆಚ್ಚೇನು ಬೇಕು ಹೇಳಿ.?!

ಹೀಗಿರುವಾಗಲೇ, ಬಿಟಿವಿ ನ್ಯೂಸ್ ಆಂಕರ್ ಚಂದನ್ ಶರ್ಮಾ 'ರಿಯಾಲಿಟಿ ಶೋ'ನಲ್ಲಿ ಇದ್ದು ಬಂದವರಿಗೆ ಫೇಸ್ ಬುಕ್ ಮೂಲಕವೇ ಹಿತೋಪದೇಶ ನೀಡಿದ್ದಾರೆ.

ಚಂದನ್ ಶರ್ಮಾ ನೀಡಿರುವ ಉಪದೇಶ ಏನು.?

''ಯಾವುದೇ ರಿಯಾಲಿಟಿ ಷೋ ಅಂದ್ರೂ, ನಿಮಗೀಗಿರುವ ಪಾಪುಲ್ಯಾರಿಟಿ ಇನ್ನೊಂದಿಷ್ಟು ಜಾಸ್ತಿ ಆಗಬಹುದು, ನಾಲ್ಕಾರು ಲೈಕ್ಸ್ ಹೆಚ್ಚಿಗೆ ಬೀಳಬಹುದು, ಒಂದಿಷ್ಟು ಸೆಲ್ಫೀಗಳಿಗೆ ಜನ ಮುಗಿ ಬೀಳಬಹುದು. ಬೇರೊಂದಿಷ್ಟು ಕಾರ್ಯಕ್ರಮಗಳಿಗೆ push ಸಿಗಬಹುದು. ಆದ್ರೆ, ಕಡೆಯಲ್ಲಿ ಸಾಧಿಸಿದ್ದೇನು? ಬದುಕು ಕಟ್ಟಿಕೊಂಡವರು ಎಷ್ಟು ಜನ?'' - ಚಂದನ್ ಶರ್ಮಾ [ಇಡೀ ದೇಶ ಕೇಳುತ್ತಿದೆ, ಬಿಟಿವಿ ನಿರೂಪಕ ಚಂದನ್ ಶರ್ಮಾ ಎಲ್ಲಿ?]

ಯಾವುದು ಆಗದಿರಲಿ.?

''ಎಲ್ಲವೂ ಕೃತಕ, ಕ್ಷಣಿಕ, ನಿರರ್ಥಕ, ನೀರ ಮೇಲಿನ ಗುಳ್ಳೆಯಂಥ ಬದುಕು. ಇದನ್ನು ಅರ್ಥ ಮಾಡಿಕೊಳ್ಳದ ನನ್ನ ಬಹಳಷ್ಟು ಸ್ಬೇಹಿತರು ಎಡವಿದ್ದಾರೆ. ಅಥ್ವಾ ಎಡವುವ ಹಾದಿಯಲ್ಲಿದ್ದಾರೆ. ಹಾಗಾಗದಿರಲಿ.. ಬದುಕಿನ ನಿಜ ಸತ್ವ ಅವರಿಗೆ ಅರ್ಥವಾಗಲಿ'' ಅಂತ 'ಫೇಸ್ ಬುಕ್'ನಲ್ಲಿ ಬರೆದುಕೊಳ್ಳುವ ಮೂಲಕ 'ರಿಯಾಲಿಟಿ ಸ್ಟಾರ್'ಗಳಿಗೆ ಚಂದನ್ ಶರ್ಮಾ ಕಿವಿಮಾತು ಹೇಳಿದ್ದಾರೆ.['ಬಿಟಿವಿ' ನಿರೂಪಕ ಚಂದನ್ ಶರ್ಮಾ 'ಹೀರೋ' ಆಗಿರೋ ಸಿನಿಮಾ ಯಾವ್ದು?]

ಹಿತೋಪದೇಶ ಯಾರಿಗೆ.?

ಅಂದ್ಹಾಗೆ, ಚಂದನ್ ಶರ್ಮಾ ರವರ ಈ ಹಿತೋಪದೇಶ ಯಾರಿಗೆ ಎಂಬ ಪ್ರಶ್ನೆ ನಮಗೂ ಕಾಡುತ್ತಿದೆ. ಉತ್ತರ ಅವರೇ ಕೊಡಬೇಕು..!

ಬೇಡ ಬೇಡ ಅಂದರೂ ನೆನಪಾದ 'ಬಿಗ್ ಬಾಸ್'

ಚಂದನ್ ಶರ್ಮಾ ರವರ ಈ ಫೇಸ್ ಬುಕ್ ಪೋಸ್ಟ್ ನೋಡ್ತಿದ್ರೆ, ಬೇಡ ಬೇಡ ಅಂದರೂ 'ಬಿಗ್ ಬಾಸ್ ಸ್ಪರ್ಧಿಗಳು' ನೆನಪಾಗುತ್ತಾರೆ. ಹೀಗಾಗಿ ಆರಂಭದ ಪೀಠಿಕೆ..!

English summary
BTV News Anchor Chandan Sharma has taken his Facebook Book page to share his opinion on Reality Show stars.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada