ದರ್ಶನ್ ಮತ್ತು ಸುದೀಪ್ ಜೊತೆಗಿನ ಜಗಳದ ಬಗ್ಗೆ ಬುಲೆಟ್ ಹೀಗೆ ಹೇಳಿದರು!
ನಟ ಬುಲೆಟ್ ಪ್ರಕಾಶ್ ಈ ಹಿಂದೆ ತಮ್ಮ ಒಂದು ಟ್ವೀಟ್ ಮೂಲಕ ದೊಡ್ಡ ಸುದ್ದಿ ಮಾಡಿದ್ದರು. ಚಿತ್ರರಂಗದಲ್ಲಿ ಇರುವ ಬಿರುಕಿಗೆ ಒಬ್ಬ ನಟ ಕಾರಣ ಎಂಬ ಟ್ವೀಟ್ ಮಾಡಿ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದ್ದರು.
ಅದಕ್ಕೂ ಮುಂಚೆ ದರ್ಶನ್ ಅವರ ಸಹೋದರ ದಿನಕರ್ ಅವರೊಂದಿಗೆ ಜಗಳದಿಂದ ದರ್ಶನ್ ಮತ್ತು ಬುಲೆಟ್ ಸ್ನೇಹ ಅಷ್ಟಕ್ಕಷ್ಟೇ ಎನ್ನುವಂತಾಗಿತ್ತು. ಈ ಎರಡು ಘಟನೆಗಳ ಬಳಿಕ ದರ್ಶನ್, ಸುದೀಪ್ ಜೊತೆ ಬುಲೆಟ್ ಪ್ರಕಾಶ್ ಅವರ ಬಾಂಧವ್ಯ ಮುರಿದು ಬಿದ್ದಿದೆ ಎಂಬ ಮಾತುಗಳು ಕೇಳಿ ಬಂದಿತ್ತು.
ಆದ್ರೆ, ಬುಲೆಟ್ ಪ್ರಕಾಶ್ ಇದನ್ನ ಒಪ್ಪಿಕೊಳ್ಳುವುದಿಲ್ಲ. ಇತ್ತೀಚೆಗಷ್ಟೇ 'ಕಲರ್ಸ್ ಸೂಪರ್' ವಾಹಿನಿಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬುಲೆಟ್, ತಮ್ಮ ಗೆಳೆಯರಾದ ದರ್ಶನ್ ಮತ್ತು ಸುದೀಪ್ ಅವರ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ...

'ಸೂಪರ್ ಟಾಕ್ ಟೈಂ' ಕಾರ್ಯಕ್ರಮದಲ್ಲಿ ಬುಲೆಟ್
ನಟ ಬುಲೆಟ್ ಪ್ರಕಾಶ್ ಇತ್ತೀಚೆಗಷ್ಟೆ 'ಕಲರ್ಸ್ ಸೂಪರ್' ವಾಹಿನಿಯಲ್ಲಿ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮದ ಅತಿಥಿ ಆಗಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ದರ್ಶನ್ ಮತ್ತು ಸುದೀಪ್ ಜೊತೆಗಿನ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.

ದರ್ಶನ್ ಬಗ್ಗೆ ಪ್ರಶ್ನೆ
ಕಾರ್ಯಕ್ರಮ ನಿರೂಪಕ ಅಕುಲ್ ''ನಿಮ್ಮ ಮತ್ತು ದರ್ಶನ್ ನಡುವೆ ಜಗಳ ಆಯ್ತು ಅಂತ ಮಾತಿದೆ ಅದು ನಿಜವೇ'' ಎಂದು ಬುಲೆಟ್ ಪ್ರಕಾಶ್ ಅವರಿಗೆ ನೇರವಾಗಿ ಪ್ರಶ್ನೆ ಕೇಳಿದರು.

ಬುಲೆಟ್ ಪ್ರಕಾಶ್ ಉತ್ತರ
''ಯಾವ ಜಗಳ.. ಏನು ಜಗಳ.. ನಾನು ಎಲ್ಲಿಯೂ ದರ್ಶನ್ ಅವರ ಹೆಸರು ಹೇಳಿಯೇ ಇಲ್ಲ'' ಎಂದು ಅಕುಲ್ ಅವರ ನೇರ ಪ್ರಶ್ನೆಗೆ ಬುಲೆಟ್ ಪ್ರಕಾಶ್ ಉತ್ತರಿಸಿದ್ದಾರೆ.

ಸುದೀಪ್ ಬಗ್ಗೆ ಪ್ರಶ್ನೆ
''ಸುದೀಪ್ ಅವರ ಜೊತೆ ನಿಮಗೆ ಜಗಳ ಇತ್ತ'' ಎಂದು ಅಕುಲ್ ತಮ್ಮ ಎರಡನೇ ಪ್ರಶ್ನೆಯನ್ನು ಬುಲೆಟ್ ಪ್ರಕಾಶ್ ಮುಂದೆ ಇಟ್ಟರು.

ಸುದೀಪ್ ಅವರು ಒಳ್ಳೆಯ ಸ್ನೇಹಿತ
''ನಾನು ಸುದೀಪ್ ಅವರ ಹೆಸರನ್ನು ಸಹ ಹೇಳಿಲ್ಲ. ನನಗೆ ಸುದೀಪ್ ಅವರು ಒಳ್ಳೆಯ ಸ್ನೇಹಿತ. ಸುದೀಪ್ ಅವರು ನನಗೆ ಒಂದಲ್ಲ ಒಂದು ಟೈಂ ನಲ್ಲಿ ಸಹಾಯ ಮಾಡಿದ್ದಾರೆ'' ಎಂದು ಬುಲೆಟ್ ಪ್ರಕಾಶ್ ಹೇಳಿದ್ದಾರೆ.

ಸ್ಪಷ್ಣನೆ ನೀಡಿದ ಬುಲೆಟ್ ಪ್ರಕಾಶ್
''ಗೊತ್ತು ಗೊತ್ತಿಲ್ಲದೆ ತಪ್ಪಾಗಿದ್ದರೆ ಕ್ಷಮೆ ಇರಲಿ. ನನಗೆ ಸುದೀಪ್ ಮತ್ತು ದರ್ಶನ್ ಎಲ್ಲರೂ ಒಳ್ಳೆಯ ಫ್ರೆಂಡ್ಸ್. ಆದರೆ ಸಣ್ಣ ಪುಟ್ಟ ಆಗುತ್ತೆ.. ಹೋಗುತ್ತೆ.. ಫ್ರೆಂಡ್ ಶಿಪ್ ನಲ್ಲಿ ಅದು ಸಹಜ. ಮನೆಯಲ್ಲಿಯೇ ಗಲಾಟೆ ಆಗುತ್ತದೆ, ಹೀಗಿರುವಾಗ ಹೊರಗಡೆ ಗಲಾಟೆ ಆಗದೆ ಇರುತ್ತದೆಯಾ? ಎಂದು ಹೇಳುವ ಮೂಲಕ ಎಲ್ಲ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ.


Click it and Unblock the Notifications











