20 ಗ್ರಾಂ ಮಾಂಗಲ್ಯ ಸರ, 21 ಗ್ರಾಂ ಚಿನ್ನದ ಸರ ; ಒಟ್ಟು 63 ಗ್ರಾಂ ಚಿನ್ನಾಭರಣ ಕದ್ದು ಜೈಲು ಪಾಲಾದ ನಟಿ

ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಚಿತ್ರರಂಗದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು. ಹೇಗಾದರೂ ಮಾಡಿ ಬಹು ಬೇಗ ದುಡ್ಡು ಮಾಡಿಬಿಡಬೇಕು, ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಶ್ರೀಮಂತರಾಗಬೇಕೆನ್ನುವ ಹಪಾಹಪಿ ಇಲ್ಲಿ ಅನೇಕರದ್ದು. ಹೀಗಾಗಿಯೇ ಹಣದಾಸೆಗೆ ಹಲವರು..

ಇಲ್ಲಿ ಅಡ್ಡದಾರಿಯನ್ನು ಹಿಡಿಯುತ್ತಾರೆ. ಮಾಡಬಾರದ ಕೆಲಸ ಮಾಡುತ್ತಾರೆ. ಉದಾಹರಣೆಗೆ ರೂಪಾ ದತ್ತಾ. ಹೌದು ರೂಪಾ ದತ್ತಾ.. ಕಿರುತೆರೆ ನಾಯಕಿ. ''ಜೈ ಮಾ ವೈಷ್ಣೋದೇವಿ'' ಧಾರಾವಾಹಿ ಮೂಲಕ ಮನೆ ಮಾತಾದ ರೂಪಾ ಈ ಹಿಂದೆ ''ಸಾಥಿ'' .. ''ಖೆಲ್ಲಾ ಫ್ಯಾಟಿಲ್'' ಸೇರಿ ಕೆಲ ಬೆಂಗಾಲಿ ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದರು.

Busted Again Ex-TV Actress Rupa Dutta Arrested for Second Time in 3 Years Over Gold Theft

ಇಂಥಾ ರೂಪಾ ದತ್ತಾ ಕೋಲ್ಕತ್ತಾದ ಬಾಷ್ವಾಲಾ ಲೇನ್‌ನಲ್ಲಿ ಮಹಿಳೆಯ ಪರ್ಸ್ ಎಗರಿಸಿದ್ದಾರೆ. ಪರ್ಸ್‌ನಲ್ಲಿದ್ದ 20 ಗ್ರಾಂ ತೂಕದ ಚಿನ್ನದ ಮಂಗಳಸೂತ್ರ.. 21 ಗ್ರಾಂ ತೂಕದ ವೈಷ್ಣೋದೇವಿ ಲಾಕೆಟ್ ಇದ್ದ ಚಿನ್ನದ ಸರ.. 9 ಗ್ರಾಂ ಮತ್ತು 13 ಗ್ರಾಂ ತೂಕದ ಎರಡು ಚಿನ್ನದ ಕಡಗ ಮತ್ತು ನಾಲ್ಕು ಸಾವಿರ ಹಣ ಕದ್ದಿದ್ದಾರೆ.

ಪರ್ಸ್ ಕಳೆದುಕೊಂಡು ಹೈರಾಣಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ಧಾರೆ. ದೂರು ಸ್ವೀಕರಿಸಿ ತನಿಖೆಯನ್ನು ಶುರು ಮಾಡಿದ ಪೊಲೀಸರು ಕಳ್ಳತನ ನಡೆದ ಜಾಗದ ಸುತ್ತ ಮುತ್ತ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದ್ದು ರೂಪಾ ದತ್ತಾ ಅವರ ಮುಖ ಸ್ಪಷ್ಟವಾಗೊ ಕಾಣದ ಕಾರಣ ಉಡುಪು ಮತ್ತು ಕೆಲ ಗುರುತುಗಳ ಆಧಾರದ ಮೇಲೆ ಪೊಲೀಸರು ತನಿಖೆ ಮಾಡಿದ್ದಾರೆ. ಆಗ ಈ ಕಳ್ಳತನದ ಹಿಂದೆ 42 ವರ್ಷದ ನಟಿ ರೂಪಾ ದತ್ತಾ ಕೈವಾಡ ಇರುವುದು ಪೊಲೀಸರಿಗೆ ಗೊತ್ತಾಗಿದೆ.

ಯಾಕೆಂದರೆ.. ಕಳ್ಳತನ ಮತ್ತು ಜೈಲು.. ರೂಪಾಗೆ ಹೊಸದೇನಲ್ಲ. 2022ರಲ್ಲಿ ಕೂಡ ಪುಸ್ತಕ ಮೇಳದಲ್ಲಿ ₹75,000 ನಗದು ಹಣವನ್ನು ರೂಪಾ ಕದ್ದಿದ್ದರು. ಕದ್ದ ಪರ್ಸ್‌ನ ಕಸದ ಬುಟ್ಟಿಗೆ ಎಸೆದು ಪರಾರಿಯಾಗುವ ಸಮಯದಲ್ಲಿ ರೂಪಾ ದತ್ತಾ ಅವರನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು. ಆಗ ರೂಪಾ ಬ್ಯಾಗ್ ಪರಿಶೀಲಿಸಿದಾಗ ಹಲವು ಪರ್ಸ್‌ಗಳು ರೂಪಾ ಬ್ಯಾಗ್‌ನಲ್ಲಿ ಪತ್ತೆಯಾಗಿದ್ದವು.

ಹೀಗಾಗಿ ಮಹಿಳೆ ದೂರು ನೀಡಿದಾಗ ರೂಪಾ ದತ್ತಾ ಮೇಲೆ ಅನುಮಾನಗೊಂಡಿದ್ದ ಪೊಲೀಸರು ರೂಪಾ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಕೊನೆಗೆ ಬ್ರಾಬೋರ್ನ್‌ ರಸ್ತೆಯ ನಂದಾ ರಾಮ್ ಮಾರ್ಕೆಟ್‌ನಲ್ಲಿ ರೂಪಾ ದತ್ತಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

Busted Again Ex-TV Actress Rupa Dutta Arrested for Second Time in 3 Years Over Gold Theft

ಈ ಕುರಿತು ಮಾಹಿತಿಯನ್ನು ನೀಡಿರುವ ಅಪರಾಧ ಮತ್ತು ಸಂಚಾರ ವಿಭಾಗದ ಸಂಯುಕ್ತ ಸಿಪಿ ಮತ್ತು ರೂಪೇಶ್ ಕುಮಾರ್ ಅಕ್ಟೋಬರ್ 15 ರಂದು ಸಂಜೆ 4:15 ರಿಂದ 4:30 ರ ನಡುವೆ ರೂಪಾ ದತ್ತಾ ಅವರು ದೀಪಾ ಅಗರ್ವಾಲ್ ಅವರ ಪರ್ಸ್‌ ಕದ್ದಿದ್ದಾರೆ ಎಂದು ಹೇಳಿದ್ಧಾರೆ. ಜನನಿಬಿಡ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ರೂಪಾ ದತ್ತಾ ಕಳ್ಳತನ ಮಾಡುತ್ತಿದ್ದರು ಎಂದು ಹೇಳಿದ್ಧಾರೆ. ತನಿಖೆಯ ವೇಳೆ ರೂಪಾ ದತ್ತಾ ಓರ್ವ ನಟಿ ಎನ್ನುವ ವಿಚಾರ ನಮಗೆ ಗೊತ್ತಾಯ್ತು ಎಂದಿದ್ದಾರೆ.

ಸದ್ಯ ಗಾರ್ಚಾ ರಸ್ತೆಯಲ್ಲಿರುವ ರೂಪಾ ದತ್ತಾ ಅವರ ಮನೆಯಿಂದ ಪೊಲೀಸರು 63 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು ಸ್ಥಳೀಯ ನ್ಯಾಯಾಲಯಕ್ಕೆ ರೂಪಾ ಅವರನ್ನು ಹಾಜರು ಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ನವೆಂಬರ್ 7ರವರೆಗೆ ರೂಪಾ ದತ್ತಾ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

More from Filmibeat

English summary
TV actress Rupa Dutta caught in Kolkata purse-lifting case. Police recovered stolen gold and cash from her home. Read how CCTV footage led to the arrest.
Read more about: robbery jail actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X