Bigg Boss Kannada 10: ಬದಲಾಯ್ತು ಬಿಗ್ ಬಾಸ್ ಧ್ವನಿ..? ಮೊದಲ ಫೀಲ್ ಮಿಸ್ ಆಗಿದ್ದಕ್ಕೆ ಪ್ರೇಕ್ಷಕರ ಬೇಸರ..!

By ಎಸ್ ಸುಮಂತ್

ಇಡೀ ಕರ್ನಾಟಕದ ಜನತೆ ಕಾಯುತ್ತಿದ್ದಂತ ರಿಯಾಲಿಟಿ ಶೋ ಹಬ್ಬ ಶುರುವಾಗುವುದಕ್ಕೆ ದಿನಗಣನೇ ಶುರುವಾಗಿದೆ. ಎರಡು ದಿನ ಕಳೆದರೆ ಸಾಕು ಕುತೂಹಲಕ್ಕೆ ಬ್ರೇಕ್ ಬೀಳಲಿದೆ‌. ಅಕ್ಟೋಬರ್ 8ರ ಭಾನುವಾರ ಸಂಜೆ ಬಿಗ್ ಬಾಸ್ ರಿಯಾಲಿಟಿ ಶೋ ಅದ್ದೂರಿ ವೇದಿಕೆಯೊಂದಿಗೆ ತೆರೆದುಕೊಳ್ಳಲಿದೆ.

ಬಿಗ್ ಬಾಸ್ ನ 9 ಸೀಸನ್‌ಗಳು ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಈಗ 10ನೇ‌ ಸೀಸನ್. ಬಹಳ ವಿಶೇಷವಾಗಿದ್ದು, ಹಲವು ರೀತಿಯ ಕುತೂಹಲವನ್ನು ಹುಟ್ಟುಹಾಕಿದೆ. ಭಾನುವಾರ ಸಂಜೆ ಆಗುವುದನ್ನೇ ಜನ ಕಾಯುತ್ತಿದ್ದಾರೆ. ಯಾಕಂದ್ರೆ ಇಷ್ಟು ದಿನ ಸ್ಪರ್ಧೆಗಳ ವಿಚಾರದಲ್ಲಿ ಅವರು ಹೋಗಬಹುದು. ಇವರು ಹೋಗಬಹುದು ಎಂದೇ ಊಹೆಗಳು ನಡೆಯುತ್ತಿವೆ. ಆದರೆ, ಭಾನುವಾರ ಸಂಜೆ ಅಧಿಕೃತವಾಗಿ ಯಾರೆಲ್ಲಾ ಸ್ಪರ್ಧಿಗಳಾಗಬಹುದು ಎಂಬ ಕ್ಲಾರಿಟಿಯೂ ಸಿಗಲಿದೆ.

kannada-reality-show-bigg-boss-10

ಬಿಗ್ ಬಾಸ್‌ ಹೊಸ ಮನೆ ಅತಿಥಿಗಳ್ಯಾರು?

ಬಿಗ್ ಬಾಸ್ 9 ಸೀಸನ್ ಗಳು ಬಿಡದಿಯ ಬಳಿ ನಡೆದಿತ್ತು. ಆದರೆ, ಈ ಬಾರಿಯ ಬಿಗ್ ಬಾಸ್ ನಡೆಯುವ ಸ್ಥಳವೂ ಬದಲಾವಣೆಯಾಗಿದೆ. ತಾವರೆಕೆರೆಯ ದೊಡ್ಡ ಆಲದ ಮರದ ನಡುವೆ ಈ ಬಾರಿಯ ಬಿಗ್ ಬಾಸ್ ನಡೆಯಲಿದೆ. ಅದಕ್ಕಾಗಿ ಹಲವು ದಿನಗಳಿಂದ ಸಾಕಷ್ಟು ತಯಾರಿ ನಡೆಸಿದ್ದಾರೆ. ಈಗ ಮನೆಯೂ ಸಿದ್ಧವಾಗಿದೆ. ಸ್ಪರ್ಧಿಗಳು ಹೋಗುವುದು ಒಂದೇ ಬಾಕಿ ಇರೋದು.

ಹೊಸ ಮನೆಯ ವಿಶೇಷವೇನು..?

ಕಲರ್ಸ್ ಕನ್ನಡದ ಅಧಿಕೃತ ಪೇಜ್‌ನಲ್ಲಿ ಬಿಗ್ ಬಾಸ್ ಮನೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರ ರಿನೋವೇಟಿವ್ ಹೇಗಾಯ್ತು ಎಂಬ ಚಿತ್ರಣ ಅದರಲ್ಲಿ ಕಾಣಿಸುತ್ತಿದೆ. ಖಾಲಿಯಿದ್ದ ಜಾಗವನ್ನು ಬಿಗ್ ಬಾಸ್‌ನ ಬ್ಯೂಟಿಫುಲ್ ಮನೆ ಮಾಡಿದ್ದು ಹೇಗೆ ಎಂಬುದನ್ನು ತೋರಿಸಿದ್ದಾರೆ. ನಾವೀಗ ನೋಡುವುದು ಕಲರ್ ಫುಲ್ ಬಿಗ್ ಬಾಸ್ ಮನೆ. ಸೋ, ಅದರ ಹಿಂದೆ ಎಷ್ಟು ಜನರ ಶ್ರಮ ಇದೆ ಎಂಬುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

ಬಿಗ್ ಬಾಸ್ ಕಣ್ಣಿನ ರೂಪವು ಬದಲು

ಬಿಗ್ ಬಾಸ್‌ನಲ್ಲಿ ಸಾಕಷ್ಟು ಹೈಲೈಟ್ ಎಂದರೆ ಅದು ಕಣ್ಣು‌ ಕೂಡ. ಬಿಗ್ ಬಾಸ್ ಪ್ರಮುಖ ಆಕರ್ಷಣೆ ಕೂಡ. ಈ ಬಾರಿ ಕಣ್ಣನ್ನು ಬದಲಾಯಿಸಿಕೊಂಡಿದೆ. ಮೊದಲಿದ್ದ ಮೀಡಿಯಂ ಕಣ್ಣು ಹೋಗಿ, ಈಗ ದೊಡ್ಡ ಕಣ್ಣು ಬಂದಿದೆ. ಅದೆಲ್ಲಿ ಬಣ್ಣವನ್ನು ಬದಲಾಯಿಸಿದೆ. ಹಳದಿ ಮತ್ತು ಗ್ರೇ ಕಲರ್ ಕಾಂಬಿನೇಷನ್‌ನಲ್ಲಿ ಈ ಕಣ್ಣು ಎಲ್ಲರ ಆಕರ್ಷಣೆ ಮಾಡುತ್ತಿದೆ. ಇನ್ನು ಸ್ಪರ್ಧಿಗಳ ಬೆಡ್‌ಗಳು ಈ ಬಾರಿ ನೀಲಿ ಮತ್ತು ಹಸಿರು ಬಣ್ಣದಲ್ಲಿದೆ. ಕಳೆದ ಬಾರಿ ಎಲ್ಲೋ ಕಲರ್ ಬೆಡ್ ಶೀಟ್‌ಗಳು ಇದ್ದವು.

ಬಿಗ್ ಬಾಸ್ ವಾಯ್ಸ್ ಚೆಂಜ್ ಆಯ್ತಾ..?

ಇನ್ನು ಬಿಗ್ ಬಾಸ್ ಎಂದ ಕೂಡಲೇ ಅಶರೀರ ವಾಣಿಯೇ ಹೈಲೈಟ್. ಆ ಬಿಗ್ ಬಾಸ್‌ನ ವಾಯ್ಸ್ ಕೇಳಿ ಕೇಳಿನೆ ಸಾಕಷ್ಟು‌ಜನರಿಗೆ ಕುತೂಹಲ ಮೂಡಿದೆ. ಆ ಬಿಗ್ ಬಾಸ್ ಯಾರಿರಬಹುದು ಎಂಬ ಪ್ರಶ್ನೆ ಕಾಡಿದೆ. ಆ ವಾಯ್ಸ್ ಕೇಳೋಕೆನೆ ಚೆಂದ. ಕಿವಿಗೆ ಹಿತವೆನಿಸುತ್ತೆ, ಸ್ಪರ್ಧಿಗಳಿಗೆ ಎನರ್ಜಿ ಬೂಸ್ಟರ್ ಇದ್ದಂತೆ. ಆದರೆ ಈ ಬಾರಿ ವಾಯ್ಸ್ ಬದಲಾಗುವ ಮುನ್ಸೂಚನೆ ಕೊಟ್ಟಂತೆ ಆಗಿದೆ. ಮನೆ ರೆಡಿಯಾದ ವಿಡಿಯೋ ಹಂಚಿಕೊಂಡಿರುವ ಕಲರ್ಸ್ ಕನ್ನಡ, ಅದರಲ್ಲಿ ಬಿಗ್ ಬಾಸ್ ನ ಧ್ವನಿ ಬದಲಾಗಿರುವುದು ಗೊತ್ತಾಗುತ್ತದೆ. ಇದನ್ನು ಗಮನಿಸಿದವರು ಧ್ವನಿ ಚೇಂಜ್ ಬಗ್ಗೆಯೇ ಕಮೆಂಟ್ಸ್ ಹಾಕುತ್ತಿದ್ದಾರೆ.

More from Filmibeat

English summary
Buzz is that Bigg Boss Kannada Season 10 first time vioce has been changed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X