ಬಿಗ್ ಬಾಸ್‌ನಲ್ಲಿ ಎಣ್ಣೆ, ಸಿಗರೇಟ್ ; ಬಾತ್ ರೂಮ್‌ನಲ್ಲಿ ಪ್ರೇಮಿಗಳ ಕುಚ್ ಕುಚ್, ಮಹಾಸತ್ಯ ಹೇಳಿದ ಸ್ಫರ್ಧಿ
''ಬಿಗ್ ಬ್ರದರ್'' ಎಂಬ ವಿದೇಶಿ ಮೂಲದ ಶೋದ ಯಥಾವತ್ತು ನಕಲು ''ಬಿಗ್ ಬಾಸ್''. ಒಂದರ್ಧ ಡಜನ್ ವ್ಯಕ್ತಿಗಳನ್ನು ಮನೆಯಲ್ಲಿ ಗುಡ್ಡೆ ಹಾಕಿ ವಾರಪೂರ್ತಿ ಅವರ ನಡುವೆ ದ್ವೇಷ- ಅಸೂಯೆಯ ಕಿಚ್ಚು ಹತ್ತಿಸುವ ಈ ಕಾರ್ಯಕ್ರಮ 2006ರಲ್ಲಿ ಭಾರತದಲ್ಲಿ ಮೊದಲ ಬಾರಿ ಪ್ರಸಾರವಾಗಿತ್ತು. ''ಸೋನಿ'' ಟಿವಿಯಲ್ಲಿ ಪ್ರಸಾರವಾದ ಮೊದಲ ''ಬಿಗ್ ಬಾಸ್'' ಸೀಸನ್ ಸುಮಾರು 86 ದಿನಗಳ ಕಾಲ ನಡೆದಿತ್ತು. ಮೊದಲ ಪ್ರಯತ್ನದಲ್ಲಿಯೇ ಅಪಾರವಾದ ಯಶಸ್ಸನ್ನು ಕೂಡ ಈ ಕಾರ್ಯಕ್ರಮ ಪಡೆಯಿತು.
ಅಲ್ಲಿಂದ ಇಲ್ಲಿಯವರೆಗೆ ಈ ''ಬಿಗ್ ಬಾಸ್'' ಲಂಗು ಲಗಾಮು ಇಲ್ಲದೇ ಸಾಗುತ್ತಲೇ ಇದೆ. ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮದ ಕುರಿತು ಜನಸಾಮಾನ್ಯರಲ್ಲಿ ಹಲವರಿಗೆ ಕುತೂಹಲ ಇದೆ. ಉದಾಹರಣೆಗೆ ''ಬಿಗ್ ಬಾಸ್'' ಕಾರ್ಯಕ್ರಮ ಪೂರ್ವ ನಿರ್ಧಾರಿತವಾದದ್ದಾ..? ಕ್ಯಾಮರಾ ಕಣ್ಗಾವಲಿನಲ್ಲಿರುವ ಸ್ಫರ್ಧಿಗಳಿಗೆ ಅಲ್ಲಿ ಖಾಸಗಿ ಬದುಕೆನ್ನುವುದೇ ಇರಲ್ವಾ..? ಮನೆಯಲ್ಲಿ ಪ್ರೇಮದ ಬಲೆಯಲ್ಲಿ ಸಿಲುಕಿಕೊಳ್ಳುವ ಜೋಡಿ, ಮನೆಯಲ್ಲಿ ಆತ್ಮೀಯವಾದ ಕ್ಷಣ ಕಳೆಯುತ್ತಾ..? ಮದ್ಯಪಾನ ಮತ್ತು ಧೂಮಪಾನ ಮಾಡಲು ''ಬಿಗ್ ಬಾಸ್'' ಅನುಮತಿಯನ್ನು ನೀಡುತ್ತಾ..? ಅಲ್ಲಿ ಸಕಲ ಸೌಲಭ್ಯ ಇರುತ್ತಾ..?

ಹೀಗೆ ''ಬಿಗ್ ಬಾಸ್'' ಕಾರ್ಯಕ್ರಮವನ್ನು ಪ್ರತಿ ವರ್ಷ ಕಣ್ತುಂಬಿಕೊಳ್ಳುವಾಗ ಹಲವರಿಗೆ ಈ ಪ್ರಶ್ನೆಗಳು ಕಾಡುತ್ತವೆ. ಸದ್ಯ ಇಂತಹ ಪ್ರಶ್ನೆಗಳಿಗೆ ದಿವ್ಯಾ ಅಗರ್ವಾಲ್ ಉತ್ತರ ನೀಡಿದ್ದಾರೆ. ''ಬಿಗ್ ಬಾಸ್'' ನ ಹಲವು ರಹಸ್ಯಗಳನ್ನು ಹಂಚಿಕೊಂಡಿದ್ದಾರೆ.
ಹೌದು, ದಿವ್ಯಾ ಅಗರ್ವಾಲ್.. ಹಿಂದಿ ಕಿರುತೆರೆ ಮತ್ತು ಬೆಳ್ಳಿತೆರೆಯ ಚೆಲುವೆ. ''ರಾಗಿಣಿ ಎಂಎಂಎಸ್ 2''.. ''ದಿ ಫೈನ್ಲ್ ಎಕ್ಸಿಟ್''.. ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ದಿವ್ಯಾ ''ಕಾರ್ಟೆಲ್''.. ''ಅಭಯ್ -3''.. ಅಂತಹ ವೆಬ್ ಸರಣಿಗಳಲ್ಲಿ ಕೂಡ ಅಭಿನಯಿಸಿದ್ದಾರೆ.
ಇನ್ನು ನಿರೂಪಕಿಯಾಗಿ ಕೂಡ ಗುರುತಿಸಿಕೊಂಡಿರುವ ದಿವ್ಯಾ ಹಿಂದಿ ''ಬಿಗ್ ಬಾಸ್'' ಓಟಿಟಿ ಮೊದಲ ಸೀಸನ್‌ನ ವಿನ್ನರ್ ಕೂಡ ಹೌದು. ಕರಣ್ ಜೋಹರ್ ಸಾರಥ್ಯದಲ್ಲಿ ಮೂಡಿ ಬಂದಿದ್ದ ಈ ''ಬಿಗ್ ಬಾಸ್'' ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಅವರನ್ನು ಒಳಗೊಂಡಂತೆ ಹಲವರನ್ನು ಹಿಂದಿಕ್ಕಿ ದಿವ್ಯಾ ಟ್ರೋಫಿ ಮುಡಿಗೇರಿಸಿಕೊಂಡಿದ್ದರು. ಇಂಥಾ ದಿವ್ಯಾ ಅಗರ್ವಾಲ್ ಸದ್ಯ ''ಬಿಗ್ ಬಾಸ್'' ಮನೆಯ ವಾತಾವರಣ ಹೇಗಿರುತ್ತೆ ಎನ್ನುವುದನ್ನು ಹೇಳಿದ್ದಾರೆ.
ಈ ಕುರಿತು ''ಶಾರ್ದೂಲಜಿ'' ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ದಿವ್ಯಾ, ಕಾಫಿ ಪುಡಿ ಅಥವಾ ಟೊಮೇಟೊ ಕೆಚಪ್ ನಮಗೆ ಹೊರಗಡೆ ಅಗ್ಗ ಆದರೆ ಅದೇ ''ಬಿಗ್ ಬಾಸ್'' ಐಶಾರಾಮಿ ವಸ್ತು ಎಂದಿದ್ದಾರೆ. ಇವೆಲ್ಲ ಸುಲಭವಾಗಿ ಅಲ್ಲಿ ಸಿಗಲ್ಲ ಅದಕ್ಕಾಗಿ ನಾವು ಟಾಸ್ಕ್‌ನಲ್ಲಿ ಬೆವರು ಸುರಿಸಬೇಕು, ಗೆಲ್ಲಬೇಕು ಎಂದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸಿಗರೇಟ್
ಇನ್ನು ''ಬಿಗ್ ಬಾಸ್'' ಮನೆಯಲ್ಲಿ ಸಿಗರೇಟ್ ಸಿಗುತ್ತಾ..? ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ದಿವ್ಯಾ, ಸಿಗರೇಟ್ ಅಲ್ಲಿ ಆರಾಮಾಗಿ ನಿಮ್ಮ ಕೈಗೆಟಕುತ್ತೆ ಎಂದಿದ್ದಾರೆ. ರೇಷನ್ ಅಥವಾ ತಿನ್ನುವ ವಿಚಾರದಲ್ಲಿ ಅಲ್ಲಿ ನಿಯಮಗಳು ಕಠಿಣವಾಗಿವೆ, ಆದರೆ ಸಿಗರೇಟ್ ವಿಷಯದಲ್ಲಿ ''ಬಿಗ್ ಬಾಸ್''ದು ಉದಾರ ಮನೋಭಾವ ಎಂದು ಹೇಳಿದ್ದಾರೆ.
ಮುಂದುವರೆದು ಧೂಮಪಾನ ಮಾಡುವ ಸ್ಫರ್ಧಿಗಳಿಗಾಗಿಯೇ ಮನೆಯ ಒಳಾಂಗಣ ಮತ್ತು ಹೊರಾಂಗಣದ ಮಧ್ಯೆ ಒಂದು ಚಿಕ್ಕ ಸ್ಮೋಕಿಂಗ್ ಜೋನ್ ನಿರ್ಮಾಣ ಮಾಡಲಾಗಿರುತ್ತೆ ಎಂದು ಹೇಳಿರುವ ದಿವ್ಯಾ, ದಿನ ಬೆಳಗ್ಗೆ ಮನೆಯೊಳಗೆ ಕಾರ್ಯಕ್ರಮದ ಸಿಬ್ಬಂದಿಗಳು ಬಂದು ಸಿಗರೇಟ್ ಕುರಿತು ಸ್ಫರ್ಧಿಗಳ ಹತ್ತಿರ ಮಾಹಿತಿ ಪಡೆಯುತ್ತಾರೆ. ಆ ನಂತರ ಬಹುಬೇಗನೇ ಕೈಗೆ ಕೂಡ ತಲುಪಿಸುತ್ತಾರೆ ಎಂದಿದ್ದಾರೆ. ಎಲ್ಲರಿಗೆ ಗೊತ್ತಿರುವಂತೆ ಧೂಮಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಹಿನ್ನೆಲೆ ಸ್ಫರ್ಧಿಗಳ ಧೂಮಪಾನದ ದೃಶ್ಯಾವಳಿಗಳಿಗೆ ''ಬಿಗ್ ಬಾಸ್''ನಲ್ಲಿ ಕತ್ತರಿ ಹಾಕಲಾಗುತ್ತೆ.
ಬಿಗ್ ಬಾಸ್ ಮನೆಯಲ್ಲಿ ಎಣ್ಣೆ ಸಿಗುತ್ತಾ ..?
ಹಲವರಲ್ಲಿರುವ ಕಾಮನ್ ಪ್ರಶ್ನೆ ಇದು. ಈ ಪ್ರಶ್ನೆಗೆ ಉತ್ತರ ನೀಡಿರುವ ದಿವ್ಯಾ ''ಬಿಗ್ ಬಾಸ್'' ಈ ವಿಚಾರದಲ್ಲಿ ತುಂಬಾನೇ ನಿರ್ದಯಿ ಎಂದಿದ್ದಾರೆ. ಮನೆಯಲ್ಲಿ ಯಾವುದೇ ಕಾರಣಕ್ಕೂ ಎಣ್ಣೆ ನಿಮಗೆ ಸಿಗುವುದಿಲ್ಲ ಎಂದು ಹೇಳಿರುವ ದಿವ್ಯಾ ವೀಕೆಂಡ್ ಕಾರ್ಯಕ್ರಮದಲ್ಲಿ ಅಥವಾ ಯಾವುದಾದರೂ ಪಾರ್ಟಿ ಇದ್ದಾಗ ಹಣ್ಣಿನ ಜ್ಯೂಸ್ ಅಥವಾ ಬಣ್ಣ ಬಣ್ಣದ ತಂಪು ಪಾನೀಯಗಳನ್ನು ಮಾತ್ರ ಕೊಡುತ್ತಾರೆ, ಅದನ್ನೇ ಮದ್ಯ ಎಂದು ಹಲವರು ಅಂದುಕೊಂಡಿದ್ದಾರೆ ಆದರೆ ಅದು ತಪ್ಪು ಎಂದಿದ್ದಾರೆ. ಸಿಗರೇಟ್ ಹೊರತು ಪಡಿಸಿ ಮನೆಯಲ್ಲಿ ಬೇರೆ ಯಾವ ಮಾದಕ ಪದಾರ್ಥವೂ ಸಿಗಲ್ಲ ಎಂದು ಪುನರುಚ್ಚಿಸಿದ್ದಾರೆ.
ಬಾತ್ ರೂಮ್ ರಹಸ್ಯ ? ಸ್ಫರ್ಧಿಗಳ ಆತ್ಮೀಯತೆ
ಇನ್ನು ಇದೇ ವೇಳೆ ದಿವ್ಯಾ ಅವರಿಂದ ನಿರೂಪಕ ಶಾರ್ದೂಲ್ ಬಾತ್ ರೂಮ್ ರಹಸ್ಯ ತಿಳಿದುಕೊಳ್ಳುವ ಪ್ರಯತ್ನವನ್ನು ಕೂಡ ಮಾಡಿದ್ದಾರೆ. ''ಬಿಗ್ ಬಾಸ್'' ಮನೆಯಲ್ಲಿ ಪ್ರೀತಿ ಚಿಗುರಿದಾಗ ಅವರ ನಡುವೆ ದೈಹಿಕ ಸಂಪರ್ಕ ಇರುತ್ತಾ..? ಕ್ಯಾಮರಾ ಕಣ್ತಪ್ಪಿಸಿ ಇಬ್ಬರು ಹತ್ತಿರವಾಗುವ ಪ್ರಯತ್ನ ಮಾಡುತ್ತಾರಾ..? ಎಂದು ಕೇಳಲಾದ ಪ್ರಶ್ನೆಗೆ ನಗುತ್ತಾ ಉತ್ತರ ನೀಡಿರುವ ದಿವ್ಯಾ ನಮ್ಮನ್ನು ನೋಡುವ ಪ್ರೇಕ್ಷಕರಿಗೆ ಎಲ್ಲವೂ ಕಾಣಿಸದಿರಬಹುದು, ಆದರೆ ಮನೆಯೊಳಗಡೆ ಕ್ಯಾಮರಾ ಮುಂದೆ ಕಾಣಸದಿದ್ದರೂ ಕೂಡ ತುಂಬಾನೇ ವಿಷಯಗಳು ನಡೆಯುತ್ತಿರುತ್ತವೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಇದಕ್ಕೆ ಹೌದು, ಏನೇ ನಡೆದರೂ ಅದು ಬಾತ್ ರೂಮ್‌ನಲ್ಲೇ ನಡೆಯೋದು ಎಂದು ಶಾರ್ದೂಲ್ ತಮಾಷೆ ಮಾಡಿದಾಗ ದಿವ್ಯಾ ನಗುತ್ತಲೇ ತಮ್ಮ ಸಹಮತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಬಾತ್‌ರೂಮ್‌ನಲ್ಲಿ ಕ್ಯಾಮರಾ ಇಲ್ಲದಿರುವುದನ್ನೇ ಅಡ್ವಾಟೆಂಜ್ ಆಗಿ ತೆಗೆದುಕೊಂಡು ಹಲವರು ಪ್ರೇಮ ಸಲ್ಲಾಪ ಮಾಡುತ್ತಾರೆ ಎನ್ನುವುದನ್ನು ದಿವ್ಯಾ ಸ್ಪಷ್ಟಪಡಿಸಿದ್ದಾರೆ. ದಿವ್ಯಾ ಅವರಾಡಿದ ಈ ಮಾತುಗಳು ಸದ್ಯ ಚರ್ಚೆಗೆ ಗ್ರಾಸವಾಗಿವೆ.


Click it and Unblock the Notifications