ನಂಬರ್ ಒನ್ ಧಾರಾವಾಹಿಯಲ್ಲಿ ನಟಿಸುತ್ತಿರುವ ಈ ನಟಿ ಯಾರೆಂದು ಗುರುತಿಸಿ..!

By ಎಸ್ ಸುಮಂತ್

ಈಗಿನ ಟಾಪ್ ನಟಿಯರ ಹಳೇ ಫೋಟೋಗಳನ್ನು ನೋಡಿದಾಗ ಖಂಡಿತ ತಕ್ಷಣ ಅವರ ಗುರುತು ಹಿಡಿಯುವುದು ಕಷ್ಟವಾಗುತ್ತದೆ. ಆದರೆ ಆ ಫೋಟೋದಲ್ಲೂ ಮುದ್ದು ಮುದ್ದಾಗಿ ಕಾಣಿಸುತ್ತಾರೆ. ಅಂಥದ್ದೊಂದು ಮುದ್ದಾದ ಫೋಟೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ಫೋಟೋ ನೋಡಿ ಯಾರಿವರು ಎಂದು ಚರ್ಚೆ ಶುರುವಾಗಿದೆ. ಈ ಫೋಟೋ ನೋಡಿದಾಗಲೂ ನಿಮಗೂ ಹಾಗೇ ಅನ್ನಿಸುತ್ತೆ. ಈ ಮುದ್ದಾದ ಹುಡುಗಿಯನ್ನು ಎಲ್ಲೋ ನೋಡಿದ್ದೇವೆ ಅಂತ.

ಈಗ ಈ ನಟಿ ಟಾಪ್ ಒನ್ ಸೀರಿಯಲ್‌ನಲ್ಲಿ ಅಭಿನಯಿಸಿದ್ದಾರೆ. ಚಟಪಟ ಚಟಪಟ ಅಂತ ಮಾತಾಡ್ತಾ ಇರುತ್ತಾರೆ. ಅತ್ತೆ-ಮಾವನಿಗೆ ಈಕೆ ಎಂದರೆ ಮುದ್ದು ಜಾಸ್ತಿ. ಮಾವನ ಮಗನ ಬಗ್ಗೆ ಮನಸ್ಸಲ್ಲಿಯೇ ಪ್ರೀತಿ ಹುಟ್ಟಿದೆ. ಈ ಇಬ್ಬರು ಒಂದಾಗ್ಲಿ ಅಂತಾನೇ ವೀಕ್ಷಕರು ಬಯಸುತ್ತಿದ್ದಾರೆ. ಹಾಗಾದ್ರೆ ಆ ನಟಿ ಯಾರು..? ಯಾವ ಸೀರಿಯಲ್ ಎಂಬ ಕಂಪ್ಲೀಟ್ ಮಾಹಿತಿ ಇಲ್ಲಿದೆ.

Can you guess actress name in this pic She is acting in Famous kannada serial

ವಿಶ್ವನನ್ನು ಇಷ್ಟಪಡುತ್ತಿರುವ ತನು

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ವಿಶ್ವ ಹಾಗೂ ಜಾಹ್ನವಿ ತುಂಬಾನೇ ಕ್ಲೋಸ್ ಫ್ರೆಂಡ್ಸ್ ಆಗಿದ್ದವರು. ಆದರೆ ವಿಶ್ವನಿಗೆ ಜಾನು ಮೇಲೆ ವಿಪರೀತ ಲವ್ ಆಗಿತ್ತು. ಅದನ್ನ ಹೇಳಿಕೊಳ್ಳುವುದಕ್ಕೂ ಮುನ್ನವೇ ಜಾನು ಮದುವೆಯಾಗಿ ಹೋಗಿಬಿಟ್ಟಳು. ವಿಶ್ವ ಕುಡಿತಕ್ಕೆ ದಾಸನಾಗಿದ್ದ. ಅದಾದ ಮೇಲೆ ವಿಶ್ವನ ಬದುಕಲ್ಲಿ ಬಂದಿದ್ದೇ ತನು. ಈಗ ತನುಗೆ ವಿಶ್ವನ ಮೇಲೆ ಲವ್ವಾಗಿದೆ. ಆದರೆ ವಿಶ್ವನಿಗೆ ಆ ಭಾವನೆಯೇ ಬಂದಿಲ್ಲ.

ತನು ಪಾತ್ರ ಮಾಡುತ್ತಿರುವ ಯುಕ್ತ

ತನು ತುಂಬಾ ಮುದ್ದು ಮುದ್ದಾದ ಹುಡುಗಿ. ತನು ಮಾತಾಡ್ತಾ ಇದ್ದರೆ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ವಿಶ್ವನನ್ನು ಕಾಡುವಾಗ ವಾಯ್ ನೊಂದವರ ಜೊತೆಗೆ ನೋವು ಮರೆಸುವುದಕ್ಕೆ ಇಂತಹ ಹುಡುಗಿ ಜೊತೆಗಿರಬೇಕು ಎಂದೇ ಎಷ್ಟೋ ಜನ ಫೀಲ್ ಮಾಡಿಕೊಂಡಿದ್ದಾರೆ. ಅಂತ ಎಲ್ಲರ ಮೆಚ್ಚಿನ ಪಾತ್ರ ಮಾಡಿರುವ ತನು ನಿಜವಾದ ಹೆಸರು ಯುಕ್ತ.

ಭವಿಶ್ ಜೊತೆಗೆ ರೀಲ್ಸ್ ಮಾಡುವ ಯುಕ್ತ

ಯುಕ್ತ ಮತ್ತು ಭವಿಶ್ ಜೋಡಿಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲ ಈ ಜೋಡಿ ಕೂಡ ಟ್ರೆಂಡಿಂಗ್ ನಲ್ಲಿದೆ. ಲಕ್ಷ್ಮೀ ನಿವಾಸ ಶೂಟಿಂಗ್ ಗ್ಯಾಪ್ ಸಿಕ್ಕಿದ್ರೆ ಸಾಕು ರೀಲ್ಸ್ ಮಾಡುವುದರಲ್ಲಿ ಬ್ಯುಸಿಯಾಗಿ ಬಿಡುತ್ತಾರೆ. ತೆರೆ ಮೇಲೆ ಮಾತ್ರವಲ್ಲ ತೆರೆ ಹಿಂದೆ ಕೂಡ ಈ ಜೋಡಿ ಸೂಪರ್ ಎನಿಸಿಕೊಂಡಿದೆ. ಒಳ್ಳೆ ಜೋಡಿ ಅಂತಾನೇ ಎಲ್ಲರು ಕಮೆಂಟ್ ಹಾಕುತ್ತಾರೆ. ಬೇಗ ಮದುವೆ ಆಗಿ ಅಂತ ಕೂಡ ಹೇಳುತ್ತಾರೆ. ಆದರೆ ಸೀರಿಯಲ್ ನಲ್ಲಿ ಮಾತ್ರ.

Can you guess actress name in this pic She is acting in Famous kannada serial

ಪೆಟ್ ಲವ್ವರ್ ಈ ಯುಕ್ತ

ಯುಕ್ತ ಸೋಷಿಯಲ್ ಮೀಡಿಯಾ ಬಳಕೆ ಮಾಡುವುದೇ ಕಡಿಮೆ ಅನ್ನಿಸುತ್ತೆ. ಪೋಸ್ಟ್‌ಗಳು ಕೂಡ ತುಂಬಾನೇ ಕಡಿಮೆ ಹಾಕಿದ್ದಾರೆ. ಇತ್ತಿಚೆಗೆ ವಿಶ್ವನ ಜೊತೆಗೆ ರೀಲ್ಸ್ ಮಾಡಿರುವ ವಿಡಿಯೋಗಳು, ಆಗಾಗ ಟ್ರೆಡಿಷನಲ್ ಲುಕ್‌ನಲ್ಲಿ ಮಾಡಿಸಿರುವ ಫೋಟೋಶೂಟ್ ಇದೆಲ್ಲವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಹಾಗೇ ಕಡಿಮೆ ಆಕ್ಟೀವ್ ಇರೋದ್ರಿಂದ ಫಾಲೋವರ್ಸ್ ಕೂಡ ಕಡಿಮೆ ಇದಾರೆ. ಇನ್ನು 7 ಸಾವಿರ ಅಷ್ಟೇ ಆಗಿರೋದು. ಆದರೆ ಯುಕ್ತಿಯನ್ನು ಇಷ್ಟ ಪಡುವವರು ಹೆಚ್ಚಾಗಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ರೆ ಫಾಲೋವರ್ಸ್ ಹೆಚ್ಚಾಗಬಹುದು.

More from Filmibeat

English summary
zee kannada serial Lakshmi nivasa Written Update on yukti social media update. Here is the details about yukti real life.
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X