Neha Gowda: ಹೊಸ ಔಟ್‌ಫಿಟ್ ಬಣ್ಣ ಗೆಸ್ ಮಾಡಲು ಹೇಳಿದ ನಟಿ ನೇಹಾ ಗೌಡ

ಕನ್ನಡದಲ್ಲಿ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಮೂಲಕ ಗೊಂಬೆ ಎಂದೇ ಜನಪ್ರಿಯತೆ ಪಡೆದಿರುವ ನೇಹಾ ಗೌಡ, ತೆಲುಗು ಹಾಗೂ ತಮಿಳಿನ ಧಾರಾವಾಹಿಗಳಲ್ಲೂ ನಟಿಸಿ ಫೇಮಸ್ ಆಗಿದ್ದಾರೆ.

ಧಾರಾವಾಹಿ ಅಷ್ಟೇ ಅಲ್ಲದೇ, ರಿಯಾಲಿಟಿ ಶೋಗಳಲ್ಲೂ ನೇಹಾ ಕಾಣಿಸಿಕೊಂಡಿದ್ದಾರೆ. ತಮ್ಮ ನಟನೆಗೆ ನೇಹಾ ಗೌಡ ಅವರು ಹಲವು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದಾರೆ.

Can you guess the real colour of this dress? Neha gowda Post Viral

ಸರಿ ಸುಮಾರು 6 ವರ್ಷಗಳ ಕಾಲ ಮೂಡಿ ಬಂದ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಮೂಲಕ ನೇಹಾ ಗೌಡ ಫೇಮಸ್ ಆಗಿದ್ದರು. ಈಗ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ.

Actrss Manasa Joshi: "ತಾಯಿಯಾದ ಬಳಿಕ ಪ್ರತಿದಿನವೂ ಸವಾಲುಗಳನ್ನು ಎದುರಿಸಬೇಕಾಗುತ್ತೆ" -ಮಾನಸಾ ಜೋಶಿ

ಗೊಂಬೆ ನಟಿಸಿದ ಧಾರಾವಾಹಿಗಳು

ನೇಹಾ ಗೌಡ ಮೊದಲ ಧಾರಾವಾಹಿ 'ಸ್ವಾತಿ ಚುನುಕುಲು'. ತೆಲುಗಿನ ಈ ಧಾರಾವಾಹಿ ನೇಹಾ ಗೌಡ ಅವರಿಗೆ ಅಷ್ಟೇನು ಹೆಸರು ಕೊಡದಿದ್ದರೂ, ಇವರ ನಟನೆಗೆ ಮನ ಸೋಲದವರಿಲ್ಲ. ಇದಾದ ಬಳಿಕ 'ದೀಪವೂ ನಿನ್ನದೇ ಗಾಳಿಯೂ ನಿನ್ನದೇ', 'ಕಲ್ಯಾಣ ಪರಿಸು' ಎಂಬ ಧಾರಾವಾಹಿಗಳಲ್ಲಿ ನಟಿಸಿದ್ದರು. ಇದಾದ ಮೇಲೆ ಕಿರುತೆರೆಯಲ್ಲಿ ಮುಂದುವರೆಯುವ ಆಸೆ ಏನೂ ಇರಲಿಲ್ಲ. ಓದು, ಕೆರಿಯರ್ ಎಂದು ನೇಹಾ ತಮ್ಮ ಲೈಫ್‌ನಲ್ಲಿ ಬ್ಯುಸಿಯಾಗಿದ್ದರು. ಬಿಕಾಂ ಓದುತ್ತಿರುವಾಗ ನೇಹಾ ಗೌಡ ಅವರು ಫ್ಯಾಷನ್ ಡಿಸೈನರ್ ಆಗಬೇಕು ಎಂದು ಆಸೆ ಪಟ್ಟಿದ್ದರಂತೆ. 'ಲಕ್ಷ್ಮೀ ಬಾರಮ್ಮ' ಸೀರಿಯಲ್ ನಲ್ಲಿ ಗೊಂಬೆ ಪಾತ್ರ ಚೆನ್ನಾಗಿದೆ ಎಂದು ನಟಿಸಲು ಮುಂದಾದರಂತೆ.

Can you guess the real colour of this dress? Neha gowda Post Viral


ಕಿರುಚಿತ್ರಗಳಲ್ಲಿ ನೇಹಾ ನಟನೆ

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಮಾಡುವಾಗ ಕಿರುತೆರೆಯಲ್ಲೇ ಮುಂದುವರೆಯಬೇಕು ಎಂಬ ಆಲೋಚನೆ ನೇಹಾ ಗೌಡ ಅವರಿಗೆ ಇರಲಿಲ್ಲ. ಇದರಲ್ಲಿನ ನೇಹಾ ಅವರ ಗೊಂಬೆಯ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ನೇಹಾ ಅವರ ಅಭಿನಯವನ್ನು ಇಷ್ಟಪಟ್ಟವರು ಸೋಶಿಯಲ್ ಮೀಡಿಯಾದಲ್ಲಿ ನೇಹಾ ಹೆಸರಲ್ಲಿ ಫ್ಯಾನ್ಸ್ ಪೇಜ್‌ಗಳನ್ನು ಕೂಡ ತೆರೆದಿದ್ದಾರೆ. ನೇಹಾ ಗೌಡ ಅವರು ಕೇವಲ ಸೀರಿಯಲ್ ಅಷ್ಟೇ ಅಲ್ಲದೇ, ಕಿರುಚಿತ್ರ ಹಾಗೂ ರಿಯಾಲಿಟಿ ಶೋನಲ್ಲೂ ಭಾಗಿಯಾಗಿದ್ದಾರೆ. 'ಟೇಕ್ ಆಫ್' ಎಂಬ ಶಾರ್ಟ್ ಮೂವಿಯಲ್ಲಿ ನೇಹಾ ನಟಿಸಿದ್ದು, ಇದರಲ್ಲಿ ಅವರ ಪಾತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

ರಿಯಾಲಿ ಶೋಗಳಲ್ಲಿ ನೇಹಾ ಗೌಡ

ಕನ್ನಡದ ಜೊತೆಗೆ ತೆಲುಗು, ತಮಿಳು ಭಾಷೆಗಳಲ್ಲೂ ಕೂಡ ನೇಹಾ ಗೌಡ ಕೆಲಸ ಮಾಡಿದ್ದಾರೆ. ಇನ್ನು ಕನ್ನಡದ ರಿಯಾಲಿಟಿ ಶೋನಲ್ಲೂ ನೇಹಾ ಗೌಡ ಭಾಗವಹಿಸಿದ್ದರು. ಕಳೆದ ವರ್ಷ ಪ್ರಸಾರವಾಗಿದ್ದ ರಾಜಾ-ರಾಣಿ ರಿಯಾಲಿಟಿ ಶೋನಲ್ಲಿ ನೇಹಾ ಗೌಡ ಹಾಗೂ ಅವರ ಪತಿ ಚಂದನ್ ಭಾಗವಹಿಸಿದ್ದರು. ಬೆಂಗಳೂರಿನಲ್ಲಿ ಚಂದನ್ ಜೊತೆ ಸಪ್ತಪದಿ ತುಳಿದ ನೇಹಾ ಗೌಡ ಅವರ ಮದುವೆಗೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದರು. ಚಂದನ್ ಹಾಗೂ ನೇಹಾ ಬಾಲ್ಯದ ಸ್ನೇಹಿತರು. ಇಬ್ಬರು ಪ್ರೀತಿಸಿ, ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದಾರೆ. ಮದುವೆಯಾಗಿ ಫಾರಿನ್ ನಲ್ಲಿದ್ದ ನೇಹಾ ನಂತರ 'ರಾಜಾ ರಾಣಿ', 'ಬಿಗ್ ಬಾಸ್'ನಲ್ಲಿ ಭಾಗವಹಿಸಿ, ಈಗ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಹೊಸ ಉಡುಗೆ ಬಣ್ಣ ಗೆಸ್ ಮಾಡಿ

ನಟನೆ ಜೊತೆಗೆ ಆಗಾಗ ಟ್ರಿಪ್ ಗೆ ಹೋಗುವುದು, ಫೋಟೋಶೂಟ್ ಮಾಡಿಸುವುದನ್ನು ನೇಹಾ ಹವ್ಯಾಸ. ಹೆಚ್ಚಾಗಿ ಫ್ಯಾಮಿಲಿ ಜೊತೆಗೆ ಕಾಲ ಕಳೆಯುವ ನೇಹಾ ಗೌಡ, ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಗ್ರ್ಯಾಂಡ್ ಲುಕ್ ಕೊಡುವ ಲೆಹಂಗಾವನ್ನು ಧರಿಸಿದ್ದಾರೆ. ಆದರೆ, ಇದರ ಫೊಟೋ ಬ್ಲ್ಯಾಕ್ ಆಂಡ್ ವೈಟ್ ಹಾಕಿದ್ದು, ನನ್ನ ಔಟ್ ಫಿಟ್‌ನ ಬಣ್ಣ ಗೆಸ್ ಮಾಡಿ ಎಂದು ಪೋಸ್ಟ್ ಮಾಡಿದ್ದಾರೆ. ಅದಾಗಲೇ ಅಭಿಮಾನಿಗಳು ಕಲರ್ ಗೆಸ್ ಮಾಡಿದ್ದು, ರೆಡ್ ಕಲರ್ ಅನ್ನು 44%, ನೀಲಿ ಬಣ್ಣ ಎಂದು 18%, ಗ್ರೀನ್ ಕಲರ್ ಎಂದು 14% ಮಂದಿ ಹಾಗೂ ಪರ್ಪಲ್ ಎಂದು 24% ಮಂದಿ ಸೆಲೆಕ್ಟ್ ಮಾಡಿದ್ದಾರೆ.

More from Filmibeat

English summary
Neha gowda instagram followers to guess the real colour of this dress?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X