'ಮಗಳು ಜಾನಕಿ'ಯ ಕಥೆ ಮುಂದುವರೆಸಿ, ಟಿ.ಎನ್.ಎಸ್ ಕಡೆಯಿಂದ ಸಂಭಾವನೆ ಪಡೆಯಿರಿ.!
ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಮಗಳು ಜಾನಕಿ' ಧಾರಾವಾಹಿ 48 ಸಂಚಿಕೆಗಳನ್ನು ಪೂರೈಸಿದೆ ಅಷ್ಟೇ. ಅಷ್ಟು ಬೇಗ 'ಮಗಳು ಜಾನಕಿ'ಯ ಕಥೆ ರೋಚಕ ಘಟ್ಟ ತಲುಪಿದೆ.
ವೀಕ್ಷಕರ ಮನೆ ಮಗಳಾಗಿರುವ ಜಾನಕಿಯ ಮದುವೆ ನಿಂತು ಹೋಗಿದೆ. ಆನಂದ್ ಬೆಳಗೂರು ಜೊತೆಗೆ ನಡೆಯಬೇಕಿದ್ದ ಜಾನಕಿಯ ವಿವಾಹ ಮುರಿದು ಬಿದ್ದಿದೆ. ಇತ್ತ ಜಾನಕಿ ಜೊತೆಗೆ ನಡೆಯಬೇಕಿದ್ದ ತನ್ನ ಮದುವೆ ನಿಂತು ಹೋಗಿದ್ದಕ್ಕೆ ನಿರಂಜನ್ ಖುಷಿಯಾಗಿರುವಾಗಲೇ ಅವರಿಗೆ 'ಬಿಗ್' ಶಾಕ್ ಸಿಕ್ಕಿದೆ. ಯಾಕಂದ್ರೆ, ನಿರಂಜನ್ ಜೊತೆಗೆ ಜಾನಕಿ ಮದುವೆ ಮಾಡಿಸಲು ತಾಯಿ ರಶ್ಮಿ ಮುಂದಾಗಿದ್ದಾರೆ.
ಚಂದು ಭಾರ್ಗಿ ಬೆದರಿಕೆಗೆ ಮಣಿದು ಮದುವೆಗೆ ನಿರಂಜನ್ ಒಪ್ಪಿಗೆ ಕೊಟ್ಟಿದ್ದಾರೆ. ಅಚ್ಚರಿ ಅಂದ್ರೆ, ನಿರಂಜನ್ ರನ್ನ ಮದುವೆ ಆಗಲು ಜಾನಕಿ ಕೂಡ ಸಮ್ಮತಿ ಸೂಚಿಸಿದ್ದಾರೆ.
ಹಾಗಾದ್ರೆ, ನಿರಂಜನ್-ಜಾನಕಿ ಮದುವೆ ಆಗುತ್ತಾರಾ.? ಇವರಿಬ್ಬರ ಮದುವೆ ನಡೆದರೆ ಮುಂದಿನ ಕಥೆ ಏನು.? ಅದಾಗದಿದ್ದರೆ, ಜಾನಕಿಯ ನಡೆ ಏನು.? ಜಾನಕಿಯ ಈ ಮುಂದಿನ ಕಥೆಯನ್ನ ಹೆಣೆಯುವ ಜವಾಬ್ದಾರಿಯನ್ನ ನಿರ್ದೇಶಕ ಟಿ.ಎನ್.ಸೀತಾರಾಮ್ ವೀಕ್ಷಕರಿಗೆ ಬಿಟ್ಟಿದ್ದಾರೆ.
ಎಲ್ಲರಿಗೂ ಇಷ್ಟ ಆಗುವ ಹಾಗೆ ಜಾನಕಿಯ ಕಥೆಯನ್ನ ನೀವು ಬರೆದರೆ, ನಿಮಗೆ ಟಿ.ಎನ್.ಸೀತಾರಾಮ್ ಸೂಕ್ತ ಸಂಭಾವನೆ ಕೂಡ ಕೊಡ್ತಾರೆ.! ಅದಕ್ಕೆ ಸಾಕ್ಷಿ ಇಲ್ಲಿದೆ, ನೋಡಿರಿ...
ಫೇಸ್ ಬುಕ್ ನಲ್ಲಿ ಟಿ.ಎನ್.ಎಸ್ ಪೋಸ್ಟ್
''ಆನಂದ, ಜಾನಕಿಯ ಮದುವೆ ಆಗಲಿಲ್ಲ (ಮುಂದೆ ಆಗಬಾರದು ಎಂದು ಇಲ್ಲ)
1) ಮದುವೆ ಆಗಿದ್ದರೆ ಕಥೆ ಹೇಗೆ ಮುಂದುವರೆಯಬಹುದಿತ್ತು.?
2) ನಿರಂಜನನ ಜೊತೆ ಮದುವೆ ಆದರೆ ಕಥೆ ಹೇಗೆ ಮುಂದುವರೆಯಬಹುದು.?
3) ಎರಡೂ ಆಗದಿದ್ದರೆ ಹೇಗೆ ಕಥೆ ಮುಂದುವರೆಯಬಹುದು.?
ಇಷ್ಟವಾಗುವ ಕಥೆ (ಒಪ್ಪುವ ಕಥೆ) ಕೊಟ್ಟವರನ್ನು ನಮ್ಮ ತಂಡಕ್ಕೆ ಸೇರಿಸಿಕೊಂಡು ಸಲಹೆ ಪಡೆದು ನಮ್ಮ ಕೈಲಿ ಸಾಧ್ಯವಾದ ಸಂಭಾವನೆ ಕೊಡಲಾಗುವುದು. ಆ ಉದ್ದೇಶ ಇಲ್ಲದೇ ಸುಮ್ಮನೆ ಬರೆದರೆ ಕೂಡ ಸಂತೋಷ. ಇನ್ನು 2 ದಿನದೊಳಗೆ ನಿಮಗೆ ಅನಿಸಿದ್ದನ್ನು ದಯವಿಟ್ಟು ಬರೆಯಿರಿ'' ಎಂದು ಟಿ.ಎನ್.ಸೀತಾರಾಮ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ನೂರಾರು ಕಾಮೆಂಟ್ಸ್.!
ಟಿ.ಎನ್.ಸೀತಾರಾಮ್ ಹೀಗೆ ಪೋಸ್ಟ್ ಹಾಕುತ್ತಿದ್ದಂತೆಯೇ, ನೂರಾರು ಕಾಮೆಂಟ್ಸ್ ಲಭ್ಯವಾಗಿದೆ. 'ಮಗಳು ಜಾನಕಿ'ಯ ಕಥೆಯನ್ನ ನೂರಾರು ವೀಕ್ಷಕರು ಮುಂದುವರೆಸಿದ್ದಾರೆ.
ಜಾನಕಿಯ ಮುಗ್ಧತೆಗೆ ಸೋಲಿಲ್ಲ.!
ವೀಕ್ಷಕರೊಬ್ಬರ ಪ್ರಕಾರ, ಜಾನಕಿಯ ಮುಂದಿನ ಕಥೆ ಹೀಗಿರಬೇಕು.! ಸಿ.ಎಸ್.ಪಿಯ ಒಳ್ಳೆತನಕ್ಕೆ, ಸತ್ಯಕ್ಕೆ, ನ್ಯಾಯಕ್ಕೆ ಸಾವಾಗಬಾರದು. ಹಾಗೇ ಜಾನಕಿಯ ಮುಗ್ಧತೆ ಸೋಲಬಾರದು ಎಂದು ವೀಕ್ಷಕರೊಬ್ಬರು ಕಥೆಯನ್ನ ಹೇಗೆ ವಿವರಿಸಿದ್ದಾರೆ ಅಂತ ನೀವೇ ಓದಿರಿ...

ಮದುವೆ ಬೇಡ ಎನ್ನುವವರೇ ಹೆಚ್ಚು.!
ಟಿ.ಎನ್.ಎಸ್ ಅವರ ಪೋಸ್ಟ್ ಗೆ ಕಾಮೆಂಟ್ ಮಾಡಿರುವ ಬಹುತೇಕ ಮಂದಿ ''ನಿರಂಜನ್ ಜೊತೆಗೆ ಮದುವೆ ಬೇಡ'' ಎಂದಿದ್ದಾರೆ. ಇನ್ನೂ ಕೆಲವರು ''ಮದುವೆಯಿಂದಷ್ಟೇ ಜೀವನ ಅಲ್ಲ. ಮದುವೆ ಆಗದ ಜಾನಕಿಯ ಸಾಧನೆ ಕಥೆಯನ್ನ ತೋರಿಸಿ'' ಎಂದು ಒತ್ತಾಯ ಮಾಡುತ್ತಿದ್ದಾರೆ. ಸಿ.ಎಸ್.ಪಿ ಸಾಹೇಬ್ರ ತಲೆಯಲ್ಲಿ ಈಗೇನು ಓಡುತ್ತಿದೆಯೋ.? ಏನೋ.!


Click it and Unblock the Notifications











