ಈ ವಾರ ನಾಮಿನೇಟ್ ಆಗಿದ್ದ 'ಜೆಕೆ' ಕ್ಷಣದಲ್ಲೇ ಸೇಫ್ ಆಗ್ಬಿಟ್ರು.! ಹೇಗೆ?

By Bharath Kumar

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ಸೋಮವಾರ ನಡೆಯಿತು. ಈ ವಾರ ಒಟ್ಟು 9 ಸ್ಪರ್ಧಿಗಳು 'ಬಿಗ್ ಬಾಸ್' ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಆದ್ರೆ, 9 ಜನರ ಪೈಕಿ ನಟ 'ಜೆಕೆ' ಸೇಫ್ ಆದರು.

ಈ ವಾರದ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆದ ಶ್ರುತಿ ಪ್ರಕಾಶ್ ಅವರ ಕೃಪಾಕಟಾಕ್ಷದಿಂದ 'ಜೆಕೆ' ನಾಮಿನೇಷನ್ ಪ್ರಕ್ರಿಯೆಯಿಂದ ಉಳಿದುಕೊಂಡರು.

ಅಷ್ಟಕ್ಕೂ, ನಾಮಿನೇಟ್ ಆಗಿದ್ದ ಜೆಕೆಯನ್ನ ಕ್ಯಾಪ್ಟನ್ ಉಳಿಸಿಕೊಂಡಿದ್ದೇಕೆ? ಜೆಕೆ ಅವರನ್ನ ನಾಮಿನೇಟ್ ಮಾಡಿದವರು ಯಾರು? ಎಂದು ತಿಳಿಯಲು ಮುಂದೆ ಓದಿ.....

ಈ ವಾರ 'ಜೆಕೆ'ನಾಮಿನೇಟ್ ಆಗಿದ್ದರು.!

ಈ ವಾರ 'ಜೆಕೆ'ನಾಮಿನೇಟ್ ಆಗಿದ್ದರು.!

ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ನಟ ಕಾರ್ತಿಕ್ ಜಯರಾಂ ನಾಮಿನೇಟ್ ಆಗಿದ್ದರು. ಚಂದನ್ ಶೆಟ್ಟಿ ಮತ್ತು ಸಮೀರಾಚಾರ್ಯ ವೋಟ್ ಮಾಡಿದ್ದರು.

ಕ್ಯಾಪ್ಟನ್ ಕೃಪಾಕಟಾಕ್ಷ

ಕ್ಯಾಪ್ಟನ್ ಕೃಪಾಕಟಾಕ್ಷ

2 ವೋಟ್ ಪಡೆದು ನಾಮಿನೇಟ್ ಆಗಿದ್ದ 'ಜೆಕೆ' ಅವರನ್ನ ಮನೆಯ ಕ್ಯಾಪ್ಟನ್ ಶ್ರುತಿ ಪ್ರಕಾಶ್ ಉಳಿಸಿಕೊಂಡರು. ನಾಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯ ಒಬ್ಬ ಸದಸ್ಯರನ್ನ ಉಳಿಸಿಕೊಳ್ಳುವ ಅಧಿಕಾರವನ್ನ ಕ್ಯಾಪ್ಟನ್ ಶ್ರುತಿ ಅವರಿಗೆ ನೀಡಲಾಗಿತ್ತು. ಹೀಗಾಗಿ, ಶ್ರುತಿ ಅವರು ಜೆಕೆ ಅವರನ್ನ ಉಳಿಸಿಕೊಂಡರು.

ನಾಮಿನೇಷನ್ ನಿಂದ ಬಚಾವ್

ನಾಮಿನೇಷನ್ ನಿಂದ ಬಚಾವ್

ಶ್ರುತಿ ಪ್ರಕಾಶ್ ಅವರ ಕೃಪಾಕಟಾಕ್ಷದಿಂದ ಈ ವಾರ ನಾಮಿನೇಷನ್ ಆಗಿದ್ದ ಒಟ್ಟು 9 ಜನರ ಪೈಕಿ 'ಜೆಕೆ' ಬಚಾವ್ ಆದರು. ಈ ಮೂಲಕ ಎರಡನೇ ವಾರ 'ಜೆಕೆ' ಸೇಫ್ ಆಗಿ ಆಟವಾಡಬಹುದಾಗಿದೆ.

ಈ ವಾರ ನಾಮಿನೇಟ್ ಆಗಿರುವವರು ಯಾರು?

ಈ ವಾರ ನಾಮಿನೇಟ್ ಆಗಿರುವವರು ಯಾರು?

'ಜೆಕೆ' ಅವರನ್ನ ಹೊರತು ಪಡಿಸಿ, ದಿವಾಕರ್, ಮೇಘ, ಸಮೀರಾಚಾರ್ಯ, ಜಗನ್, ರಿಯಾಜ್, ಆಶಿತಾ, ಕೃಷಿ, ದಯಾಳ್ ಪದ್ಮನಾಭನ್ ಅವರು ಈ ವಾರ ಬಿಗ್ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.

More from Filmibeat

English summary
Bigg boss Kannada 5: Captain Shruthi Prakash Saves JK from second week's nomination process.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X