Sanvi Sudeep: ಸಾನ್ವಿಗೆ ಡಿಸ್ಟರ್ಬ್ ಮಾಡಿದ ಬಿಗ್‌ಬಾಸ್ ರಜತ್; ಗರಂ ಆಗಿ ಕಿಚ್ಚನ ಮಗಳು ಹೇಳಿದ್ದೇನು?
ಈಗಂತೂ ಸ್ಯಾಂಡಲ್‌ವುಡ್ ಸ್ಟಾರ್ಸ್ ಕ್ರಿಕೆಟ್ ಆಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನ ನೋಡೋದಕ್ಕೆ ಕನ್ನಡ ಸಿನಿ ಪ್ರೇಮಿಗಳಿಗೂ ಖುಷಿಯೋ ಖುಷಿ. ಪ್ರತಿ ಸಿನಿಮಾಗೂ ತೆರೆ ಮೇಲೆ ವಿಭಿನ್ನ ಪಾತ್ರಗಳ ಮೂಲಕವೇ ರಂಜಿಸುತ್ತಿದ್ದರು. ಇದೀಗ ಬ್ಯಾಟ್ ಹಿಡಿದು ಫೀಲ್ಡ್‌ನಲ್ಲಿ ಒಬ್ಬೊಬ್ಬರೂ ವಿಭಿನ್ನವಾದ ಆಟ ತೋರಿಸುತ್ತಿದ್ದಾರೆ. ಅವರ ಅಭಿಮಾನಿಗಳಂತು ಫುಲ್ ಖುಷಿಯಾಗಿದ್ದಾರೆ.
ಇನ್ನು ಸುದೀಪ್ ಮಗಳು ಸಾನ್ವಿ ಅಪ್ಪನ ಜೊತೆಗೆ ಸದಾ ನಿಲ್ಲುತ್ತಾರೆ. ಅವರ ಸಿನಿಮಾಗಳಿಗೆ ಸಪೋರ್ಟ್ ಮಾಡುತ್ತಾರೆ, ಅಪ್ಪನಿಗಾಗಿ ಹಾಡುತ್ತಾರೆ. ಅವರ ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ಇದೀಗ ಸಿಸಿಎಲ್‌ನಲ್ಲಿಯೂ ಅಪ್ಪನ ಆಟಕ್ಕೆ ಮನಸೋತಿದ್ದಾರೆ. ಫೀಲ್ಡ್‌ನಲ್ಲಿ ನಿಂತು ಖುಷಿ ಪಟ್ಟಿದ್ದಾರೆ.

ಬ್ಯಾಟಿಂಗ್, ಬೌಲಿಂಗ್ ನೋಡಿ ಖುಷಿ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸಿಸಿಎಲ್ ಪಂದ್ಯಗಳು ನಡೆದಿವೆ. ಇದರಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ ನಡುವಿನ ಪಂದ್ಯದಲ್ಲಿ ಫೈನಲಿ ಗೆದ್ದು ಬೀಗಿದ್ದು ನಮ್ಮ ಸ್ಯಾಂಡಲ್ ಸ್ಟಾರ್ಸ್. ಈ ಪಂದ್ಯವನ್ನು ನೋಡುವುದಕ್ಕೆ ಸಾನ್ವಿ ಸುದೀಪ್ ಹಾಗೂ ಪ್ರಿಯಾ ಸುದೀಪ್ ಕೂಡ ಬಂದಿದ್ದರು. ನಮ್ಮ ಸ್ಟಾರ್ಸ್ ಬ್ಯಾಟಿಂಗ್, ಬೌಲಿಂಗ್ ಮಾಡ್ತಾ ಇದ್ರೆ ಗ್ಯಾಲರಿಯಲ್ಲಿ ಕೂತು ಅಮ್ಮ, ಮಗಳು ಎಂಜಾಯ್ ಮಾಡ್ತಾ ಇದ್ರು.
ನಟಿಯರಿಂದ ಸಪೋರ್ಟ್
ಬಾದ್ ಷಾ ಸುದೀಪ ಅಂದ್ರೆ ಸ್ಯಾಂಡಲ್‌ವುಡ್ ನಟಿಯರಿಗೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಬಿಗ್ ಬಾಸ್ ಮನೆಗೆ ಹೋಗಿ ಬಂದವರಂತೂ ಫ್ಯಾನ್ಸ್ ಆಗಿ ಹೋಗಿರುತ್ತಾರೆ. ಹೀಗಾಗಿ ದೀಪಿಕಾ ದಾಸ್, ಅದ್ವಿತಿ, ಅಶ್ವಿತಿ, ದಿವ್ಯ ಉರುಡುಗ, ಅರವಿಂದ್ ಕೆಪಿ ಹೀಗೆ ಸಾಕಷ್ಟು ಸೆಲೆಬ್ರೆಟಿಗಳು ಸಿಸಿಎಲ್ ಪಂದ್ಯವನ್ನ ನೋಡುವುದಕ್ಕೆ ಹೋಗಿದ್ದರು. ಎಲ್ಲರೂ ತಮ್ಮ ಸ್ಯಾಂಡಲ್ ವುಡ್ ಹೀರೋಗಳಿಗೆ ಕೇಕೆ ಹಾಕುತ್ತಾ, ಚಪ್ಪಾಳೆ ತಟ್ಟುತ್ತಾ ಸಪೋರ್ಟ್ ಮಾಡಿದರು. ಸಿಸಿಎಲ್ ಪಂದ್ಯವನ್ನು ಎಲ್ಲರು ಎಂಜಾಯ್ ಮಾಡಿದರು.
ಸಾನ್ವಿ ಸುದೀಪ್ ಮಿಂಚು
ಸಾನ್ವಿ ಸುದೀಪ್ ಇತ್ತಿಚೆಗೆ ಇಂಡಸ್ಟ್ರಿಗೆ ಹೆಚ್ಚಾಗಿನೇ ಕನೆಕ್ಟ್ ಆಗಿದ್ದಾರೆ. ಎಲ್ಲರೊಟ್ಟಿಗೆ ಬೆರೆಯುತ್ತಾರೆ. ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಸಿನಿಮಾ ಇಂಡಸ್ಟ್ರಿಯವರ ಜೊತೆಗೂ ಒಳ್ಳೆ ಬಾಂಡಿಂಗ್ ಬೆಳೆಸಿಕೊಂಡಿದ್ದಾರೆ. ಸಿಸಿಎಲ್ ಪಂದ್ಯ ನೋಡಲು ಬಂದಿದ್ದ ನಟಿಮಣಿಯರ ಜೊತೆಗೆ ಸಾನ್ವಿ ಸುದೀಪ್ ಫುಲ್ ಜೋಶ್ ಅಘಿ ಫೋಟೋಗೆ ಪೋಸ್ ನೀಡಿದ್ದರು. ಎಲ್ಲರೂ ಖುಷಿ ಖುಷಿಯಾಗಿಯೇ ಫೋಟೋ ತೆಗೆಸಿಕೊಳ್ಳುತ್ತಿರುವಾಗ ನಡುವಲ್ಲಿ ಬಂದ ರಜತ್ ಕೊಂಚ ಕಿರಿಕಿರಿ ಮಾಡಿದ್ದಾರೆ. ಸಾನ್ವಿ ಸುದೀಪ್ ಅದನ್ನು ಬಹಳ ಕೂಲಾಗಿಯೇ ತೆಗೆದುಕೊಂಡಿದ್ದು, ನೇರವಾಗಿಯೇ ಪ್ರಶ್ನೆ ಮಾಡಿದ್ದಾರೆ.
ಅಂಥದ್ದೇನ್ ಮಾಡಿದ್ರು ರಜತ್..?
ರಜತ್ ಹೇಗೆ ಎಂಬುದನ್ನು ಬಿಗ್ ಬಾಸ್‌ನಲ್ಲಿಯೇ ಜನ ನೋಡಿದ್ದಾರೆ. ಅದರಲ್ಲೂ ಚೈತ್ರಾ ಅವರನ್ನ ಹೆಚ್ಚು ಗೋಳಾಡಿಸಿದ್ದೆ ಆಯ್ತು. ತನಗೆ ಹೇಗೆ ಬೇಕೋ ಹಾಗೇ ನಡೆದುಕೊಳ್ಳುತ್ತಾರೆ. ಒರಟುತನವೂ ಅಲ್ಲಿ ಎದ್ದು ಕಾಣಿಸುತ್ತದೆ. ರಜತ್ ಇರೋದೇ ಹಾಗೇ ಅಂತ ಅಂದುಕೊಂಡರು, ಆ ನೇರವಾದ, ರಫ್ ಆದ ನಡೆ ಎಲ್ಲಾ ಸಮಯಕ್ಕೂ ಹೊಂದಾಣಿಕೆಯಾಗುವುದಿಲ್ಲ. ಹಾಗೇ ಎಲ್ಲರು ಸ್ವೀಕರಿಸುವುದಕ್ಕೆ ಆಗಲ್ಲ. ಈಗ ಆಗಿದ್ದು ಅದೇ. ಹೆಣ್ಣು ಮಕ್ಕಳೆಲ್ಲ ಸೇರಿ ಖುಷಿಯಾಗಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವಾಗ ತಮಾಷೆ ಮಾಡಲು ಹೋಗಿ ಸಾನ್ವಿ ಕೆಂಗಣ್ಣಿಗೆ ಗುರಿಯಾದರು ರಜತ್. ಒಳ್ಳೆ ಪೋಸ್ ಹೋಯ್ತಲ್ಲ ಅಂತ ಸಾನ್ವಿ, ಹೆಣ್ಣು ಮಕ್ಕಳ ನಡುವೆ ನಿಮಗೇನು ಕೆಲಸ ಎಂದೇ ಕೇಳಿದ್ದಾರೆ. ಆದರೂ ರಜತ್ ಅದನ್ನ ತಮಾಷೆಯಾಗಿಯೇ ತೆಗೆದುಕೊಂಡು ಮತ್ತೆ ಪೋಸ್ ಕೊಟ್ಟಿದ್ದಾರೆ. ರಜತ್ ನಡೆ ಅಲ್ಲಿ ಬೇಡವಾಗಿತ್ತು ಎಂದೇ ಫ್ಯಾನ್ಸ್ ಅಭಿಪ್ರಾಯ ಪಡುತ್ತಿದ್ದಾರೆ.


Click it and Unblock the Notifications











