'ಭಾಗ್ಯಲಕ್ಷ್ಮಿ' ಟ್ರೆಡಿಷನಲ್ ಫೋಟೊಶೂಟ್ ವೈರಲ್; ಬದುಕಿನ ಸಂಭ್ರಮ ಎಂದ ನಟಿ ತನ್ವಿ ರಾವ್

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ "ಲಕ್ಷ್ಮಿ ಬಾರಮ್ಮ"ವೂ ಒಂದು. " ಲಕ್ಷ್ಮಿ ಬಾರಮ್ಮ" ಧಾರಾವಾಹಿಯಲ್ಲಿ ನಾಯಕ ವೈಷ್ಣವ್ ಪ್ರೇಯಸಿ ಕೀರ್ತಿ ಆಗಿ ನಟಿಸುತ್ತಿದ್ದಾರೆ ತನ್ವಿ ರಾವ್. ನಾಯಕನ ಮಾಜಿ ಪ್ರೇಯಸಿಯಾಗಿರುವ ಕೀರ್ತಿಗೆ ಈಗಲೂ ಆತನತ್ತ ಪ್ರೀತಿ. ಆತನಿಗೆ ಈಗಾಗಲೇ ಮದುವೆಯಾಗಿದ್ದರೂ ಆತನನ್ನು, ಆತನ ಪ್ರೀತಿಯನ್ನು ಮರಳಿ ಪಡೆಯುವ ಹುಚ್ಚು ಬಯಕೆ. ನಾಯಕನ ಅಮ್ಮನ ಪಿತೂರಿಗೆ ಒಳಗಾಗಿ ತನ್ನ ಪ್ರೀತಿಯನ್ನೇ ಬಲಿಕೊಟ್ಟ ಆಕೆ ಇದೀಗ ಅದನ್ನು ಮರಳಿ ಪಡೆಯಲು ಮಾಡುತ್ತಿರುವ ಸಾಹಸ ಒಂದೆರೆಡಲ್ಲ.

ಸಂಪೂರ್ಣ ನೆಗೆಟಿವ್ ಅಲ್ಲದ ಆದರೆ ನೆಗೆಟಿವ್ ಪಾತ್ರದ ಛಾಯೆಯಿರುವ ಕೀರ್ತಿ ಪಾತ್ರದ ಮೂಲಕ ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ತನ್ವಿ ರಾವ್ ಧಾರಾವಾಹಿಯಲ್ಲಿ ಮಾಡರ್ನ್ ಲೋಕದ ಸುಂದರಿ. ಧಾರಾವಾಹಿಯಲ್ಲಿ ತುಂಡುಡುಗೆಯನ್ನೇ ಧರಿಸುತ್ತಾ ಮೋಡಿ ಮಾಡುವ ಈಕೆಯ ಸಾಂಪ್ರದಾಯಿಕ ಚೆಲುವು ನೆಟ್ಟಿಗರನ್ನು ಬೆರಗಾಗಿಸಿದೆ. ಅರೇ! ಇದು ಆಕೆಯಾ ಎಂದು ಉದ್ದರಿಸುವಂತೆ ಮಾಡಿದೆ.

Bhagyalakshmi Actress Tanvi Rao Photoshoot

ಹೌದು, ತನ್ವಿ ರಾವ್ ಅವರು ಇತ್ತೀಚೆಗಷ್ಟೇ ಮಾಡಿಸಿಕೊಂಡಿರುವ ಫೋಟೋಶೂಟ್ ನಲ್ಲಿ ಸಾಂಪ್ರದಾಯಿಕ ಲುಕ್ ನಲ್ಲಿ ಆಕೆ ಕಾಣಿಸಿಕೊಂಡಿದ್ದು ಆಕೆಯ ಅಂದ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಅದರಲ್ಲೂ ತಿಳಿ ಹಸಿರು ಬಣ್ಣಕ್ಕೆ ಪಿಂಕ್ ಕಲರ್ ಕಾಂಬಿನೇಷನ್ ಇರುವಂತಹ ಸೀರೆ ಧರಿಸಿರುವ ಆಕೆ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದ್ದಾರೆ. ಜೊತೆಗೆ "ಸೆಲೆಬ್ರೇಶನ್ ಲೈಫ್ ವಿತ್ ಲಿಟಲ್ ಬಿಟ್ ಆಫ್ ಸ್ಪೈಸ್" ಎಂಬ ಕಾಪ್ಶನ್ ಅನ್ನು ಕೊಟ್ಟಿದ್ದಾರೆ ತನ್ವಿ ರಾವ್.

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಹಾರರ್" ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ಮೊದಲ ಧಾರಾವಾಹಿಯಲ್ಲಿಯೇ ಪ್ರೇಕ್ಷಕರ ಮನ ಸೆಳೆದ ಚೆಲುವೆ. ಮುಂದೆ ಸ್ಟಾರ್ ಸುವರ್ಣ ವಾಹಿನಿಯ "ರಾಧೆ ಶ್ಯಾಮ" ಧಾರಾವಾಹಿಯಲ್ಲಿಯೂ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡ ಈಕೆ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿದ ಬೆಡಗಿ.

Bhagyalakshmi Actress Tanvi Rao Photoshoot

ತಮಿಳಿನ "ಜಮೀಲಾ" ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈಕೆ ಸದ್ಯ ಕೀರ್ತಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಅಂದ ಹಾಗೇ "ಆಕೃತಿ" ಧಾರಾವಾಹಿಯ ಮೂಲಕ ಕಿರುತೆರೆಗೆ ಪರಿಚಿತರಾದ ತನ್ವಿ ರಾವ್ ಅವರ ನಟನಾ ಪಯಣ ಶುರುವಾಗಿದ್ದಿ ಹಿರಿತೆರೆಯಿಂದ. "ಗುಲಾಬ್ ಗ್ಯಾಂಗ್" ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ನಟನಾ ಜಗತ್ತಿನ ನಂಟು ಬೆಳೆಸಿಕೊಂಡ ಈಕೆ ಮಾಧುರಿ ದೀಕ್ಷಿತ್ ಹಾಗೂ ಜೂಹಿ ಚಾವ್ಲಾರೊಂದಿಗೆ ಬಣ್ಣ ಹಚ್ಚಿದ್ದಾರೆ. ನಂತರ 'ಗನ್ಸ್ ಆಫ್ ಬನಾರಸ್'ನಲ್ಲಿ ಬಣ್ಣ ಹಚ್ಚಿರುವ ಈಕೆ ಕನ್ನಡದ "ರಂಗ್ ಬಿರಂಗಿ" ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ.

ಅಸಲಿಗೆ ತನ್ವಿ ರಾವ್ ಒಬ್ವರು ಅತ್ಯುತ್ಯಮ ಭರತನಾಟ್ಯ ಕಲಾವಿದೆ. ನಾಲ್ಕನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಯಲು ಶುರುಮಾಡಿದ ಈಕೆ ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ತನ್ವಿ ಅವರು ಕೇವಲ ಭರತನಾಟ್ಯವಲ್ಲದೇ ಕಥಕ್, ಸೆಮಿ ಕ್ಲಾಸಿಕಲ್ ನೃತ್ಯದಲ್ಲೂ ಪರಿಣಿತಿ ಪಡೆದ ಹುಡುಗಿ. ಇನ್ನು ತನ್ನ 16ನೇ ವಯಸ್ಸಿನಲ್ಲೇ ಯುರೋಪ್ ಹಾಗೂ ಏಷ್ಯಾದ 6 ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನೃತ್ಯ ಪ್ರದರ್ಶಿಶಿಸಿರುವ ಪ್ರತಿಭಾವಂತೆ ತನ್ವಿ ರಾವ್.

More from Filmibeat

English summary
celebration of life with a little bit of spice," said bhagyalakshmi actress Tanvi Rao
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X