ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆಲ್ಲಬಾರದು ಎಂಬುದು ಇವರುಗಳ ಆಸೆಯಾಗಿತ್ತು.!

By Bharath Kumar

Recommended Video

ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆಲ್ಲಬಾರದು ಎಂಬುದು ಇವರುಗಳ ಆಸೆಯಾಗಿತ್ತು | Filmibeat Kannada

'ಬಿಗ್ ಬಾಸ್ ಕನ್ನಡ 5' ಟ್ರೋಫಿಯನ್ನ ಚಂದನ್ ಶೆಟ್ಟಿ ಗೆಲ್ಲಬೇಕು ಎಂದು ಅದೇಷ್ಟೋ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡಿದ್ದರು. ಸಮೀಕ್ಷೆ ಮಾಡಿದ್ದರು. ಪ್ರಚಾರ ಮಾಡಿದ್ದರು. ನಿರೀಕ್ಷೆಯಂತೆ ಚಂದನ್ ಶೆಟ್ಟಿ ಐದನೇ ಆವೃತ್ತಿಯ ಬಿಗ್ ಬಾಸ್ ಗೆದ್ದರು.

ಆದ್ರೆ, ಚಂದನ್ ಶೆಟ್ಟಿ ಬಿಗ್ ಬಾಸ್ ಗೆಲ್ಲಬಾರದೆಂದು ಹೇಳುತ್ತಿದ್ದ ಗುಂಪು ಕೂಡ ಇತ್ತು. ಹೀಗಂತ, ಕಿಚ್ಚ ಸುದೀಪ್ ಅವರ ಮುಂದೆಯೇ ಹೇಳಿದ್ದರು. ಚಂದನ್ ಶೆಟ್ಟಿಗೆ ಉತ್ತಮ ಆಟಗಾರನೇ ಆದ್ರೆ, ಬಿಗ್ ಬಾಸ್ ಗೆಲ್ಲಬಾರದು ಎಂದು ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದರು. ಯಾಕಂದ್ರೆ, ಇವರ ಪ್ರಕಾರ ಜೆಕೆ ಬಿಗ್ ಬಾಸ್ ಗೆಲ್ಲಬೇಕಿತ್ತು.

ಕಾರ್ತಿಕ್ ಜಯರಾಂ ಮತ್ತು ಚಂದನ್ ಶೆಟ್ಟಿ ಇಬ್ಬರಲ್ಲಿ ಜೆಕೆಗೆ ಹೆಚ್ಚು ಒಲವು ತೋರಿದ್ದ ಮಂದಿ, ಚಂದನ್ ಶೆಟ್ಟಿ ಬಿಗ್ ಬಾಸ್ ಟ್ರೋಫಿ ಎತ್ತಬಾರದು ಎಂದುಕೊಂಡಿದ್ದರು. ಆದ್ರೆ, ಅವರೆಲ್ಲರ ನಿರೀಕ್ಷೆಯನ್ನ ನಿರಾಸೆ ಮಾಡಿದ ಚಂದನ್ ಶೆಟ್ಟಿ ಬಿಗ್ ಬಾಸ್ ಗೆದ್ದೇ ಬಿಟ್ಟರು. ಅಷ್ಟಕ್ಕೂ, ಚಂದನ್ ಶೆಟ್ಟಿ ಬಿಗ್ ಬಾಸ್ ಗೆಲ್ಲಬಾರದೆಂದು ಹೇಳಿದ್ದವರು ಯಾರು?

ಜೆಕೆ ಗೆಲ್ಲಬೇಕು

ಜೆಕೆ ಗೆಲ್ಲಬೇಕು

''ಮೊದಲ ದಿನದಿಂದಲೂ ಜೆಕೆ ಒಂದೇ ತರ ಇದ್ದಾನೆ. ಬರಿ ಖುಷಿ ನೋಡ್ಕೊಂಡು ಬಂದಿದ್ದಾನೆ. ಸುತ್ತಮುತ್ತಲಿನ ಜನರನ್ನ ಕೂಡ ನಗಿಸುತ್ತಾ ಬಂದಿದ್ದಾರೆ. ಚಂದನ್ ಶೆಟ್ಟಿಗೆ ಒಳ್ಳೆ ಟ್ಯಾಲೆಂಟ್ ಇದೆ. ಚೆನ್ನಾಗಿ ಆಟ ಆಡಿದ್ದಾರೆ. ಆದ್ರೆ, ನನಗೆ ಜೆಕೆ ಕಡೆ ಒಲವು ಇರೋದ್ರಿಂದ ಜೆಕೆ ಗೆಲ್ಲಬೇಕು'' - ತೇಜಸ್ವಿನಿ, ನಟಿ

ಶ್ರುತಿ ಪ್ರಕಾಶ್ ಒಲವು

ಶ್ರುತಿ ಪ್ರಕಾಶ್ ಒಲವು

ಶ್ರುತಿ ಪ್ರಕಾಶ್ ಅವರ ಪ್ರಕಾರ, ಕಾರ್ತಿಕ್ ಜಯರಾಂ ಗೆಲ್ಲಬೇಕು ಎಂದಿದ್ದರು. ಜೆಕೆ ಎಲ್ಲದರಲ್ಲೂ ಬ್ಯಾಲೆನ್ಸ್ ಮಾಡಿದ್ದಾರೆ. ಚೆಂದನ್ ಕೂಡ ಆಟ ಚೆನ್ನಾಗಿ ಆಡಿದ್ದಾರೆ. ಆದ್ರೆ, ಇಬ್ಬರಿಗೂ ಹೋಲಿಸಿದ್ರೆ, ಜೆಕೆ ಉತ್ತಮ ಸ್ಪರ್ಧಿ'' ಎಂದು ಶ್ರುತಿ ಅಭಿಪ್ರಾಯ ಪಟ್ಟಿದ್ದರು.

ಆಶಿತಾ ಚಂದ್ರಪ್ಪ

ಆಶಿತಾ ಚಂದ್ರಪ್ಪ

ನಟಿ ಆಶಿತಾ ಚಂದ್ರಪ್ಪ ಅವರ ಪ್ರಕಾರವೂ ಕಾರ್ತಿಕ್ ಜಯರಾಂ ಬಿಗ್ ಬಾಸ್ ಗೆಲ್ಲಬೇಕಿತ್ತಂತೆ. ''ನನಗೆ ಜೆಕೆ ವಿನ್ ಆಗ್ಬೇಕು'' ಒಂದೇ ಮಾತಿನಲ್ಲಿ ಹೇಳಿದ್ದರು.

ಅನುಪಮಾ, ಕೃಷಿಗೂ ಜೆಕೆ ಇಷ್ಟ

ಅನುಪಮಾ, ಕೃಷಿಗೂ ಜೆಕೆ ಇಷ್ಟ

ಇನ್ನು ನಟಿ ಅನುಪಮಾ ಗೌಡ ಮತ್ತು ಕೃಷಿ ತಾಪಂಡ ಇಬ್ಬರು ಕೂಡ ಚಂದನ್ ಶೆಟ್ಟಿ ಗೆಲ್ಲುವುದು ಇಷ್ಟವಿರಲಿಲ್ಲ. ಇವರಿಗೂ ಕೂಡ ಜೆಕೆ ವಿನ್ ಆಗಬೇಕಿತ್ತು.

ಜಯಶ್ರೀನಿವಾಸ್ ಮತ್ತು ಚಂದ್ರು ಪ್ರಕಾರ

ಜಯಶ್ರೀನಿವಾಸ್ ಮತ್ತು ಚಂದ್ರು ಪ್ರಕಾರ

ಸಂಖ್ಯಶಾಸ್ತ್ರಜ್ಞ ಜಯಶ್ರೀನಿವಾಸನ್ ಮತ್ತು ಸಿಹಿ ಕಹಿ ಚಂದ್ರು ಅವರ ಆಸೆಯೂ ಕೂಡ ಜೆಕೆ ಅವರೇ ವಿನ್ ಆಗಬೇಕಿತ್ತು. ಜೆಕೆ ಎಲ್ಲಿಯೂ ಬದಲಾಗಿಲ್ಲ. ಒಂದೇ ತರ ಇದ್ದರು. ಚಂದನ್ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿದ್ದರು'' ಎಂದು ಚಂದ್ರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ದಯಾಳ್-ಜಗನ್ ಗೂ ಜೆಕೆ

ದಯಾಳ್-ಜಗನ್ ಗೂ ಜೆಕೆ

ನಿರ್ದೇಶಕ ದಯಾಳ ಪದ್ಮನಾಭ್ ಮತ್ತು ಜಗನ್ ಕೂಡ ಕಾರ್ತಿಕ್ ಜಯರಾಂ ಅವರೇ ಗೆಲ್ಲಬೇಕು ಎಂದಿದ್ದರು. ''106 ದಿನಗಳು ಕೂಡ ಜೆಕೆ ಅವರ ಸ್ವಭಾವ ಒಂದೇ ತರ ಇತ್ತು. ಯಾರ ಬಳಿಯೂ ಗಲಾಟೆ, ಮನಸ್ತಾಪ ಮಾಡಿಕೊಂಡಿಲ್ಲ. ಸೋ ಜೆಕೆಗೆ ಅರ್ಹತೆ ಇದೆ'' ಎಂದು ದಯಾಳ್ ತಿಳಿಸಿದ್ದರು.

ಕಾಮನ್ ಮ್ಯಾನ್ ಗಳ ಪ್ರಕಾರ

ಕಾಮನ್ ಮ್ಯಾನ್ ಗಳ ಪ್ರಕಾರ

ಇನ್ನು ಜೆಕೆ ಮತ್ತು ಚಂದನ್ ಶೆಟ್ಟಿ ಇಬ್ಬರಲ್ಲಿ ಯಾರು ಹೊರಗೆ ಬರಬೇಕು ಎಂಬ ಪ್ರಶ್ನಗೆ ಉತ್ತರಿಸಿದ್ದ ರೂಲ್ ರಿಯಾಜ್, ನಟಿ ಲಾಸ್ಯ, ನಿವೇದಿತಾ ಗೌಡ, ಸುಮಾ ರಾಜ್ ಕುಮಾರ್, ಸಮೀರಾಚಾರ್ಯ, ಮೇಘಾ ಎಲ್ಲರೂ ಚಂದನ್ ಶೆಟ್ಟಿ ಗೆಲ್ಲಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಂತೆಯೇ ಚಂದನ್ ಬಿಗ್ ಬಾಸ್ ಕಿರೀಟ ಗೆದ್ದರು.

More from Filmibeat

English summary
Tejaswini, Dayal padmanabhan, Sihi kahi Chandru, Jagan, krushi Thapanda, Anupama gowda said that Chandan Shetty should not win big boss. but, finally chandan shetty win the bigg boss kannada 5.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X