twitter
    For Quick Alerts
    ALLOW NOTIFICATIONS  
    For Daily Alerts

    ಮೋದಿ ಬಗ್ಗೆ ಹಾಸ್ಯ: ಮಕ್ಕಳ ಶೋಗೆ ನೊಟೀಸ್ ನೀಡಿದ ಕೇಂದ್ರ

    |

    ಪ್ರಧಾನಿ ಮೋದಿ ಕುರಿತು ಪರೋಕ್ಷವಾಗಿ ಹಾಸ್ಯ ಮಾಡಿದ ಮಕ್ಕಳ ರಿಯಾಲಿಟಿ ಶೋ ಒಂದಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಚಾನೆಲ್‌ಗೆ ನೊಟೀಸ್ ಜಾರಿ ಮಾಡಿದೆ.

    ತಮಿಳಿನಲ್ಲಿ ಪ್ರಸಾರವಾಗುತ್ತಿರುವ 'ಜೂನಿಯರ್ ಸೂಪರ್ ಸ್ಟಾರ್ ಸೀಸನ್ 4' ರಲ್ಲಿ ಮಕ್ಕಳು ಹಾಸ್ಯ ನಾಟಕವೊಂದನ್ನು ಕೆಲವು ದಿನಗಳ ಹಿಂದೆ ಮಾಡಿದ್ದರು. ಈ ನಾಟಕದಲ್ಲಿ ರಾಜನೊಬ್ಬ ನೋಟು ಅಮಾನ್ಯೀಕರಣ ಮಾಡುವ ದೃಶ್ಯವಿತ್ತು. ರಾಜನನ್ನು ಮಂತ್ರಿ ಹಾಸ್ಯ ಮಾಡುವ ಸಂಭಾಷಣೆ ಇತ್ತು. ಇದರ ವಿರುದ್ಧ ತಮಿಳುನಾಡು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

    ಮಕ್ಕಳು ಆಡಿದ ನಾಟಕದಲ್ಲಿ ರಾಜನೊಬ್ಬ ಮಂತ್ರಿಯನ್ನು ಕೇಳುತ್ತಾನೆ, ''ರಾಜ್ಯದ ಅಭಿವೃದ್ಧಿಗೆ ತೊಡಕಾಗಿರುವುದು ಯಾವುದು ಎಂದು, ಅದಕ್ಕೆ ಮಂತ್ರಿ ಹೇಳುತ್ತಾನೆ, 'ಬ್ಲಾಕ್ ಮನಿ' (ಕಪ್ಪು ಧನ). ಹಾಗಿದ್ದರೆ ನೋಟು ಅಮಾನ್ಯೀಕರಣ ಮಾಡಿ ಎಂದು ರಾಜ ಆದೇಶಿಸುತ್ತಾನೆ. ಅದಕ್ಕೆ ಮಂತ್ರಿಯು, ''ರಾಜ, ನಿಮ್ಮಂತೆಯೇ ರಾಜನೊಬ್ಬ ಕಪ್ಪು ಧನ ನಿಯಂತ್ರಿಸಲು ಮೂರ್ಖನಂತೆ ನೋಟು ಅಮಾನ್ಯೀಕರಣ ಮಾಡಿ ವಿಫಲನಾಗಿದ್ದಾನೆ'' ಎನ್ನುತ್ತಾನೆ.

    Central Issue Notice To Children Reality Show For Criticizing Modi
    ಜೊತೆಗೆ, ''ಕಪ್ಪು ಧನ ತಡೆಯಲು ವಿಫಲನಾದ ಆ ರಾಜ ಈಗ ಬಣ್ಣ ಬಣ್ಣದ ಕೋಟುಗಳನ್ನು ಧರಿಸಿ ವಿವಿಧ ದೇಶಗಳನ್ನು ಸುತ್ತುವುದರಲ್ಲಿ ನಿರತನಾಗಿದ್ದಾನೆ'' ಎನ್ನುತ್ತಾನೆ ಮಂತ್ರಿ ಪಾತ್ರಧಾರಿ.

    ಮತ್ತೊಂದು ದೃಶ್ಯದಲ್ಲಿ ರಾಜ, ಮಂತ್ರಿಗೆ ಹೇಳುತ್ತಾನೆ, ''ನಾವು ಮಾರುವೇಷದಲ್ಲಿ ದಕ್ಷಿಣ ಭಾಗಕ್ಕೆ ಹೋಗಿ ಜನರು ನಮ್ಮ ಬಗ್ಗೆ ಏನೆಂದುಕೊಳ್ಳುತ್ತಿದ್ದಾರೆ ತಿಳಿದುಕೊಳ್ಳೋಣ'' ಎನ್ನುತ್ತಾನೆ. ಆಗ ಮಂತ್ರಿ, ''ದೊರೆ, ನಾವು ಹೀಗೆಯೇ ಹೋದರು ಆ ಜನ ನಮ್ಮನ್ನು ಕೇರ್ ಮಾಡುವುದಿಲ್ಲ'' ಎನ್ನುತ್ತಾನೆ. ಇದೇ ನಾಟಕದಲ್ಲಿ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿರುವ ಕೇಂದ್ರದ ನಿರ್ಧಾರವನ್ನು (ಡಿಸ್‌ಇನ್ವೆಸ್ಟ್‌ಮೆಂಟ್) ಟೀಕಿಸಲಾಗಿದೆ. ಮಕ್ಕಳ ನಾಟಕ ನೋಡಿ ಶೋನ ಜಡ್ಜ್‌ಗಳು ಇತರ ಸ್ಪರ್ಧಿಗಳು ನಗುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ.

    ಮಕ್ಕಳ ಈ ಹಾಸ್ಯ ನಾಟಕದ ಬಗ್ಗೆ ತಮಿಳುನಾಡು ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, 'ಜೂನಿಯರ್ ಸೂಪರ್ ಸ್ಟಾರ್ ಸೀಸನ್ 4' ರಿಯಾಲಿಟಿ ಶೋ ಪ್ರಸಾರವಾಗುವ ಜೀ ಚಾನೆಲ್‌ಗೆ ದೂರು ನೀಡಿದೆ. ಜೊತೆಗೆ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಗೂ ದೂರು ನೀಡಿದೆ. 10 ವರ್ಷದೊಳಗಿನ ಮಕ್ಕಳನ್ನು ಬಳಸಿ ಮೋದಿಗೆ ಅಪಮಾನ ಮಾಡಲಾಗಿದೆ ಎಂದು ತಮಿಳುನಾಡು ಬಿಜೆಪಿ ಟೀಕಿಸಿದೆ. ಶೋ ಮೂಲಕ ತಪ್ಪು ಮಾಹಿತಿ ಬಿತ್ತರಿಸಲಾಗಿದೆ ಎಂದಿದೆ.

    ''ಮೋದಿ ಬಗ್ಗೆ ಮಕ್ಕಳು ಮಾಡಿರುವ ಹಾಸ್ಯಕ್ಕೆ ಶೋನ ಜಡ್ಜ್‌ಗಳು, ನಿರೂಪಕರು ಇತರ ಸ್ಪರ್ಧಿಗಳು ನಗುತ್ತಿರುವ ಚಪ್ಪಾಳೆ ತಟ್ಟುತ್ತಿರುವ ದೃಶ್ಯಗಳಿವಿವೆ. ಈ ಬಗ್ಗೆ ಶೋನ ಜಡ್ಜ್‌ಗಳನ್ನು ಕೇಳಿದಾಗ, ನಾವು ಆ ಹಾಸ್ಯ ದೃಶ್ಯ ಚಿತ್ರೀಕರಣ ಮಾಡುವಾಗ ಸ್ಥಳದಲ್ಲಿಯೇ ಇರಲಿಲ್ಲವೆಂದು, ಬೇರೆ ದೃಶ್ಯಕ್ಕೆ ನಾವು ನೀಡಿದ ಪ್ರತಿಕ್ರಿಯೆಯನ್ನು ಕತ್ತರಿಸಿ ಆ ಹಾಸ್ಯ ದೃಶ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದಿದ್ದಾರೆ'' ಎಂದು ಬಿಜೆಪಿ ತಮಿಳುನಾಡು ಸಾಮಾಜಿಕ ಜಾಲತಾಣ ಮುಖ್ಯಸ್ಥ ನಿರ್ಮಲ್ ಕುಮಾರ್ ಹೇಳಿದ್ದಾರೆ.

    ತಮಿಳುನಾಡು ಬಿಜೆಪಿಯ ದೂರು ಹಾಗೂ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ನೊಟೀಸ್‌ ಆಧರಿಸಿ ಜೀ ಸಂಸ್ಥೆಯು ಮೋದಿ ಕುರಿತಾದ ಹಾಸ್ಯದ ದೃಶ್ಯಗಳನ್ನು ತನ್ನ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣದಿಂದ ಹಿಂತೆಗೆದಿದೆ.

    English summary
    Central government I and B department issue notice to Tamil reality show for criticizing Modi in their comedy skit.
    Wednesday, January 19, 2022, 15:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X