ಬಾಯ್‌ಫ್ರೆಂಡ್ ಜೊತೆ ನನ್ನ ಮಗಳಿರುವ ಫೋಟೊ ತೋರಿಸಿದರೆ ₹21 ಲಕ್ಷ ಬಹುಮಾನ, ಬಿಗ್ ಬಾಸ್‌ಗೆ ಸ್ಫರ್ಧಿ ತಾಯಿ ಸವಾಲು..!

ಬಿಗ್ ಬಾಸ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ಹಿಂದಿಯಲ್ಲಿ ಕೂಡ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಇದೇ ತಿಂಗಳಿನಲ್ಲಿ ತೆರೆ ಬೀಳಲಿದೆ. ಇನ್ನು ಬಿಗ್ ಬಾಸ್ ಕಪ್ ಗೆಲ್ಲುವ ಕನಸನ್ನೊತ್ತು ಮನೆಯಲ್ಲಿ ಉಳಿದ ಸ್ಫರ್ಧಿಗಳು ದಿನಗಳು ಉರುಳಿದಂತೆ ತಂತ್ರ-ಪ್ರತಿತಂತ್ರ-ರಣತಂತ್ರಗಳನ್ನು ರೂಪಿಸುತ್ತಿದ್ದಾರೆ. ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಚಾರಿತ್ರ್ಯಹರಣಕ್ಕೆ ಯತ್ನಿಸುತ್ತಿದ್ದಾರೆ.ತೀರಾ ಖಾಸಗಿ ವಿಚಾರಗಳನ್ನು ಕೆದಕುತ್ತಿದ್ದಾರೆ.ಇದಕ್ಕೆ ಚಾಹತ್ ಪಾಂಡೆ ಸದ್ಯದ ಉದಾಹರಣೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಬಿಗ್ ಬಾಸ್ ಕೇವಲ ಸುದೀಪ್‌ ಅವರಿಗೆ ಮಾತ್ರ ಎರಡನೇ ಮನೆ ಅಲ್ಲ, ಸಲ್ಮಾನ್ ಖಾನ್ ಅವರಿಗೂ ಕೂಡ ಬಿಗ್ ಬಾಸ್ ಎರಡನೇ ಮನೆ. 18 ವರ್ಷಗಳಿಂದ ಸಲ್ಮಾನ್ ಖಾನ್ ಈ ಸಂಬಂಧ ಉಳಿಸಿಕೊಂಡು ಬಂದಿದ್ದಾರೆ. ಪ್ರತಿ ಬಾರಿ ಕೂಡ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಇಂಥಾ ಸಲ್ಮಾನ್ ಖಾನ್ ಮತ್ತು ಬಿಗ್ ಬಾಸ್‌ಗೆ ಮನೆಯಲ್ಲಿರುವ ಚಾಹತ್ ಪಾಂಡೆ ಅವರ ತಾಯಿ ಸವಾಲನ್ನು ಹಾಕಿದ್ದಾರೆ. ಬಾಯ್‌ಫ್ರೆಂಡ್ ಜೊತೆ ನನ್ನ ಮಗಳಿರುವ ಫೋಟೊವನ್ನು ತೋರಿಸಿದರೆ ಆ ವ್ಯಕ್ತಿಯ ಹೆಸರನ್ನು ಹೇಳಿದರೆ 21 ಲಕ್ಷ ಬಹುಮಾನವನ್ನು ನೀಡುವುದಾಗಿ ಹೇಳಿದ್ದಾರೆ.

Chahat Pandey s mom offers Rs 21 lakh to Bigg Boss 18makers if they reveal her daughter s boyfriend

ಹೌದು, ಅಸಲಿಗೆ ಕಳೆದ ವಾರ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಡೆದಂತೆ ಹಿಂದಿ ಬಿಗ್‌ ಬಾಸ್‌ನಲ್ಲಿ ಸ್ಫರ್ಧಿಗಳ ಕುಟುಂಬದ ಸದಸ್ಯರನ್ನು ಮನೆಯ ಒಳಗೆ ಕಳುಹಿಸಲಾಗಿತ್ತು. ಈ ಸಮಯದಲ್ಲಿ ಮಾತನಾಡಿದ್ದ ಚಾಹತ್ ಪಾಂಡೆ ಅವರ ತಾಯಿ ನನ್ನ ಮಗಳು ನಮ್ಮ ಇಚ್ಚೆಗೆ ಯಾವತ್ತು ವಿರುದ್ಧವಾಗಿ ಹೋಗುವುದಿಲ್ಲ ಎಂದು ಹೇಳಿದ್ದರು. ಮಾತು ಮಾತಿಗೂ ನಿನಗೆ ಬಾಯ್‌ಫ್ರೆಂಡ್ ಇದ್ದಾನೆ ಎಂದು ಚಾಹತ್ ಅವರನ್ನು ಕಾಡುತ್ತಿದ್ದ ಅವಿನಾಶ್ ಮಿಶ್ರಾ ಅವರನ್ನು ಕೂಡ ತರಾಟೆಗೆ ತೆಗೆದುಕೊಂಡಿದ್ದ ಚಾಹತ್ ಅವರ ತಾಯಿ ಅವಿನಾಶ್ ಮಿಶ್ರಾ ಅವರನ್ನು ಸ್ತ್ರೀ ಪೀಡಕ ಎಂದು ಕರೆದಿದ್ದರು. ನಾನು ಆಯ್ಕೆ ಮಾಡುವ ಹುಡುಗನನ್ನೇ ನನ್ನ ಮಗಳು ಮದುವೆಯಾಗುವುದು ಎಂದು ಹೇಳಿದ್ದರು.

ಚಾಹತ್ ಪಾಂಡೆ ಅವರ ತಾಯಿಯ ಈ ಹೇಳಿಕೆಯನ್ನು ಮೊನ್ನೆ ತಮ್ಮ ವೀಕೆಂಡ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿರುವ ಸಲ್ಮಾನ್ ಖಾನ್, ನಿಮ್ಮ ವ್ಯಕ್ತಿತ್ವದ ಸರ್ಟಿಫಿಕೆಟ್‌ನ ನಿಮ್ಮ ತಾಯಿ ನೀಡಿದ್ದಾರೆ. ಹುಡುಗಿಯರ ಹಿಂದೆ ಸುತ್ತುವ ಹುಡುಗ ನಿಮಗೆ ಇಷ್ಟ ಇಲ್ಲ ಎಂದು ಹೇಳಿದ್ದಾರೆ. ಆದರೆ ನಮ್ಮ ತಂಡದ ಕೈಗೆ ಒಂದು ಫೋಟೊ ಸಿಕ್ಕಿದೆ ಎಂದು ಹೇಳಿ ಹ್ಯಾಪಿ 5th ಆನಿವರ್ಸರಿ ಮೈ ಲವ್ ಎಂದು ಬರೆಯಲಾದ ಕೇಕ್‌ವೊಂದರ ಮುಂದೆ ಚಾಹತ್ ಕುಂತಿರುವ ಒಂದು ಫೋಟೊವನ್ನು ಸಲ್ಮಾನ್ ಖಾನ್ ತೋರಿಸಿದ್ದಾರೆ. ಈ ಫೋಟೊವನ್ನು ನೋಡಿ ಕಕ್ಕಾಬಿಕ್ಕಿಯಾದ ಚಾಹತ್ ಅಲ್ಲಿಯೇ ಪಕ್ಕದಲ್ಲಿದ್ದ ಅವಿನಾಶ್ ಮೇಲೆ ಕೂಗಾಡಿದ್ದಾರೆ. ಹೀಗೆಲ್ಲ ಮಾಡಬೇಡಿ ಎಂದು ಹೇಳಿದ್ದಾರೆ. ಆಗ ನಿಮ್ಮ ಜೊತೆ ಧಾರಾವಾಹಿಯಲ್ಲಿ ಕೆಲಸ ಮಾಡುವ ಎಲ್ಲರಿಗೆ ನಿಮ್ಮ ಬಾಯ್‌ಫ್ರೆಂಡ್ ವಿಚಾರ ಗೊತ್ತು ಎಂದು ಅವಿನಾಶ್ ಉತ್ತರ ನೀಡಿದ್ದಾರೆ. ಆ ನಂತರ ಮಧ್ಯ ಪ್ರವೇಶಿಸಿದ ಸಲ್ಮಾನ್ ಖಾನ್ ನಿಮಗೆ ಬಾಯ್‌ಫ್ರೆಂಡ್ ಇದ್ದರೆ ಇದ್ದಾರೆ ಎಂದು ಹೇಳಿ, ಇಲ್ಲವಾದರೆ ಇಲ್ಲ ಎಂದು ಹೇಳಿ ಎಂದು ಹೇಳಿದ್ದಾರೆ.

ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಚಾಹತ್ ಅವರ ತಾಯಿ ಸವಾಲನ್ನು ಹಾಕಿದ್ದಾರೆ. ನನ್ನ ಮಗಳಿಗೆ ಯಾವ ಬಾಯ್‌ಫ್ರೆಂಡ್ ಕೂಡ ಇಲ್ಲ ಹಾಗೊಂದು ವೇಳೆ ಇದ್ದಿದ್ದೇ ಆದಲ್ಲಿ ಅವನ ಫೋಟೊ ಮತ್ತು ಹೆಸರನ್ನು ಬಹಿರಂಗಗೊಳಿಸಿ, ನೀವು ಹೀಗೆ ಮಾಡಿದರೆ ನಾನೇ ನಿಮಗೆ 21 ಲಕ್ಷ ಬಹುಮಾನವನ್ನು ಕೊಡುವುದಾಗಿ ಓಪನ್ ಚಾಲೆಂಜ್ ಹಾಕಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿಯನ್ನು ಮಾಡಿವೆ. ಚಾಹತ್ ಪಾಂಡೆ ಅವರ ತಾಯಿ ಹಾಕಿರುವ ಈ ಸವಾಲಿಗೆ ಈ ವಾರಾಂತ್ಯದಲ್ಲಿ ಸಲ್ಮಾನ್ ಖಾನ್ ಹೇಗೆ ಪ್ರತಿಕ್ರಿಯೆಯನ್ನು ನೀಡುತ್ತಾರೆ ಅನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

Read more about: biggboss bigboss salman khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X