ಮದ್ವೆ ಆಗಿದೆ ಅಂತ 'ಬಿಗ್' ಮನೆಯಲ್ಲಿ ಚೈತ್ರಾ ಕೋಟೂರ್ ಹೇಳಿದ್ದೇಕೆ?

Recommended Video

ನನ್ನನ್ನು ಟಾರ್ಗೆಟ್ ಮಾಡಲು ಇದೇ ಕಾರಣ ಅಂದ್ರು ಚೈತ್ರ ಕೋಟೂರ್ | Bigg Boss Kannada 7

ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯಲ್ಲಿ ಈ ಬಾರಿ ಹೆಚ್ಚು ಸದ್ದು ಮಾಡಿದ ಸ್ಪರ್ಧಿಗಳ ಪೈಕಿ ಚೈತ್ರಾ ಕೋಟೂರ್ ಕೂಡ ಒಬ್ಬರು. ತಮ್ಮ ಸ್ವಭಾವ, ವ್ಯಕ್ತಿತ್ವದ ಮೂಲಕ ಮನೆಯಲ್ಲಿದ್ದ ಇತರೆ ಸದಸ್ಯರಿಂದ ಹೆಚ್ಚು ಅಂತರ ಕಾಯ್ದುಕೊಂಡಿದ್ದ ಚೈತ್ರಾ ಕೋಟೂರ್ ಮದ್ವೆ ವಿಚಾರಕ್ಕೆ ಹೆಚ್ಚು ಸುದ್ದಿಯಾಗಿದ್ದರು.

ಕಿರುತೆರೆ ನಟ ಶೈನ್ ಶೆಟ್ಟಿ ಅವರೊಂದಿಗೆ ಮದ್ವೆ ಆಗಿದೆ ಎಂದು ಕಥೆ ಹೇಳಿಕೊಂಡಿದ್ದ ಚೈತ್ರಾ ಕೋಟೂರ್, ವೀಕ್ಷಕರಿಗೆ ಶಾಕ್ ಕೊಟ್ಟಿದ್ದರು. ನಂತರ, ಅದು ಸುಮ್ಮನೆ ಹೇಳಿರುವುದು, ಅದರ ಸತ್ಯವಿಲ್ಲ ಎಂದು ಅರ್ಥವಾಯಿತು.

ಇದಾದ ಮೇಲೆ ನನಗೆ ಮತ್ತೊಬ್ಬ ವ್ಯಕ್ತಿ ಜೊತೆ ವಿವಾಹವಾಗಿದೆ ಎಂದು ಹೇಳುವ ಮೂಲಕ ಬಾಂಬ್ ಸಿಡಿಸಿದ್ದರು. ಸೊಪ್ಪು ಮಾರುವ ವ್ಯಕ್ತಿಯೊಬ್ಬರ ಜೊತೆ ಮದುವೆ ಆಗಿದೆ ಎಂದು ಬಿಗ್ ಬಾಸ್ ನಲ್ಲಿ ಹೇಳಿದ್ದರು.

Chaitra Kottoor Married or Unmarried?

ಈ ಎರಡು ವಿಚಾರದಿಂದ ವೀಕ್ಷಕರಿಗೆ ಚೈತ್ರಾ ಕೋಟೂರ್ ಅವರ ಮದ್ವೆ ಬಗ್ಗೆ ವೀಕ್ಷಕರಿಗೆ ಹೆಚ್ಚು ಗೊಂದಲ ಉಂಟಾಗಿತ್ತು. ಆಕೆ ಹೇಳಿದ್ದು ನಿಜಾನ? ಯಾಕೆ ಹಾಗೆ ಹೇಳಿದ್ದಾರೆ ಎಂದೆಲ್ಲಾ ಮಾತನಾಡಿಕೊಂಡಿದ್ದರು.

ಇದೀಗ, ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಚೈತ್ರಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಶೈನ್ ಶೆಟ್ಟಿ ಜೊತೆ ಮದ್ವೆ ಆಗಿದೆ ಎಂದು ಹೇಳಿದ್ದು ಸುಮ್ಮನೆ. ಅದು ಮನರಂಜನೆ ದೃಷ್ಟಿಯಿಂದ, ಅವರನ್ನ ರೇಗಿಸಲು ಹೇಳಿದ್ದು. ಇನ್ನು ಸೊಪ್ಪು ಮಾರುವ ವ್ಯಕ್ತಿ ಜೊತೆ ಮದುವೆ ಎನ್ನುವುದು ಕೂಡ ಸುಳ್ಳು. ಮಾತನಾಡಲು ಏನೂ ಇಲ್ಲದಿದ್ದಾಗ, ಸುಮ್ಮನೆ ಹೇಳಿದ್ದು ಅಷ್ಟೆ. ನನಗೆ ಮದುವೆ ಆಗಿಲ್ಲ'' ಎಂದು ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇನ್ನು ''ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ಯೋಚನೆ ಇದೆ. ಸ್ಕ್ರಿಪ್ಟ್ ಮೇಲೆ ಗಮನ ಕೊಡುತ್ತೇನೆ'' ಎಂದು ಚೈತ್ರಾ ಕೋಟೂರ್ ತಿಳಿಸಿದ್ದಾರೆ. ಈ ಹಿಂದೆ ಹರಿಪ್ರಿಯಾ ನಟಿಸಿದ್ದ ಸೂಜಿದಾರ ಸಿನಿಮಾದಲ್ಲಿ ಚೈತ್ರಾ ಅಭಿನಯಿಸಿದ್ದರು.

More from Filmibeat

English summary
Bigg boss kannada 7 contestant chaitra kottoor eliminated from bbk 7 house. she participated with filmibeat kannada interview.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X