ಯಾರ ಮೇಲೆ ಎಷ್ಟು ಚೆಕ್‌ಬೌನ್ಸ್ ಕೇಸ್ ಇದೆ, ಯಾರಿಗೆ ಎಷ್ಟು ಗಂಡಂದಿರು ಇದ್ದಾರೆ?- ಚೈತ್ರಾ ಕುಂದಾಪುರ ಪೋಸ್ಟ್ ವೈರಲ್
ಮಳೆ ನಿಂತ್ರು ಮರದ ಹನಿ ನಿಂತಿಲ್ಲ, ಎನ್ನುವಂತೆ ಬಿಗ್‌ಬಾಸ್ ಸೀಸನ್ 12 ಮುಗಿದರೂ ಅಶ್ವಿನಿ ಗೌಡ ಹಾಗೂ ಚೈತ್ರಾ ಕುಂದಾಪುರ ಜಗಳ ಮುಗಿದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ನಡುವೆ ಏಟು ಎದಿರೇಟು ಶುರುವಾಗಿದೆ. ಪರಸ್ಪರ ವೈಯಕ್ತಿಕವಾಗಿ ಕಿತ್ತಾಡಲು ಆರಂಭಿಸಿದ್ದಾರೆ.
"ವೈಯಕ್ತಿಕ ದಾಳಿಗೆ ಇಳಿಯೋದೆ ಆದ್ರೆ ನಾನು ಇಳಿಯಬಲ್ಲೆ. ಆದರೆ ನನಗೂ ನಿಮಗೂ ವ್ಯತ್ಯಾಸ ಇದೆ. ನನಗೂ ಗೊತ್ತು, ಯಾರ ಮೇಲೆ ಎಷ್ಟು ಚೆಕ್‌ಬೌನ್ಸ್ ಕೇಸ್‌ಇದೆ, ಯಾರಿಗೆ ಎಷ್ಟು ಗಂಡಂದಿರು ಇದ್ದಾರೆ? ಯಾಕೆ ತನ್ನ ಪ್ರೀತಿಯ ಬಗ್ಗೆ ಎರಡು ನಿಮಿಷ ಮಾತನಾಡುವ ಧೈರ್ಯ ಕೂಡ ಬಿಗ್ ಬಾಸ್ ಮನೆಯ ಒಳಗಡೆ ತೋರಿಸಲಿಲ್ಲ. ಎಲ್ಲವನ್ನು ಮಾತನಾಡಬಲ್ಲೆ, ಆದರೆ ನಾನು ಇವರಷ್ಟು ಚೀಪ್‌ಅಲ್ಲ, ನನಗೆ ಇನ್ನೊಬ್ಬರ ಮೇಲೆ ವೈಯಕ್ತಿಕ ದಾಳಿ ಮಾಡಿ ಪ್ರಚಾರ ಪಡೆಯುವ ಹುಚ್ಚು ಇಲ್ಲ. ಅಂದಹಾಗೆ ಚೆಕ್ ಬೌನ್ಸ್‌ಕೇಸ್ ಕೂಡ ವಂಚನೆ ಕೇಸ್ ಅಡಿಯಲ್ಲೇ ಬರುತ್ತದೆ. ಮೂರು ಗಂಡಂದಿರು.. ಕ್ಷಮಿಸಿ ಈಗ ಹೆಗಲು ಮುಟ್ಟಿ ನೋಡಿಕೊಳ್ಳಬೇಕು" ಎಂದು ಚೈತ್ರಾ ಕುಂದಾಪುರ ಮಾಡಿರುವ ಪೋಸ್ಟ್ ಈಗ ಚರ್ಚೆ ಹುಟ್ಟಾಕ್ಕಿದೆ. ಪರೋಕ್ಷವಾಗಿ ಯಾರನ್ನೋ ಉದ್ದೇಶಿಸಿ ಆಕೆ ಹೀಗೆ ಪೋಸ್ಟ್ ಮಾಡಿದ್ದಾರೆ. ಆದರೆ ಅಶ್ವಿನಿ ಜೊತೆಗಿನ ಕಿರಿಕ್ ನಡುವೆಯೇ ಈ ಪೋಸ್ಟ್ ಮಾಡಿರುವುದು ವೈರಲ್ ಆಗ್ತಿದೆ.

ಬಿಗ್‌ಬಾಸ್ ಸೀಸನ್ 12ರಲ್ಲಿ ಅಶ್ವಿನಿ ಗೌಡ 2ನೇ ರನ್ನರ್ ಅಪ್ ಎನಿಸಿಕೊಂಡಿದ್ದರು. 112 ದಿನಗಳ ಕಾಲ ಮನೆಯಲ್ಲಿ ಇದ್ದರು. ದೊಡ್ಮನೆಗೆ ಅತಿಯಾಗಿ ಹೋಗಿದ್ದ ಚೈತ್ರಾ ಕುಂದಾಪುರ 3 ವಾರಗಳ ಕಾಲ ಉಳಿದುಕೊಂಡಿದ್ದರು. ಈ ವೇಳೆ ಟಾಸ್ಕ್‌ಗಳಲ್ಲಿ ಕೂಡ ಭಾಗಿ ಆಗಿದ್ದರು. ಟಾಸ್ಕ್‌ವೊಂದರಲ್ಲಿ ಅಶ್ವಿನಿ ಹಾಗೂ ಚೈತ್ರಾ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಪರಸ್ಪರ ಪರಚಾಡಿಕೊಂಡು ಗಾಯ ಮಾಡಿಕೊಂಡಿದ್ದರು. ಹೀಗೆ ಮೈಮೇಲೆ ಆಗಿದ್ದ ಗಾಯದ ಕಲೆಗಳ ಫೋಟೊವನ್ನು ಅಶ್ವಿನಿ ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದೇ ಇಬ್ಬರ ನಡುವೆ ಮತ್ತೆ ಕೆಸರೆರಚಾಟಕ್ಕೆ ಕಾರಣವಾಗಿದೆ.
ಅಶ್ವಿನಿ ಗೌಡ ತಮ್ಮ ಕೈ ಮೇಲಿನ ಪರಚಿದ ಗಾಯಗಳ ಗುರುತಿನ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದರು. ಅದು ವೈರಲ್ ಆಗ್ತಿದ್ದಂತೆ "ಇದು ಪಿಆರ್ ತಂತ್ರ, ನಾನು ಪಿಆರ್ ಮಾಡಿಲ್ಲ" ಎಂದು ಟಾಂಗ್ ಕೊಟ್ಟಿದ್ದರು. ಇದಕ್ಕೆ ಅಶ್ವಿನಿ ಅಭಿಮಾನಿಗಳು "ಅದು ಪಿಆರ್ ಅಲ್ಲ, ಗೌರವ, ಪಿಆರ್ ತಂತ್ರದಿಂದ ಗೌರವ ಬರೋದಿಲ್ಲ" ಎಂದು ಹಾಕಿದ್ದರು. ಅದನ್ನು ಅಶ್ವಿನಿ ಗೌಡ ಸೇರ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ "ಪಕ್ಕಾ ಸರ್ಕಾರಿ ಶಾಲೆ, ಕನ್ನಡ ಮೀಡಿಯಂ ಮಕ್ಕಳು ನಾವು, ಇದನ್ನೆಲ್ಲ ನಮ್ಮ ಹತ್ರ ಇಟ್ಕೊಬೇಡಿ, ಇಂತಹ ಗಿಮಿಕ್ ಎಲ್ಲವನ್ನು ಕನ್ನಡ ಓದೋಕೆ ಬರೆಯೋಕೆ ಬರದೆ ಇರೋ ಇಂಗ್ಲಿಷ್ ಮಕ್ಕಳ ಹತ್ರ ಇಟ್ಕೋಳಿ" ಎಂದು ಚೈತ್ರಾ ಪೋಸ್ಟ್ ಮಾಡಿ ತುಪ್ಪ ಸುರಿದರು. ಇನ್ನು ಅಶ್ವಿನಿ ಬೆಂಬಲಕ್ಕೆ ಜಾಹ್ನವಿ ಬಂದರು. ಹಾಗಾಗಿ ಚೈತ್ರಾ, ಜಾಹ್ನವಿ ನಡುವೆ ಕಾಮೆಂಟ್ ವಾರ್ ನಡೀತು.
"ಆಟದ ನಡುವೆ ಇಬ್ಬರಿಗೂ ಗಾಯಗಳಾಗಿತ್ತು. ಟಾಸ್ಕ್ ವೇಳೆ ಆಗಿದ್ದು. ಅಶ್ವಿನಿ ಬೇಕಂತಲೇ ಮಾಡಿದ್ರು ಎಂದು ಹೇಳುವುದಕ್ಕೆ ಆಗಲ್ಲ" ಎಂದು ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವೀಡಿಯೋ ಚೈತ್ರಾ ಹಂಚಿಕೊಂಡಿದ್ದಾರೆ. ಅಶ್ವಿನಿ ಬಗ್ಗೆ ನೆಟ್ಟಿಗರು ಹಾಕಿರುವ ಕಾಮೆಂಟ್‌ಗಳ ಸ್ಕ್ರೀನ್ ಶಾಟ್ ಅನ್ನು ಕೂಡ ಚೈತ್ರಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಅಭಿಮಾನಿಗಳು ಆಕೆಗೆ ಬೆಂಬಲ ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ ಈ ಸೋಶಿಯಲ್ ಮೀಡಿಯಾ ವಾರ್ ಭಾರೀ ಚರ್ಚೆ ಹುಟ್ಟಾಕ್ಕಿದೆ.


Click it and Unblock the Notifications











