Chaitra Rai: 'ರಾಧಾ ಕಲ್ಯಾಣ'ದ ಚೈತ್ರಾ ರೈ ಧಾರಾವಾಹಿಯಿಂದ ಬ್ರೇಕ್ ಪಡೆದಿದ್ದೇಕೆ?

By ಅನಿತಾ ಬನಾರಿ

ಚೈತ್ರಾ ರೈ... ಕನ್ನಡ ಕಿರುತೆರೆ ವೀಕ್ಷಕರಿಗೆ ತೀರಾ ಪರಿಚಿತ ಹೆಸರು. ದಶಕಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಆಶು ಬೆದ್ರ ನಿರ್ದೇಶನದ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿ ರಾಧಿಕಾಳ ಅಕ್ಕ ವಿಶಾಖಾ ಆಗಿ ಅಭಿನಯಿಸಿದ್ದ ಚೈತ್ರಾ ರೈ ಸದ್ಯ ನಟನೆಯಿಂದ ದೂರವಿದ್ದಾರೆ. ಮಗಳು ನಿಷ್ಕಾ ಶೆಟ್ಟಿಯ ಸಲುವಾಗಿ ಬಣ್ಣದ ಬದುಕಿನಿಂದ ದೂರವಿದ್ದ ಚೈತ್ರಾ ಶೆಟ್ಟಿ ಇದೀಗ ಮಗಳ ಪಾಲನೆ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ.

ಹೋಟೆಲ್ ಮ್ಯಾನೆಂಜ್ಮೆಂಟ್ ಕೋರ್ಸ್ ಮಾಡುತ್ತಿದ್ದ ಚೈತ್ರಾ ರೈ ನಟಿಯಾದುದು ಆಕಸ್ಮಿಕ. ಅಚಾನಕ್ ಆಗಿ ನಟಿಯಾಗುವ ಅವಕಾಶ ದೊರೆತಾಗ ಬೇಡ ಎನ್ನದ ಚೈತ್ರಾ ರೈ ಓದಿಗೆ ವಿದಾಯ ಹೇಳಿ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಬೆಡಗಿ.

'ಕುಸುಮಾಂಜಲಿ', 'ಗೆಜ್ಜೆಪೂಜೆ', 'ನಾಗಮಣಿ', 'ಪೌರ್ಣಮಿ','ಯುಗಾದಿ', 'ಬೊಂಬೆಯಾಟವಯ್ಯಾ', 'ಬಣ್ಣದ ಬುಗುರಿ' ಸೇರಿದಂತೆ ಒಂದಷ್ಟು ಧಾರಾವಾಹಿಯಲ್ಲಿ ನಟಿಸಿರುವ ಚೈತ್ರಾ ಗೆ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ತಂದುಕೊಟ್ಟಿದ್ದು 'ರಾಧಾ ಕಲ್ಯಾಣ'ದ ವಿಶಾಖಾ ಪಾತ್ರ.

ತೆಲುಗು ಕಿರುತೆರೆಯಲ್ಲಿ ಬ್ಯುಸಿ

ತೆಲುಗು ಕಿರುತೆರೆಯಲ್ಲಿ ಬ್ಯುಸಿ

'ರಾಧಾ ಕಲ್ಯಾಣ' ಧಾರಾವಾಹಿಯ ನಂತರ ತೆಲುಗು ಕಿರುತೆರೆಗೆ ಹಾರಿದ ಚೈತ್ರಾ ರೈ ಏಳು ವರ್ಷಗಳ ಕಾಲ ತಮ್ಮ ನಟನೆಯ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿದರು. ತೆಲುಗಿನ 'ಅಕ್ಕ ಚೆಲ್ಲುಲು' ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದ ಚೈತ್ರಾ ರೈ ಮುಂದೆ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಿದ್ದರು.

ಹಂತಹಂತವಾಗಿ ನಟನೆ ಕಲಿತ ನಟಿ

ಹಂತಹಂತವಾಗಿ ನಟನೆ ಕಲಿತ ನಟಿ

"ಆಕಸ್ಮಿಕವಾಗಿ ನಟನೆಗೆ ಕಾಲಿಟ್ಟ ನಾನು ಹಂತಹಂತವಾಗಿ ನಟನೆಯ ರೀತಿ ನೀತಿಗಳನ್ನು ತಿಳಿದುಕೊಂಡೆ. ನನ್ನ ಪ್ರಕಾರ, ನಟನೆಯೆಂದರೆ ಇಂದು ನಾಳೆ ಕಲಿತು ಬರುವಂತಹ ವಿದ್ಯೆಯಲ್ಲ. ಬದಲಿಗೆ ಪ್ರತಿದಿನವೂ ಕಲಿಯುವಂತದ್ದು. ಯಾಕೆಂದರೆ ಪ್ರತಿದಿನವೂ ಈ ಕ್ಷೇತ್ರದಲ್ಲಿ ಹೊಸತನ್ನು ಕಲಿಯುವಂತಹ ಅವಕಾಶಗಳಿರುತ್ತದೆ.

'ರಾಧಾ ಕಲ್ಯಾಣ'ದಿಂದ ಫೇಮಸ್

'ರಾಧಾ ಕಲ್ಯಾಣ'ದಿಂದ ಫೇಮಸ್

'ರಾಧಾ ಕಲ್ಯಾಣ' ಧಾರಾವಾಹಿಯ ನಂತರ ನಾನು ಕನ್ನಡ ಕಿರುತೆರೆಯಲ್ಲಿ ನಟಿಸಲೇ ಇಲ್ಲ. ದಶಕಗಳಿಂದ ನಾನು ಕನ್ನಡ ಕಿರುತೆರೆಯಿಂದ ದೂರವಿದ್ದರೂ ಸಹ ಜನ ನನ್ನನ್ನು, ವಿಶಾಖಾ ಪಾತ್ರವನ್ನು ಮರೆತಿಲ್ಲ. ಅನೇಕ ಜನ ಸೀರಿಯಲ್ ಪ್ರಿಯರು ನನ್ನನ್ನು ವಿಶಾಖಾ ಆಗಿ ಗುರುತಿಸುವಾಗ ಖುಷಿಯಾಗುತ್ತದೆ. ಮಾತ್ರವಲ್ಲ ಜನರು ಇಂದಿಗೂ ಆ ಪಾತ್ರವನ್ನು ನೆನಪಿಟ್ಟುಕೊಂಡಿದ್ದಾರೆ ಎಂದರೆ ಅದಕ್ಕಿಂತ ಖುಷಿಯ ವಿಚಾರ ಬೇರೇನಿದೆ ಎಂಬುದು ಚೈತ್ರಾ ರೈ ಅಂಬೋಣ.

English summary
Chaitra Rai who has taken a break from acting, played the role of Vishakha in the serial Radha Kalyana, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X