ಕಿರುತೆರೆಗೆ 'ಜೋಡಿ ಹಕ್ಕಿ' ಚೈತ್ರಾ ರಾವ್ ಕಮ್ ಬ್ಯಾಕ್: ಕಿರುತೆರೆ, ಸಿನಿಮಾದಲ್ಲಿ ಬ್ಯುಸಿ
'ರಾಗ ಅನುರಾಗ', 'ಜೋಡಿಹಕ್ಕಿ' ಧಾರಾವಾಹಿಗಳಲ್ಲಿ ಲೀಡ್ ಪಾತ್ರವನ್ನು ಮಾಡಿರುವ ನಟಿ ಚೈತ್ರ ರಾವ್ ಸದ್ಯ ಆರಾಧನಾ ಆಗಿ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ಆರಾಧನಾ ಆಗಿ ನಟಿಸುತ್ತಿರುವ ಚೈತ್ರಾ ರಾವ್ ಚಿಕ್ಕಂದಿನಿಂದಲೂ ಡ್ಯಾನ್ಸು, ಡ್ರಾಮಾ ಎಂದು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಬೆಡಗಿ.
ಉದಯ ಟಿವಿಯಲ್ಲಿ ನಾಗಾಭರಣ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ 'ಮನಸೇ ಓ ಮನಸೇ' ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು. ಅಲ್ಲಿಂದ ಆರಂಭವಾದ ಟಿವಿ ಜರ್ನಿ ಅವರನ್ನು ತುಂಬ ದೂರಕ್ಕೆ ಕರೆದುಕೊಂಡು ಬಂದಿದ್ದೆ ಎಂದರೆ ತಪ್ಪಾಗಲಾರದೆನೋ.

ನಾಟಕವೇ ನನ್ನ ಜೀವನದ ಟರ್ನಿಂಗ್ ಪಾಯಿಂಟ್
ಚಿಕ್ಕಂದಿನಲ್ಲಿ ತುಂಬಾ ಮೃದು ಸ್ವಭಾವದವಳಾಗಿದ್ದ ಚೈತ್ರಾ ರಾವ್ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಅವರ ಈ ಸ್ವಭಾವದಿಂದ ಅವರ ತಂದೆ ತಾಯಿಗೂ ಆತಂಕವಾಗಿತ್ತು. ಹಾಗಾಗಿ ಅವರು ಚೈತ್ರರನ್ನು ಡ್ರಾಮಾಗೆ ಸೇರಿಸಿದರು ಇದುವರೆಗೂ ಐವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಭಾಗಿಯಾಗಿದ್ದಾರೆ ಚೈತ್ರಾ. ಮೊದಲ ನಾಟಕದ ಪ್ರಾಕ್ಟೀಸ್ ಸಮಯದಲ್ಲಿ ಎಲ್ಲರೊಂದಿಗೆ ಬೆರೆಯಲು ಕಲಿತಿದ್ದಲ್ಲದೆ ಅದುವೇ ಅವರ ಜೀವನದ ಟರ್ನಿಂಗ್ ಪಾಯಿಂಟ್ ಕೂಡಾ ಆಯಿತು.
ನಾಟಕದಿಂದ ಧಾರಾವಾಹಿಗೆ ಚೈತ್ರಾ ಪಯಣ
ನಾಟಕಗಳ ಜೊತೆಗೆ ಧಾರಾವಾಹಿಯಲ್ಲಿ ನಟಿಸುವ ಅಭಿಲಾಷೆಯೂ ಈಕೆಗೆ ಮೂಡಿತು. ಅದೇ ಸಮಯಕ್ಕೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನಸೇ ಓ ಮನಸೇ' ಧಾರಾವಾಹಿಯಲ್ಲಿ ಅಭಿನಯಿಸಿದರು. ಅದಾದ ಮೇಲೆ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಬರುತ್ತಲೇ ಇದ್ದವು. ಮಾಸ್ಟರ್ ಕಿಶನ್ ಅವರ ನಿರ್ದೇಶನದ ಕೇರ್ ಆಫ್ ಫುಟ್ ಪಾತ್ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು ಚೈತ್ರ ರಾವ್.

ಕೆಲಸಕ್ಕೆ ಫುಲ್ ಸ್ಟಾಪ್ ಹಾಕಿದ ಚೈತ್ರ
'ಕೇರ್ ಆಫ್ ಫುಟ್ ಪಾತ್' ಸಿನಿಮಾದಲ್ಲಿ ನಟಿಸಿದ ನಂತರ ಓದಿನ ಕಂಡೆ ಗಮನ ಹರಿಸಿದರು ಚೈತ್ರಾ. ಅದಾದ ಮೇಲೆ ಕೆಲಸಕ್ಕೂ ಸೇರಿದರು. ಆದರೆ ಕೆಲಸದಿಂದ ಸಿಗುತ್ತಿದ್ದ ಏಕತಾನತೆ ಅವರಿಗೇಕೋ ಇಷ್ಟವಾಗಲಿಲ್ಲ ಹಾಗಾಗಿ ಜಾಬ್‌ಗೆ ರಿಸೈನ್ ಮಾಡಿ ನಟನೆಯನ್ನೇ ಫುಲ್ ಟೈಮ್ ಪ್ಯಾಶನ್ ಮಾಡಿಕೊಂಡರು.
ಆರಾಧನಾ ಆಗಿ ಕಂ ಬ್ಯಾಕ್
'ರಾಗ ಅನುರಾಗ' ಎಂಬ ಧಾರಾವಾಹಿಯಲ್ಲಿ ಲೀಡ್ ಪಾತ್ರ ಸಿಕ್ಕಿದ್ದು ಚೈತ್ರ ರಾವ್ ಅವರಿಗೆ ತುಂಬಾ ಸಂತೋಷ ನೀಡಿತ್ತು. ಅದರ ಜೊತೆಗೆ 'ಧ್ವನಿ' ಎಂಬ ಆರ್ಟ್ ಫಿಲಂನಲ್ಲಿಯೂ ಈಕೆ ಕಾಣಿಸಿಕೊಂಡಿದ್ದರು. ಮುಂದೆ 'ಜೋಡಿಹಕ್' ಧಾರಾವಾಹಿಯಲ್ಲಿ ಜಾನಕಿಯಾಗಿ ಕಾಣಿಸಿಕೊಂಡ ಚೈತ್ರ ಆ ಪಾತ್ರದ ಮೂಲಕ ಕರುನಾಡಿನಾದ್ಯಂತ ಮನೆ ಮಾತಾಗಿದ್ದರು. ಇದೀಗ ಆರಾಧನ ಆಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಚೈತ್ರ ರಾವ್ ಹಿರಿತೆರೆಯಲ್ಲಿ ಮಿಂಚಿದ ಬೆಡಗಿ.
ಸಿನಿಮಾದಲ್ಲಿಯೂ ಸದ್ದು ಮಾಡಿದ ಚೆಲುವೆ
'ಮಾಯಾ ಬಜಾರ್', 'ಟಾಮ್ ಆ್ಯಂಡ್ ಜೆರ್ರಿ' ಸಿನಿಮಾಗಳಲ್ಲಿ ಲೀಡ್ ರೋಲ್ ನಲ್ಲಿ ಮಿಂಚಿದ ಚೈತ್ರ ರಾವ್ ಗೆ ಧಾರಾವಾಹಿ ಆದ ಮೇಲೆ ಸಿನಿಮಾ, ಸಿನಿಮಾ ನಂತರ ಧಾರವಾಹಿ ಹೀಗೆ ಎರಡು ಕ್ಷೇತ್ರದಿಂದಲೂ ಅವಕಾಶಗಳು ಕರೆಗಳು ಬರುತ್ತಲೇ ಇರುತ್ತವೆ. ಒಳ್ಳೊಳ್ಳೆಯ ಕಥೆಗಳ ಜೊತೆಗೆ ಒಳ್ಳೊಳ್ಳೆಯ ಪಾತ್ರಗಳಿಗೆ ಪ್ರಾಶಸ್ತ್ಯ ಕೊಡುತ್ತಿದ್ದಾರೆ ಚೈತ್ರಾ.


Click it and Unblock the Notifications











