Actress Chaitra Reddy: ಸಿನಿಮಾಗಳಲ್ಲಿ ಮೋಡಿ ಮಾಡಿದ ಚೈತ್ರಾ ರೆಡ್ಡಿ.. ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅವನು ಮತ್ತೆ ಶ್ರಾವಣಿ' ಧಾರಾವಾಹಿಯಲ್ಲಿ ನಾಯಕಿ ಶ್ರಾವಣಿ ಆಗಿ ನಟಿಸಿದ್ದ ಚೈತ್ರಾ ರೆಡ್ಡಿ ಸದ್ಯ ತಮಿಳು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಕಾಯಲ್' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಚೈತ್ರಾ ರೆಡ್ಡಿ ಕಳೆದ ಎರಡು ವರ್ಷಗಳಿಂದ ತಮಿಳು ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅವನು ಮತ್ತೆ ಶ್ರಾವಣಿ' ಧಾರಾವಾಹಿಯ ನಂತರ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿರದ ಚೈತ್ರಾ ರೆಡ್ಡಿ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. 'ಕಲ್ಯಾಣಂ ಮುದಲ್ ಕಾದಲ್ ವರೈ' ಧಾರಾವಾಹಿಯಲ್ಲಿ ಧಾರಾವಾಹಿಯ ಮೂಲಕ ಪರಭಾಷೆ ಕಿರುತೆರೆಗೆ ಕಾಲಿಟ್ಟ ಚೈತ್ರಾ ರೆಡ್ಡಿ ಮುಂದೆ 'ಪೂವ್ವೆ ಪೂಚುಡವ', 'ಸುಭದ್ರ ಪರಿಣಯಂ', 'ತಿರುಮತಿ ಹಿಟ್ಲರ್', 'ಯಾರಡೀ ನೀ ಮೋಹಿನಿ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಸಿನಿಮಾಗಳಲ್ಲಿಯೂ ಮೋಡಿ
'ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾಪ ಮಾಡಿದ ಚೈತ್ರಾ ರೆಡ್ಡಿ ಮುಂದೆ 'ರಗಡ್' ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಜೊತೆಗೆ ತೆರೆ ಹಂಚಿಕೊಂಡಿದ್ದರು. ಮುಂದೆ ತಮಿಳಿನ 'ವಾಲಿಮೈ' ಸಿನಿಮಾದಲ್ಲಿ ನಟಿಸಿದ ಈಕೆ ತಮಿಳಿನ 'ವಿಷಮಕಾರನ್' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ 'ಎಂ ಆರ್ ಪಿ' ಸಿನಿಮಾದಲ್ಲಿ ಈಕೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಟೆಲಿವಿಷನ್ ಸಿರೀಸ್‌ನಲ್ಲೂ ನಟನೆ
ನಂದಕುಮಾರ್ ರಾಜು ನಿರ್ದೇಶನದ 'ಮಾಯಾ ತೋಟ' ಎನ್ನುವ ಆಕ್ಷನ್ ಕ್ರೈಂ ಥ್ರಿಲ್ಲರ್ ನಲ್ಲಿಯೂ ಚೈತ್ರಾ ರೆಡ್ಡಿ ಬಣ್ಣ ಹಚ್ಚಿದ್ದಾರೆ. ಒಂದು ಸೀಸನ್ ಈಗಾಗಲೇ ಹೊರಬಂದಿದ್ದು ಅದರಲ್ಲಿ ಆರು ಸೀಸನ್‌ಗಳಿವೆ. ಅದು ಇದೇ ವರ್ಷ ಫೆಬ್ರವರಿಯಲ್ಲಿ ತೆರೆ ಕಂಡಿತ್ತು.

ಸಿನಿಮಾಟೋಗ್ರಾಫರ್ ಪತ್ನಿ
2020 ರಂದು ಸಿನಿಮಾಟೋಗ್ರಾಫರ್, ನಿರ್ಮಾಪಕರು ರಾಕೇಶ್ ಸಮಾಲಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ಚೈತ್ರಾ ರೆಡ್ಡಿ ಅದ್ಧೂರಿಯಾಗಿ ಬ್ಯಾಚುಲರೇಟ್ ಪಾರ್ಟಿ ಕೂಡಾ ಮಾಡಿಕೊಂಡಿದ್ದರು. ಜೊತೆಗೆ ಎಂಗೇಜ್‌ಮೆಂಟ್ ಅನ್ನು ಕೂಡಾ ಅದ್ಧೂರಿಯಾಗಿ ಮಾಡಿಕೊಂಡಿದ್ದ ಚೈತ್ರಾ ರೆಡ್ಡಿ ಅಂತೂ ಕುಟುಂಬದ ಉಪಸ್ಥಿತಿಯೊಂದಿಗೆ ಮದುವೆಯಾಗುತ್ತಿದ್ದೇವೆ. ಅಂತೂ ಪ್ರೀತಿ, ತಾಳ್ಮೆ ಗೆದ್ದಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.


Click it and Unblock the Notifications











