BBK12: ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಮನೆಗೆ ಹೋಗಿದ್ಯಾಕೆ? ಬಾಯ್ತಪ್ಪಿ ನಿಜ ಹೇಳಿಬಿಟ್ಟ ಚೈತ್ರಾ
ಬಿಗ್‌ಬಾಸ್ ಸೀಸನ್ 12ರಲ್ಲಿ ಈ ವಾರ ಮಾಜಿ ಸ್ಪರ್ಧಿಗಳ ಆರ್ಭಟ ಜೋರಾಗಿದೆ. ಕಳೆದ ಸೀಸನ್‌ನಲ್ಲಿ ಆಡಿ ವೀಕ್ಷಕರನ್ನು ರಂಜಿಸಿದ್ದ ರಜತ್, ಉಗ್ರಂ ಮಂಜು, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ತ್ರಿವಿಕ್ರಮ್ ಮನೆ ಒಳಗೆ ಹೋಗಿ ಈ ಬಾರಿಯ ಸ್ಪರ್ಧಿಗಳಿಗೆ ಕ್ವಾಟ್ಲೆ ಕೊಡುತ್ತಿದ್ದಾರೆ. ಎಲ್ಲರಿಗೂ ಗಿಲ್ಲಿ ಒಬ್ನೇ ಟಾಂಗ್ ಕೊಡುತ್ತಿರುವುದು ವೀಕ್ಷಕರಿಗೆ ಮಜಾ ಕೊಡುತ್ತಿದೆ.
ಅಂದಹಾಗೆ ಬಿಗ್‌ಬಾಸ್ ಮನೆ ಹೋಟೆಲ್ ಆಗಿ ಬದಲಾಗಿದೆ. ಮನೆಯಲ್ಲಿರುವ ಸ್ಪರ್ಧಿಗಳು ಹೋಟೆಲ್ ಸಿಬ್ಬಂದಿ ಆಗಿ ಬದಲಾಗಿದ್ದು ಅತಿಥಿಗಳಾಗಿ ಹೋಗಿರುವ ಮಾಜಿ ಸ್ಪರ್ಧಿಗಳಿಗೆ ಊಟೋಪಚಾರ ಮಾಡುವ ಟಾಸ್ಕ್ ಸಿಕ್ಕಿದೆ. ಆರಂಭದಲ್ಲೇ ಮಂಜು ಹಾಗೂ ರಜತ್ ಬಗ್ಗೆ ಗಿಲ್ಲಿ ಮಾಡಿದ ಕಾಮಿಡಿ ಎಡವಟ್ಟಾಗಿತ್ತು. ಇದರಿಂದ ಅತಿಥಿಗಳಿಗೆ ಬೇಸರವಾಗಿ ಕಿರಿಕ್ ಆಗಿತ್ತು. ಗಿಲ್ಲಿ ಕಾಮಿಡಿಗೆ ಕೆಲ ವೀಕ್ಷಕರಿಂದರೂ ಅಸಮಾಧಾನ ವ್ಯಕ್ತವಾಗಿದೆ.

ರಜತ್, ಮಂಜು ಹಾಗೂ ಚೈತ್ರಾ ಎಷ್ಟೇ ಕೂಗಾಡಿದ್ರು ಗಿಲ್ಲಿ ಮಾತ್ರ ತಲೆ ಕೆಡಿಸಿಕೊಳ್ತಿಲ್ಲ. ತಮ್ಮದೇ ಶೈಲಿಯಲ್ಲಿ ಆಟ ಮುಂದುವರೆಸಿದ್ದಾರೆ. 5 ಜನರನ್ನು ಒಬ್ರೇ ಸತಾಯಿಸುತ್ತಿದ್ದಾರೆ. ಇನ್ನು ಮಾಜಿ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ ಅತಿಥಿಗಳಾಗಿ ಹೋಗಿರುವುದು ಯಾಕೆ? ಅದು ಒಂದು ಟಾಸ್ಕ್ ಸರಿ. ಆದರೆ ಅವರನ್ನು ಬಿಗ್‌ಬಾಸ್ ಯಾಕೆ ಮನೆ ಒಳಗೆ ಕಳುಹಿಸಿದ್ದಾರೆ ಎನ್ನುವ ಬಗ್ಗೆ ಬಾಯ್ತಪ್ಪಿ ಚೈತ್ರಾ ಹೇಳಿರುವಂತೆ ಕಾಣುತ್ತಿದೆ.
ವಿವಿಧ ಮನಸ್ಥಿತಿಯ ವ್ಯಕ್ತಿಗಳನ್ನು ಒಂದು ಮನೆಯಲ್ಲಿ ಕೂಡಿ ಹಾಕಿ ಟಾಸ್ಕ್‌ಗಳನ್ನು ಕೊಟ್ಟು ದೈಹಿಕವಾಗಿ, ಮಾನಸಿಕರಾಗಿ ಆಡಿಸುವ ಆಟ ಬಿಗ್‌ಬಾಸ್. ಪ್ರತಿದಿನ ಸ್ಪರ್ಧಿಗಳಿಗೆ ಒಂದೊಂದು ಅಚ್ಚರಿ ಕಾದಿರುತ್ತದೆ. ಬಿಗ್‌ಬಾಸ್ ಆಡಿಸುವ ಆಟವನ್ನು ಬಲ್ಲವರು ಯಾರು? ಮೇಲ್ನೋಟಕ್ಕೆ ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಮನೆಗೆ ಹೋಗಿದ್ದಾರೆ. ಸೀಸನ್ 12ರ ಸ್ಪರ್ಧಿಗಳು ಅವರನ್ನು ಹೇಗೆ ನೋಡಿಕೊಳ್ಳುತ್ತಾರೆ ಎನ್ನುವುದು ಟಾಸ್ಕ್. ಆದರೆ ಅತಿಥಿಗಳಾಗಿ ಹೋಗಿರುವವರಿಗೆ ಬಿಗ್‌ಬಾಸ್ ಸೀಕ್ರೆಟ್ ಟಾಸ್ಕ್ ಕೊಟ್ಟಿದ್ದಾರೆ. ಅದು ಮನೆಯಲ್ಲಿನ ಒಗ್ಗಟ್ಟು ಮುರಿಯುವುದು.
ತ್ರಿವಿಕ್ರಮ್ ಜೊತೆ ಚೈತ್ರಾ ಮಾತನಾಡುತ್ತಾ "ಇವತ್ತು ಆಡಿದ ಆಟದಿಂದ ಇವರಲ್ಲಿ ಒಗ್ಗಟ್ಟು ಇಲ್ಲ ಎನ್ನುವುದು ಗೊತ್ತಾಯ್ತಲ್ಲ. ನಾವು ಅದಕ್ಕೆ ಬಂದಿರೋದು ತಾನೇ, ನಾವು ಬಂದಿರುವುದು ಇವರ ಒಗ್ಗಟ್ಟು ಪರೀಕ್ಷಿಸೋಕೆ ಅಲ್ವಾ? ಯಾರ ಒಗ್ಗಟ್ಟು ಎಷ್ಟಿದೆ ಎಂದು ನೋಡೋಕೆ" ಎಂದು ಚೈತ್ರಾ ಹೇಳಿರುವುದು ವೈರಲ್ ಆಗ್ತಿದೆ. ಇದನ್ನು ನೋಡಿದ ವೀಕ್ಷಕರು ಮಾಜಿ ಸ್ಪರ್ಧಿಗಳಿಗೆ ಇದೇ ಟಾಸ್ಕ್ ಕೊಟ್ಟಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅತಿಥಿಗಳ ಆರ್ಭಟದ ನಡುವೆ ಗಿಲ್ಲಿ ಹಾಗೂ ಅಶ್ವಿನಿ ಗೌಡ ಒಂದಾಗಿದ್ದಾರೆ. ಮೊದಲ ದಿನದಿಂದಲೂ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇತ್ತು. ಗಿಲ್ಲಿ ಸದಾ ಅಶ್ವಿನಿ ಕಾಲೆಳೆಯುವುದು, ಆಕೆ ಕೂಗಾಡುವುದು ನಡೆಯುತ್ತಲೇ ಇತ್ತು. ಒಮ್ಮೆ ಕೂಡ ಪ್ರೀತಿಯಿಂದ ಮಾತನಾಡಿರಲಿಲ್ಲ. ಆದರೆ ಈ ವಾರ ಬದಲಾವಣೆ ಕಂಡು ಬಂದಿದೆ. ಅತಿಥಿಗಳು ಅತಿಯಾಗಿ ಆಡುತ್ತಿರುವುದು ಇಬ್ಬರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಾಗಿ ಇಬ್ಬರೂ ಜೊತೆಯಾದಂತೆ ಕಾಣುತ್ತಿದೆ.
ಅತಿಥಿಗಳು ಗರಂ ಆಗಿದ್ದರಿಂದ ಮನೆ ಮಂದಿ ಗಿಲ್ಲಿ ವಿರುದ್ಧ ತಿರುಗಿಬಿದ್ದಿದ್ದರು. ಹಾಗಾಗಿ ಗಿಲ್ಲಿ ಕೊಂಚ ಸೈಲೆಂಟ್ ಆಗಿದ್ದಾರೆ. ಇದು ಅಶ್ವಿನಿ ಇಷ್ಟವಾಗಿಲ್ಲ. ಗಿಲ್ಲಿಯನ್ನು ಕರೆದು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. 'ಕೂಲ್ ಆಗಿರು. ಏನಾದರೂ ಹಿಂಸೆ ಅನ್ನಿಸದರೆ ಕೂಗು ಬರ್ತೀನಿ" ಎಂದು ಅಶ್ವಿನಿ ಸಮಾಧಾನ ಮಾಡಿರುವ ವೀಡಿಯೋ ವೈರಲ್ ಆಗ್ತಿದೆ. ಅಶ್ವಿನಿ ನಡೆ ವೀಕ್ಷಕರಿಗೆ ಕೂಡ ಅಚ್ಚರಿ ಮೂಡಿಸಿದೆ. ಇಬ್ಬರೂ ಹೀಗೆ ಸ್ನೇಹಿತರಾಗಿ ಇರಲಿ, ಅತಿಥಿಗಳ ಆಟಕ್ಕೆ ಬ್ರೇಕ್ ಹಾಕಲಿ ಎಂದು ಹಾರೈಸುತ್ತಿದ್ದಾರೆ.


Click it and Unblock the Notifications











