For Quick Alerts
  ALLOW NOTIFICATIONS  
  For Daily Alerts

  ಮತ್ತೆ ವಿವಾದದಲ್ಲಿ ಕಪಿಲ್ ಶರ್ಮಾ ಶೋ: ಆತ್ಮೀಯ ಗೆಳೆಯನನ್ನೇ ಹೊರಹಾಕಿದ ಕಪಿಲ್!?

  |

  ಹಿಂದಿಯ ಬಹು ಜನಪ್ರಿಯ ಟಿವಿ ಕಾರ್ಯಕ್ರಮ 'ದಿ ಕಪಿಲ್ ಶರ್ಮಾ ಶೋ' ಮತ್ತೆ ಸುದ್ದಿಯಲ್ಲಿದೆ. ಶೋನ ಜನಪ್ರಿಯ ನಟರನ್ನು ಹೊರಹಾಕುವ ಕಪಿಲ್‌ರ ಹಳೆಯ ಚಾಳಿಯೇ ಈಗಲೂ ಮುಂದುವರೆದಿದೆ ಎನ್ನಲಾಗುತ್ತಿದೆ.

  2016 ರಿಂದಲೂ ಶೋ ಪ್ರಸಾರವಾಗುತ್ತಿದ್ದು ಹಲವು ಅದ್ಭುತ ನಟರು ಈ ಶೋನ ಭಾಗವಾಗಿದ್ದಾರೆ. ಆದರೆ ಶೋನ ಮುಖ್ಯ ನಿರೂಪಕ ಕಪಿಲ್ ಶರ್ಮಾ, ಆಗಾಗ್ಗೆ ತನ್ನದೇ ತಂಡದ ಸದಸ್ಯರ ಜೊತೆ ಜಗಳ ಮಾಡಿಕೊಂಡು ನಟರನ್ನು ಶೋ ಇಂದ ಹೊರಹಾಕಿದ್ದಿದೆ.

  ಇದೀಗ ಹೊಸ ಸೀಸನ್ ಆರಂಭವಾಗುವ ಮುನ್ನ ಇನ್ನಿಬ್ಬರು ಜನಪ್ರಿಯ ನಟರನ್ನು ಶೋನಿಂದ ಕಪಿಲ್ ಹೊರಗಿಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ನಟರು ಸಹ ಸ್ಪಷ್ಟನೆ ನೀಡಿದ್ದಾರೆ.

  ಕಪಿಲ್ ಶರ್ಮಾರ ಸ್ಟ್ರಗಲಿಂಗ್ ಸಮಯದಿಂದಲೂ ಅವರ ಜೊತೆಗಿದ್ದ ಆತ್ಮೀಯ ಗೆಳೆಯ ಹಾಗೂ ನಟ ಚಂದನ್ ಪ್ರಭಾಕರ್ ಕಪಿಲ್ ಶರ್ಮಾ ಶೋನಿಂದ ಹೊರಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಕಪಿಲ್ ಶರ್ಮಾ, ಟಿವಿ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಪಾಲ್ಗೊಳ್ಳುತ್ತಿದ್ದ ಕಾಲದಿಂದಲೂ ಚಂದನ್, ಕಪಿಲ್ ಶರ್ಮಾ ಜೊತೆಗೆ ನಟಿಸುತ್ತಿದ್ದಾರೆ. ಆದರೆ ಮುಂದಿನ ಸೀಸನ್‌ನಲ್ಲಿ ಚಂದನ್ ಇರುವುದಿಲ್ಲವಂತೆ.

  ಶೋನಿಂದ ಹೊರಗೆ ಹೋಗಿರುವುದು ನಿಜ: ಚಂದನ್

  ಶೋನಿಂದ ಹೊರಗೆ ಹೋಗಿರುವುದು ನಿಜ: ಚಂದನ್

  ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಚಂದನ್ ಪ್ರಭಾಕರ್, ''ನಾನು ಶೋನಿಂದ ಹೊರಗೆ ಹೋಗಿರುವುದು ನಿಜ. ಆದರೆ ಇದಕ್ಕೆ ನಿಖರ ಕಾರಣ ಇಲ್ಲ. ನನಗೆ ಬ್ರೇಕ್ ಬೇಕು ಎನ್ನಿಸಿತು ಹಾಗಾಗಿ ಶೋನಿಂದ ಹೊರಗೆ ಬಂದಿದ್ದೇನೆ'' ಎಂದಿದ್ದಾರೆ. ಆದರೆ ಕಪಿಲ್ ಹಾಗೂ ಚಂದನ್ ನಡುವೆ ಇರುವ ಅಸಮಾಧಾನದಿಂದಲೇ ಚಂದನ್ ಶೋನಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ.

  ಸಂಭಾವನೆ ವಿಷಯಕ್ಕೆ ಭಿನ್ನಾಭಿಪ್ರಾಯ

  ಸಂಭಾವನೆ ವಿಷಯಕ್ಕೆ ಭಿನ್ನಾಭಿಪ್ರಾಯ

  'ಕಪಿಲ್ ಶರ್ಮಾ ಶೋ'ನ ಪ್ರಮುಖ ಆಕರ್ಷಣೆ ಕೃಷ್ಣ ಅಭಿಷೇಕ್ ಸಹ ಶೋನಿಂದ ಹೊರಗೆ ಬಂದಿದ್ದಾರೆ. ಅವರೂ ಸಹಹ ಮಾಧ್ಯಮಗಳೊಟ್ಟಿಗೆ ಮಾತನಾಡಿ, ''ಶೋನಿಂದ ಹೊರಗೆ ಬಂದಿದ್ದು ನಿಜ. ಶೋನ ಆಯೋಜಕರೊಟ್ಟಿಗೆ ಉಂಟಾದ ಭಿನ್ನಾಭಿಪ್ರಾಯಗಳಿಂದಾಗಿ ಶೋನಿಂದ ಹೊರಗೆ ಬಂದೆ ಎಂದಿದ್ದಾರೆ. ಸಂಭಾವನೆ ವಿಷಯಕ್ಕೆ ಶೋನ ಆಯೋಜಕರು ಹಾಗೂ ಕೃಷ್ಣ ನಡುವೆ ಮನಸ್ಥಾಪ ಉಂಟಾಗಿದೆ ಎನ್ನಲಾಗಿದೆ.

  ಶೋನಿಂದ ಹೊರಗೆ ಬಂದ ಸುನಿಲ್ ಗ್ರೋವರ್‌

  ಶೋನಿಂದ ಹೊರಗೆ ಬಂದ ಸುನಿಲ್ ಗ್ರೋವರ್‌

  ಕಪಿಲ್ ಶರ್ಮಾ ಶೋನ ಜನಪ್ರಿಯ ನಟರಾಗಿದ್ದ ಸುನಿಲ್ ಗ್ರೋವರ್ ಸಹ ಕಪಿಲ್ ಶರ್ಮಾ ಜೊತೆಗಿನ ಮನಸ್ಥಾಪದಿಂದ ಹೊರಗೆ ಬಂದಿದ್ದರು. ಶೋ ಮುಗಿಸಿ ತಂಡದೊಂದಿಗೆ ಫ್ಲೈಟ್‌ನಲ್ಲಿ ಬರುವಾಗ ಕಪಿಲ್ ಶರ್ಮಾ, ಸುನಿಲ್ ಗ್ರೋವರ್‌ ಮೇಲೆ ಹಲ್ಲೆಗೆ ಮುಂದಾಗಿದ್ದರು. ಚಪ್ಪಲಿಯಲ್ಲಿ ಸುನಿಲ್ ಅನ್ನು ಹೊಡೆಯಲು ಯತ್ನಿಸಿದ್ದರು ಎನ್ನಲಾಗಿತ್ತು. ಅದೇ ಕಾರಣದಿಂದ ಸುನಿಲ್ ಗ್ರೋವರ್ 'ದಿ ಕಪಿಲ್ ಶರ್ಮಾ ಶೋ'ನಿಂದ ಹೊರಗೆ ಹೋದರು.

  ಹಲವರು ಶೋನಿಂದ ಹೊರಗೆ ಹೋಗಿದ್ದರು

  ಹಲವರು ಶೋನಿಂದ ಹೊರಗೆ ಹೋಗಿದ್ದರು

  ಸುನಿಲ್ ಗ್ರೋವರ್ ಮಾತ್ರವೇ ಅಲ್ಲದೆ, ಅಲಿ ಅಸ್ಗರ್ ಹಾಗೂ ಕೀಕು ಶಾರ್ದಾ ಸಹ ಕಪಿಲ್ ಶರ್ಮಾ ಶೋನಿಂದ ಹೊರಗೆ ಹೋಗಿದ್ದರು. ಅಲಿ ಅಸ್ಗರ್ ವಾಪಸ್ ಬರಲಿಲ್ಲ ಆದರೆ ಕೀಕು ಶಾರ್ದಾ ವಾಪಸ್ ಬಂದರು. ಭಾರತಿ ಸಿಂಗ್ ಸಹ ಶೋನಿಂದ ಒಮ್ಮೆ ಹೊರಗೆ ಹೋಗಿ ಬಳಿಕ ಮರಳಿದರು. ನಟಿ ಶುಮೋನಾ ಸಹ ಕಪಿಲ್ ಜೊತೆ ಭಿನ್ನಾಭಿಪ್ರಾಯದಿಂದ ಶೋನಿಂದ ಹೊರಗೆ ಹೋಗಿದ್ದರು. ಅವರು ಸಹ ಮರಳಿದರು.

  English summary
  Famous comedian Chandan Prabhakar came out from The Kapil Sharma Show. Also Krishna Abhishek also came out from the show.
  Thursday, September 8, 2022, 15:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X