ಸಿನಿಮಾದತ್ತ ಚಂದನ್; ಸದ್ಯವೇ ತೆರೆ ಮೇಲೆ ದರ್ಶನ!

'ಬೆಳದಿಂಗಳ ಬಾಲೆ', 'ನಿಷ್ಕರ್ಷ' ಹಾಗೂ 'ನಮ್ಮೂರ ಮಂದಾರ ಹೂವೆ' ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಖ್ಯಾತ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನ ಹಾಗೂ ಪ್ರಜ್ವಲ್ ದೇವರಾಜ್ ನಾಯಕತ್ವದ ಸರಿಗಮ ಚಿತ್ರದಲ್ಲಿ ಪಾತ್ರವೊಂದಕ್ಕೆ ಆಫರ್ ಬಂತು. ಅದರ ಚಿತ್ರೀಕರಣ ಪ್ರಾರಂಭವೂ ಆಯ್ತು. ಆದರೆ ಅರ್ಧಕ್ಕೆ ನಿಂತ ಚಿತ್ರೀಕರಣ ಇನ್ನೂ ಮುಂದುವರಿದಿಲ್ಲ.
*ನಿಮ್ಮದೇ ಕಥೆ, ಚಿತ್ರಕಥೆಯ ಸಿನಿಮಾ ಯಾವಾಗ ಪ್ರಾರಂಭ?
ಸದ್ಯಕ್ಕೆ ಧಾರಾವಾಹಿಯ ನಾಯಕನಾಗಿ ಬಣ್ಣದ ಬದುಕಿನ 'ಜರ್ನಿ' ಮುಂದುವರಿಸುತ್ತಿದ್ದೇನೆ. ನನ್ನ ನಾಯಕತ್ವದಲ್ಲಿ ನನ್ನದೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಇದ್ದು ಹೊಸ ನಿರ್ದೇಶಕರೊಬ್ಬರ ಸಿನಿಮಾ ಮುಂದಿನ ತಿಂಗಳು ಸೆಟ್ಟೇರಲಿದೆ. ಆ ಚಿತ್ರದ ಹೆಸರು 'ರಂಗಶಂಕರ' ಇದು ನಾನು ಇಷ್ಟಪಟ್ಟು ಮಾಡುತ್ತಿರುವ ಸಿನಿಮಾ. ಹೀಗಾಗಿ ಆ ಕ್ಷಣಕ್ಕೆ ಎದುರು ನೋಡುತ್ತಿದ್ದೇನೆ.
*ನಿಮಗೆ ಇಷ್ಟವಾಗುವಂತ ಪಾತ್ರಗಳು ಯಾವವು? ಎಂಥ ಸಿನಿಮಾ ಮಾಡಬೇಕೆಂದಿದ್ದೀರಿ?
(ನಗು...) ನನಗೆ ಎಲ್ಲಕ್ಕಿಂತ ಮೊದಲು ಕಥೆ ಇಷ್ಟವಾಗಬೇಕು. ಕೇಳಿದ ತಕ್ಷಣ ಮನದಲ್ಲಿ ಮಿಂಚು ಹರಿದಂತಾಗಬೇಕು. ಎರಡು ಫೈಟ್, ನಾಲ್ಕು ಸಾಂಗ್ ಇದ್ದರೆ ಅದು ಸಿನಿಮಾ ಎಂದು ನನಗೆ ಅನ್ನಿಸುವುದಿಲ್ಲ. ಸಿನಿಮಾದಿಂದ ಸಮಾಜಕ್ಕೆ ಏನಾದರೂ ಉಪಯೋಗ ಆಗುವಂತಿರಬೇಕು. ನಾನು ನಟಿಸುವ ಪಾತ್ರವೂ ಅಷ್ಟೇ, ತನ್ನ ಮೂಲಕ ಅದು ಸಮಾಜಕ್ಕೆ ಒಂದು ಒಳ್ಳೆಯ ಕೊಡುಗೆ ಎನಿಸಬೇಕು.
ಇನ್ನು ನಾನು ಮಾಡಲಿರುವ ಸಿನಿಮಾಗಳು 'ಸಮಾಜಮುಖಿ' ಸಬ್ಜೆಕ್ಟ್ ಹೊಂದಿರುತ್ತವೆ ಎಂದು ಮಾತ್ರ ಸದ್ಯಕ್ಕೆ ಹೇಳಬಲ್ಲೆ. ಈಗಲೇ ಎಲ್ಲವನ್ನು ಹೇಳಲಾರೆನಾದರೂ ನನ್ನ ಚಿತ್ರಗಳು ಹಾಗೂ ಪಾತ್ರಗಳ ಮೂಲಕ ಸಮಾಜಕ್ಕೆ ಒಳಿತಾಗುತ್ತದೆ. ಅಂತಹ ಚಿತ್ರಗಳನ್ನೇ ಹೆಚ್ಚು ಮಾಡಲಿದ್ದೇನೆ ಎಂದು ಮಾತ್ರ ಹೇಳಬಲ್ಲೆ. ಒಟ್ಟಿನಲ್ಲಿ ಸದ್ಯದಲ್ಲೇ ಸಿನಿಮಾ ಪ್ರಯಾಣ ಪ್ರಾರಂಭಿಸಲಿದ್ದೇನೆ... ಎಲ್ಲವೂ ಪ್ಲಾನ್ ಪ್ರಕಾರವೇ ನಡೆಯುತ್ತಿದೆ. ಕಾಲ ಕೈಹಿಡಿದರೆ ನನ್ನಿಷ್ಟದ ಬಣ್ಣದ ಬದುಕಿನಲ್ಲಿ ಖುಷಿಯಾಗಿಬಲ್ಲೆ ಎಂಬ ಆತ್ಮವಿಶ್ವಾಸ ನನ್ನಲ್ಲಿದೆ...
***


Click it and Unblock the Notifications











