ಅಂಡರ್ ವಾಟರ್‌ನಲ್ಲಿ ಪತ್ನಿ ನಿವೇದಿತಾಗೆ ಚುಂಬಿಸಿದ ಚಂದನ್ ಶೆಟ್ಟಿ: ವಿಡಿಯೋ ವೈರಲ್.. ಏನಂದ್ರು ನೆಟ್ಟಿಗರು?

By ಪೂರ್ವ

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಪಟ್ಟೆ ಆಕ್ಟಿವ್ ಆಗಿರುತ್ತಾರೆ. ಈ ಜೋಡಿಯನ್ನು ಕಂಡು ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ತಮ್ಮನ್ನ ತಾವೇ ಕಾಲೆಳೆದುಕೊಳ್ಳುವ ಈ ಜೋಡಿ ಕಂಡು ನೆಟ್ಟಿಗರು ಭಿನ್ನ ವಿಭಿನ್ನ ಕಮೆಂಟ್‌ಗಳನ್ನು ಮಾಡಿದ್ದೂ ಇದೆ.

ಹೀಗೆ ವಿಭಿನ್ನ ಕಾನ್ಸೆಪ್ಟ್‌ ಇಟ್ಟುಕೊಂಡು ವಿಡಿಯೋ ಮಾಡಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಫೋಟೊ ಶೇರ್ ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಈ ವಿಡಿಯೋಗಳು ಒಂದಲ್ಲ ಒಂದು ವಿವಾದಕ್ಕೆ ಸಿಕ್ಕಿಕೊಳ್ಳುತ್ತಲೇ ಇರುತ್ತೆ. ಇವರಿಬ್ಬರ ಜೋಡಿ ನೋಡಿ ಖುಷಿ ಪಡೋ ನೆಟ್ಟಿಗರು ತಿರುಗಿಬಿದ್ದಿದ್ದೂ ಇದೆ.

Chandan Shetty and Niveditha Gowda Kissing in Underwater Goes Viral: here is Netizens Reaction

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಹೊಸದೊಂದು ವಿಡಿಯೋ ಶೇರ್ ಮಾಡಿದ್ದಾರೆ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಂಡರ್ ವಾಟರ್‌ನಲ್ಲಿ ಇಬ್ಬರೂ ಚುಂಬಿಸಿಕೊಂಡ ವಿಡಿಯೋ ಬಗ್ಗೆ ಪರ ಹಾಗೂ ವಿರೋಧದ ಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ಇವರಿಬ್ಬರ ವಿಡಿಯೋ ವೈರಲ್ ಆಗುತ್ತಿರೋದೇಕೆ? ನೆಟ್ಟಿಗರು ಈ ಜೋಡಿಯ ವಿರುದ್ಧ ತಿರುಗಿಬಿದ್ದಿದ್ದೇಕೆ? ತಿಳಿಯಲು ಮುಂದೆ ಓದಿ.

ಕಿಸ್ಸಿಂಗ್ ವಿಡಿಯೋ ವೈರಲ್

ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ವಿಡಿಯೋ ಒಂದನ್ನು ಶೇರ್ ಮಾಡಿದ್ದರು. ಅಂಡರ್ ವಾಟರ್‌ನಲ್ಲಿ ಕನ್ನಡ ರಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ವಿಡಿಯೋ ಮಾಡಿದ್ದಾರೆ. ಜೊತೆಗೆ ನೀರಿನೊಳಗೆ ಇಬ್ಬರೂ ಚುಂಬಿಸಿಕೊಂಡಿದ್ದಾರೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕಣ್ಣುಗಳನ್ನು ಕೆಂಪಾಗಿಸಿವೆ.

ಅಂಡರ್ ವಾಟರ್ ಫೋಟೊಶೂಟ್‌

ಚಂದನ್ ಹಾಗೂ ನಿವೇದಿತಾ ಅಂಡರ್ ವಾಟರ್‌ನಲ್ಲಿ ಫೋಟ ಶೂಟ್ ಮಾಡಿಸಿಕೊಂಡಿದ್ದಾರೆ. ಇದೇ ವೇಳೆ ಖುಷಿಯಲ್ಲಿ ಪರಸ್ಪರ ಚುಂಬಿಸಿಕೊಂಡಿದ್ದಾರೆ. ಅದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಕೂಡ ಮಾಡಿದ್ದಾರೆ. ಈ ವಿಡಿಯೋಗೆ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು ಕಿಡಿಕಾರಿದ್ದಾರೆ. ಹಾಗಂತ ಈ ಜೋಡಿ ಟ್ರೋಲ್ ಮಾಡಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ರೀಲ್ಸ್ ಮಾಡುವ ವೇಳೆ ಮುತ್ತಿಟ್ಟು ಟ್ರೋಲ್ ಆಗಿದ್ದರು.

ನೆಟ್ಟಿಗರ ಕೋಪಕ್ಕೆ ಗುರಿಯಾದ ನಿವಿ-ಚಂದನ್

ಅಂಡರ್ ವಾಟರ್ ಕಿಸ್ಸಿಂಗ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಕನ್ನಡ ರಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಟ್ರೋಲ್ ಆಗಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಿಸಿದ್ದಾರೆ. ಅಲ್ಲದೆ 22 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ. ಜೊತೆಗೆ ಡಿಸೈನ್ ಡಿಸೈನ್‌ ಆಗಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲ ನೆಟ್ಟಿಗರು ಕಮೆಂಟ್ ಮಾಡಿ ಈ ಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನೆಟ್ಟಿಗರ ಕಮೆಂಟ್ ಏನು?

"ನಿವೇದಿತಾ ಹಾಗೂ ಚಂದನ್ ಗೌಡ ನಿಮಗೆ ಮನೆ ಇಲ್ವಾ. ಈ ರೀತಿ ಯಾಕೆ ಪದೇ ಪದೆ ಎಲ್ಲರ ಎದುರು ಲಿಪ್ ಲಾಕ್ ಮಾಡುತ್ತಿದ್ದೀರಾ?" ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು "ನೀವು ಗಂಡ-ಹೆಂಡತಿ ಇದೆಲ್ಲಾ ನಿಮ್ಮ Bedroomನಲ್ಲಿ ಇಟ್ಕೊಳ್ಳಿ. Publicನಲ್ಲಿ ಏಕೆ ತೋರಿಸುತ್ತೀರ. ಅಸಹ್ಯ, ಅನಾಗರಿಕತೆಯ ಪರಮವಾದಿ" ಎಂದು ಮತ್ತೊಬ್ಬರು ಕಿಡಿ ಕಾರಿದ್ದಾರೆ."ಇದನ್ನೇ ಬೇರೆಯವರು ಮಾಡಿದ್ರೆ ಚಂದ. ಆದರೆ, ಚಂದನ್ ಶೆಟ್ಟಿ, ನಿವೇದಿತಾ ಗೌಡ ಮಾಡಿದ್ರೆ ತಪ್ಪು. ಏನಾಗಿದೆ ಈ ಜನಕ್ಕೆ ಅಂತ?" ಎಂದು ನೆಟ್ಟಿಗರೊಬ್ಬರು ಈ ಜೋಡಿಯ ಬೆಂಬಲಕ್ಕೆ ನಿಂತಿದ್ದಾರೆ.

ಕಾಮೆಂಟ್‌ಗಳಿಗೆ ಡೋಂಟ್ ಕೇರ್

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿಗೆ ಟ್ರೋಲ್ ಆಗೋದು ಹೊಸತೇನಲ್ಲ. ಅವರು ಅದೆಂತಹದ್ದೇ ವಿಡಿಯೋ ಪೋಸ್ಟ್ ಮಾಡಿದರೂ, ನೆಟ್ಟಿಗರು ಕಿಡಿಕಾರುತ್ತಲೇ ಇರುತ್ತಾರೆ. ಆದರೆ, ಈ ಜೋಡಿ ಅದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಲೈಫ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಟ್ರಾವೆಲ್, ಫುಡ್, ಬ್ಲಾಕ್, ಸೋಶಿಯಲ್ ಮೀಡಿಯಾ ಅಂತ ತಮ್ಮಷ್ಟಕ್ಕೆ ತಾವಿದ್ದಾರೆ.

More from Filmibeat

English summary
Chandan Shetty and Niveditha Gowda Kissing in Underwater Goes Viral: here is Netizens Reaction, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X