ಕೆಂಪು ಬಣ್ಣದ ಮಾಡರ್ನ್ ಡ್ರೆಸ್‌ನಲ್ಲಿ ಕಿಕ್ ಕೊಟ್ಟ ನಿವೇದಿತಾ; ಮತ್ತೆ ಕೆಂಪಾಯ್ತು ನೆಟ್ಟಿಗರ ಕಣ್ಣುಗಳು
ಒಂದಲ್ಲ ಒಂದು ಸುದ್ದಿಯಲ್ಲಿರುವ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಅದರಲ್ಲೂ ವಿಚ್ಚೇದನದ ಬಳಿಕ ಮಂಕಾಗಿ ಕೂರದೇ ಲೈಫ್ ಅನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಮುಂದಕ್ಕೆ ಹೋಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸದಾ ಒಂದಲ್ಲ ಒಂದು ವಿಡಿಯೋ ಪೋಸ್ಟ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ, ಈ ವಿಡಿಯೋಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
ನಿವೇದಿತಾ ಗೌಡ ವಿಚ್ಛೇದನದ ಬಳಿಕ ಸದಾ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಅವರು ಏನೇ ಮಾಡಿದರೂ ನೆಟ್ಟಿಗರು ಕಣ್ಣು ಕೆಂಪು ಮಾಡಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ಇದೀಗ ದಿನಕ್ಕೊಂದು ಹೊಸ ಅವತಾರದಲ್ಲಿ ಕಾಣಿಸುತ್ತಿದ್ದಾರೆ. ಒಮ್ಮೆ ಸೀರೆಯುಟ್ಟು ಕಾಣಿಸಿಕೊಂಡರೆ, ಇನ್ನೊಂದು ಕಡೆ ಪಕ್ಕಾ ಮಾಡರ್ನ್ ಲುಕ್‌ನಲ್ಲಿ ಮಿಂಚುತ್ತಾರೆ. ಕೆಲವರು ಈ ಲುಕ್ ನೋಡಿ ಖುಷಿ ಪಟ್ಟರೆ, ಇನ್ನು ಕೆಲವರು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಕೆಲವೇ ಕ್ಷಣಗಳ ಹಿಂದೆ ನಿವೇದಿತಾ ಗೌಡ ಕಡು ಕೆಂಪು ಬಣ್ಣದಲ್ಲಿ ಮಾಡರ್ನ್ ಲುಕ್ ಕೊಡುತ್ತಾ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸ್ಯಾಂಡಲ್‌ವುಡ್‌ನ ಈ ಬಾರ್ಬಿ ಡಾಲ್ ಲುಕ್‌ಗೆ ಮತ್ತೆ ಕೆಲವರು ಫಿದಾ ಆಗಿದ್ದಾರೆ. ಮತ್ತೆ ಕೆಲವರು ಸಿಡಿಮಿಡಿಗೊಂಡಿದ್ದಾರೆ. ಅಷ್ಟಕ್ಕೂ ನಿವೇದಿತಾ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಸಿಟ್ಟಾಗುವಂತಹದ್ದು ಏನಿದೆ? ತಿಳಿಯಲು ಮುಂದೆ ಓದಿ.
ಬಿಗ್‌ಬಾಸ್ ಕನ್ನಡದ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಿವೇದಿತಾ ಗೌಡರನ್ನು ಬಾರ್ಬಿ ಡಾಲ್ ಅಂತಲೇ ಫೇಮಸ್ ಆಗಿದ್ದರು. ಚಂದನ್ ಶೆಟ್ಟಿಯನ್ನು ವಿವಾಹವಾದ ಬಳಿಕ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಅದೇ ಚಂದನ್ ಶೆಟ್ಟಿಯಿಂದ ಬೇರಾದ ಬಳಿಕ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಸದ್ಯಕ್ಕೀಗ ರೀಲ್ಸ್ ಮಾಡಿಕೊಂಡು ಅಭಿಮಾನಿಗಳ ಮನಸನ್ನು ಕದಿಯುತ್ತಿದ್ದಾರೆ.
ನಿವೇದಿತಾ ಗೌಡಗೆ ಫ್ಯಾನ್ಸ್ ಫಾಲೋವಿಂಗ್ ಏನೂ ಕಮ್ಮಿಯಿಲ್ಲ. ಇಷ್ಟು ದಿನ ರೀಲ್ಸ್‌ನಲ್ಲಿ ಬ್ಯುಸಿಯಾಗಿದ್ದ ನಿವೇದಿತಾ ಗೌಡ ಈಗ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ನಿವೇದಿತಾ ಗೌಡ ಕೆಂಪು ಬಣ್ಣದ ಮಾಡರ್ನ್ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿಯೇ ಕಾಣಿಸುತ್ತಿದ್ದಾರೆ. ಕೆಂಪು ಬಣ್ಣದ ಬಟ್ಟೆಯನ್ನು ತೊಟ್ಟು ಬಹಳ ಮಾಡರ್ನ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಅವರ ಭಂಗಿಗಳನ್ನು ನೋಡಿ ಕೆಲವರು ಕಳೆದು ಹೋಗಿದ್ದಾರೆ.
ಚಂದನ್ ಶೆಟ್ಟಿ ಜೊತೆ ನಿವೇದಿತಾ ಗೌಡ ಮದುವೆ ಆದ ಬಳಿಕ ನಿವೇದಿತಾ ಗೌಡ ಕೂದಲಿಗೆ ಕತ್ತರಿ ಹಾಕಿದ್ದರು. ಅಲ್ಲಿಂದ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ. ಚಂದನ್ ಶೆಟ್ಟಿ ಜೊತೆ ದಾಂಪತ್ಯ ಮುರಿದು ಕೊಂಡ ಬಳಿಕ ಜೀವನದಲ್ಲಿ ಧೃತಿಗೆಟ್ಟಿಲ್ಲ. ತಮ್ಮ ಜೀವನವನ್ನು ನಿವೇದಿತಾ ಗೌಡ ತಮಗೆ ಇಷ್ಟ ಬಂದ ಹಾಗೇ ರೂಪಿಸಿಕೊಳ್ಳುವುದಕ್ಕೆ ನಿರ್ಧರಿಸಿದಂತೆ ಇದೆ. ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸುಳಿವು ಕೊಟ್ಟಿದ್ದಾರೆ.
ಆದರೆ, ಅದ್ಯಾಕೋ ನಿವೇದಿತಾ ಮಾಡರ್ನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಾಗಲೆಲ್ಲಾ ನೆಟ್ಟಿಗರು ಕಣ್ಣುಗಳನ್ನು ಕೆಂಪು ಮಾಡಿಕೊಳ್ಳುತ್ತಾರೆ. ಕೆಂಪು ಬಣ್ಣದ ಮಾಡರ್ನ್ ಡ್ರೆಸ್‌ನಲ್ಲಿ ನಿವೇದಿತಾ ಗೌಡ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಕಾಮೆಂಟ್‌ಗಳು ಶುರುವಾಗಿದೆ. "ವಾವ್ ಲುಕಿಂಗ್ ಸೋ ಕ್ಯೂಟ್" ಎಂದು ಕೆಲವರು ಬರೆದುಕೊಂಡರೆ, ಮತ್ತೆ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಈಗಾಗಲೇ ನಿವೇದಿತಾ ಗೌಡ ಕೂಡ ಟ್ರೋಲ್ ಮಾಡುವವರಿಗೆ ಸಖತ್ ಆಗಿಯೇ ಟಾಂಗ್ ಕೊಟ್ಟಿದ್ದು, ಅದ್ಯಾವುದನ್ನೂ ತಲೆಗೆ ಹಾಕಿಕೊಂಡಿಲ್ಲ.


Click it and Unblock the Notifications











