ಫಿನಾಲೆಗೂ ಮುಂಚೆ ನಿರ್ಧಾರವಾಯ್ತು 'ಬಿಗ್ ಬಾಸ್ ಕನ್ನಡ-5 ವಿನ್ನರ್'.!
Recommended Video

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಜನವರಿ 28 ರಂದು ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಈಗಾಗಲೇ ಐದು ಜನ ಸ್ಪರ್ಧಿಗಳು ಫಿನಾಲೆಗೆ ಆಯ್ಕೆಯಾಗಿದ್ದು, ಯಾರು ಗೆಲ್ಲಬಹುದು ಎಂಬ ಕುತೂಹಲ ವೀಕ್ಷಕರನ್ನ ಕಾಡುತ್ತಿದೆ. ಹೀಗಿರುವಾಗಲೇ ಬಿಗ್ ಬಾಸ್ 5ನೇ ಆವೃತ್ತಿಯ ವಿನ್ನರ್ ಯಾರೆಂದು ಘೋಷಣೆ ಆಗಿದೆ.
ನಟ ಕಾರ್ತಿಕ್ ಜಯರಾಂ, ಕನ್ನಡ Rapper ಚಂದನ್ ಶೆಟ್ಟಿ, ಬೆಳಗಾವಿ ಬೆಡಗಿ ಶ್ರುತಿ ಪ್ರಕಾಶ್, ಮೈಸೂರಿನ ನಿವೇದಿತಾ ಗೌಡ ಹಾಗೂ ಸೇಲ್ಸ್ ಮ್ಯಾನ್ ದಿವಾಕರ್ ಫೈನಲ್ ಗೆ ಪ್ರವೇಶ ಪಡೆದುಕೊಂಡಿದ್ದಾರೆ.
ಈ ಐವರಲ್ಲಿ ಯಾರು ವಿನ್ನರ್ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಆದ್ರೆ, ಈ ಆವೃತ್ತಿಯ ಗೆಲ್ಲುವ ಸ್ಪರ್ಧಿ ಯಾರೆಂದು ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ನಿರ್ಧಾರವಾಗಿದೆ. ಹಾಗಿದ್ರೆ, ಈ ಬಾರಿಯ ವಿನ್ನರ್ ಯಾರು? ಮುಂದೆ ಓದಿ.....

ಜೆ.ಕೆ ಪ್ರಕಾರ ವಿನ್ನರ್....?
ಕಾರ್ತಿಕ್ ಜಯರಾಂ ಅವರ ಪ್ರಕಾರ ಈ ಆವೇತ್ತಿಯ ಬಿಗ್ ಬಾಸ್ ಗೆಲ್ಲುವುದು ಚಂದನ್ ಶೆಟ್ಟಿ. ತಮ್ಮ ಟ್ಯಾಲೆಂಟ್ ಮೂಲಕ ಪ್ರೇಕ್ಷಕರನ್ನ ರಂಜಿಸಿರುವ ಚಂದನ್ ವಿನ್ನರ್ ಆಗಬಹುದು ಎಂದು ತಿಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಜೆಕೆ, ಮೂರನೇ ಸ್ಥಾನದಲ್ಲಿ ದಿವಾಕರ್, ನಾಲ್ಕನೇ ಸ್ಥಾನದಲ್ಲಿ ಶ್ರುತಿ ಹಾಗೂ ಐದನೇ ಸ್ಥಾನಕ್ಕೆ ನಿವೇದಿತಾ ಗೌಡ ಅವರನ್ನ ಆಯ್ಕೆ ಮಾಡಿದರು.

ಚಂದನ್ ಶೆಟ್ಟಿ ಪ್ರಕಾರ ವಿನ್ನರ್...?
ಕನ್ನಡ Rapper ಚಂದನ್ ಶೆಟ್ಟಿ ಅವರ ಪ್ರಕಾರ ಬಿಗ್ ಬಾಸ್ 5ನೇ ಆವೃತ್ತಿಯನ್ನ ಜೆಕೆ ಗೆಲ್ಲಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಎರಡನೇ ಸ್ಥಾನದಲ್ಲಿ ಚಂದನ್, ಮೂರನೇ ಸ್ಥಾನದಲ್ಲಿ ದಿವಾಕರ್, 4ನೇ ಸ್ಥಾನದಲ್ಲಿ ನಿವೇದಿತಾ ಹಾಗೂ 5ನೇ ಸ್ಥಾನದಲ್ಲಿ ಶ್ರುತಿ ಎಂದು ಚಂದನ್ ತಿಳಿಸಿದ್ದಾರೆ.

ನಿವೇದಿತಾ ಗೌಡ ಪ್ರಕಾರ ಗೆಲ್ಲೋರು?
'ಗೊಂಬೆ' ಖ್ಯಾತಿಯ ನಿವೇದಿತಾ ಗೌಡ ಅವರ ಪ್ರಕಾರ ಚಂದನ್ ಶೆಟ್ಟಿ ಬಿಗ್ ಬಾಸ್ ಗೆಲ್ಲುತ್ತಾರೆ ಎಂದಿದ್ದಾರೆ. ಜೆಕೆ ಎರಡನೇ ಸ್ಥಾನ, ಮೂರನೇ ಸ್ಥಾನಕ್ಕೆ ನಿವೇದಿತಾ ಗೌಡ, 4ನೇ ಸ್ಥಾನಕ್ಕೆ ದಿವಾಕರ್ ಮತ್ತು 5ನೇ ಸ್ಥಾನದಲ್ಲಿ ಶ್ರುತಿ ಎಂದು ನಿರ್ಧರಿಸಿದ್ದಾರೆ.

ಶ್ರುತಿ ಪ್ರಕಾರ ವಿನ್ನರ್...?
ಶ್ರುತಿ ಪ್ರಕಾಶ್ ಅವರ ಪ್ರಕಾರ, ಈ ಆವೃತ್ತಿಯನ್ನ ಗಲ್ಲುವ ಸ್ಪರ್ಧಿ ಜೆಕೆ ಎಂದು ನಿರ್ಧರಿಸಿದ್ದಾರೆ. ಇನ್ನುಳಿದಂತೆ ಎರಡನೇ ಸ್ಥಾನದಲ್ಲಿ ಚಂದನ್ ಶೆಟ್ಟಿ, ಮೂರನೇ ಸ್ಥಾನದಲ್ಲಿ ಶ್ರುತಿ ಪ್ರಕಾಶ್, ನಾಲ್ಕನೇ ಸ್ಥಾನದಲ್ಲಿ ದಿವಾಕರ್ ಮತ್ತು ಐದನೇ ಸ್ಥಾನಕ್ಕೆ ನಿವೇದಿತಾ ಗೌಡ ಬರ್ತಾರೆ ಎಂದು ತಿಳಿಸಿದ್ದಾರೆ.

ದಿವಾಕರ್ ದೃಷ್ಠಿಯಲ್ಲಿ ವಿನ್ನರ್..?
ಸೇಲ್ಸ್ ಮ್ಯಾನ್ ದಿವಾಕರ್ ಅವರ ಪ್ರಕಾರ, ಚಂದನ್ ಶೆಟ್ಟಿ ಬಿಗ್ ಬಾಸ್ ಕಿರೀಟವನ್ನ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದಾರೆ. ತದನಂತರ ಸ್ಥಾನಗಳಲ್ಲಿ ಜೆಕೆ, ಶ್ರುತಿ ಪ್ರಕಾಶ್, ನಿವೇದಿತಾ ಗೌಡ, ದಿವಾಕರ್ ಎಂದು ತಿಳಿಸಿದ್ದಾರೆ.

ಚಂದನ್ ಹಾಗೂ ಜೆಕೆಗೆ ಹೆಚ್ಚು ಮತ
ಮನೆಯಲ್ಲಿರುವ 5 ಸ್ಪರ್ಧಿಗಳ ಪೈಕಿ, ಮೂರು ಜನರು ಚಂದನ್ ಶೆಟ್ಟಿ ಗೆಲ್ಲಬಹುದು ಎಂದು ಹೇಳಿದ್ರೆ, ಉಳಿದ ಇಬ್ಬರು ಜೆಕೆ ವಿನ್ನರ್ ಆಗ್ತಾರೆ ಎಂದು ತಿಳಿಸಿದ್ರು. ಸೋ, ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ಪ್ರಕಾರ ಚಂದನ್ ಶೆಟ್ಟಿ ಬಿಗ್ ಬಾಸ್ 5 ವಿನ್ನರ್ ಆಗ್ತಾರೆ. ಸಹ ಸ್ಪರ್ಧಿಗಳೇ ಈ ನಿರ್ಧಾರಕ್ಕೆ ಬಂದಿರುವುದು ವಿಶೇಷ. ಭಾನುವಾರ ಫಲಿತಾಂಶ ಹೊರಬೀಳಲಿದ್ದು, ಇದೇ ಫಲಿತಾಂಶ ಬಂದರೂ, ಅಚ್ಚರಿಯಿಲ್ಲ.


Click it and Unblock the Notifications











