ರಿಯಾಝ್-ದಿವಾಕರ್-ಚಂದನ್ ನಡುವಿನ ಮನಸ್ತಾಪಕ್ಕೆ ಪೂರ್ಣ ವಿರಾಮ ಇಟ್ಟ ಸುದೀಪ್.!

By Harshitha

Recommended Video

ರಿಯಾಝ್ ,ದಿವಾಕರ್ ,ಚಂದನ್ ನಡುವಿನ ಮನಸ್ತಾಪಕ್ಕೆ ಪೂರ್ಣ ವಿರಾಮ ಇಟ್ಟ ಸುದೀಪ್.! | Filmibeat Kannada

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೊದಲೆರಡು ವಾರ ರಿಯಾಝ್, ದಿವಾಕರ್ ಹಾಗೂ ಚಂದನ್ ಶೆಟ್ಟಿ ಕ್ಲೋಸ್ ಫ್ರೆಂಡ್ಸ್ ಆಗಿದ್ದರು. ಸ್ವಂತ ಅಣ್ಣ-ತಮ್ಮಂದಿರಂತೆ ಇದ್ದರು. ಇಡೀ ಮನೆ ದಿವಾಕರ್ ವಿರುದ್ಧ ತಿರುಗಿ ಬಿದ್ದಿದ್ದಾಗ, ದಿವಾಕರ್ ಪರ ದನಿ ಎತ್ತಿದವರು ರಿಯಾಝ್. ಆದ್ರೆ, ಅದೇ ರಿಯಾಝ್ ಹಾಗೂ ದಿವಾಕರ್ ಮಧ್ಯೆ ಭಿನ್ನಾಭಿಪ್ರಾಯ ಶುರು ಆಯ್ತು.

ರಿಯಾಝ್ ರಿಂದ ದೂರ ಸರಿದ ದಿವಾಕರ್, ಚಂದನ್ ಶೆಟ್ಟಿಗೆ ಅತ್ಯಾಪ್ತರಾದರು. ಇತ್ತ ಚಂದನ್ ಶೆಟ್ಟಿಗೂ ರಿಯಾಝ್ ಮೇಲೆ ಬೇಸರ ಶುರು ಆಯ್ತು. ಆದ್ರೆ, ಚಂದನ್ ಶೆಟ್ಟಿ ಹಾಗೂ ರಿಯಾಝ್ ಮಧ್ಯೆ ವೈಮನಸ್ಯ ಶುರು ಆಗಲು ಕಾರಣ ಏನು ಎಂಬುದು ಮಾತ್ರ ಬಹಿರಂಗ ಆಗಿರಲಿಲ್ಲ.

ಈಗ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಸಮಾಪ್ತಿ ಆಗಿರುವುದರಿಂದ, ಮನೆಯ ಸದಸ್ಯರ ನಡುವಿನ ಭಿನ್ನಾಭಿಪ್ರಾಯ ಕೂಡ ಶಮನ ಆಗಬೇಕು ಎಂಬ ಕಾರಣದಿಂದ ಕಿಚ್ಚ ಸುದೀಪ್ ಗ್ರ್ಯಾಂಡ್ ಫಿನಾಲೆ ದಿನ ಮೂವರನ್ನ ಒಟ್ಟುಗೂಡಿಸಲು ಮುಂದಾದರು. ಮುಂದೆ ಓದಿರಿ...

ಮನಸ್ತಾಪ ಮುಂದುವರೆಯಬಾರದು.!

ಮನಸ್ತಾಪ ಮುಂದುವರೆಯಬಾರದು.!

''106 ದಿನಗಳಲ್ಲಿ ಬಗೆಹರಿಯದ ಒಂದು ಸಮಸ್ಯೆ ಇದೆ. ದಿವಾಕರ್, ರಿಯಾಝ್ ಮತ್ತು ಚಂದನ್... ಈ ಮೂರು ಜನರ ಟ್ರೈಯಾಂಗಲ್. ಮೊದಲು ದಿವಾಕರ್ ಅವರ ಪರ ರಿಯಾಝ್ ನಿಂತರು. ಅದಾದ್ಮೇಲೆ ದಿವಾಕರ್ ಹಾಗೂ ರಿಯಾಝ್ ಮಧ್ಯೆ ಭಿನ್ನಾಭಿಪ್ರಾಯ ಶುರು ಆಯ್ತು. ಆದ್ರೆ, ಚಂದನ್ ಹಾಗೂ ರಿಯಾಝ್ ನಡುವೆ ಏನಾಯ್ತು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇವತ್ತು ಫಿನಾಲೆ ಆದ್ದರಿಂದ ಎಲ್ಲ ವಿಚಾರಗಳನ್ನು ಮುಕ್ತಾಯ ಮಾಡಿ ಎಂಬುದು ನನ್ನ ಸಲಹೆ'' ಎಂದು ಗ್ರ್ಯಾಂಡ್ ಫಿನಾಲೆ ದಿನ ಸುದೀಪ್ ಹೇಳಿದರು.

ರಿಯಾಝ್ ನೀಡಿದ್ದ ಹೇಳಿಕೆ ಕಾರಣ

ರಿಯಾಝ್ ನೀಡಿದ್ದ ಹೇಳಿಕೆ ಕಾರಣ

''ರಿಯಾಝ್ ಮೇಲೆ ಯಾಕೆ ಬೇಜಾರು ಆಗ್ತಿತ್ತು ಅಂದ್ರೆ, ಒಂದೆರಡು ಶನಿವಾರ ನನ್ನ ಮೇಲೆ ಎರಡು ಹೇಳಿಕೆ ನೀಡಿದ್ದರು. ಅದು ಏನಂದ್ರೆ, ನಾನು ಸ್ಟ್ರಾಟೆಜಿ ಮಾಡಿ ದಿವಾಕರ್ ಗೆ ಗ್ರೀಟಿಂಗ್ ಕಾರ್ಡ್ ಕೊಟ್ಟೆ ಅಂತ ರಿಯಾಝ್ ಹೇಳಿದ್ದರು. ಆದ್ರೆ ಅದು ಸ್ಟ್ರಾಟೆಜಿ ಆಗಿರಲಿಲ್ಲ. ನಾನು ಮನಸಾರೆ ದಿವಾಕರ್ ಗೆ ಕಾರ್ಡ್ ಕೊಟ್ಟಿದ್ದು. ಇನ್ನೊಂದೆರಡು ಬಾರಿ ನಾನು ಫೇಕ್ ಅಂತ ಹೇಳಿದ್ದರು'' ಎಂದು ರಿಯಾಝ್ ಮೇಲೆ ತಮಗೆ ಬೇಸರವಾದ ಘಟನೆಗಳನ್ನ ಚಂದನ್ ಶೆಟ್ಟಿ ಹೇಳಿದರು.

ಹೆದರಿಕೊಳ್ತಿದ್ರಂತೆ ಚಂದನ್

ಹೆದರಿಕೊಳ್ತಿದ್ರಂತೆ ಚಂದನ್

''ರಿಯಾಝ್ ಜೊತೆಗೆ ಮಾತನಾಡುವಾಗ ನಾನು ಹೆದರಿಕೊಳ್ಳುತ್ತಿದ್ದೆ. ಯಾಕಂದ್ರೆ, ಮತ್ತೆ ನನ್ನನ್ನ ಫೇಕ್ ಅಂತ ತಿಳಿದುಕೊಳ್ತಾರೆ ಅಂತ ಅವರನ್ನ ನಾನು ಅವಾಯ್ಡ್ ಮಾಡುತ್ತಿದ್ದೆ'' - ಚಂದನ್ ಶೆಟ್ಟಿ

ರಿಯಾಝ್ ಕಂಡ್ರೆ ಇಷ್ಟ

ರಿಯಾಝ್ ಕಂಡ್ರೆ ಇಷ್ಟ

''ಗೇಮ್ ಶೋ ಹೊರತು ಪಡಿಸಿ ರಿಯಾಝ್ ಅಂದ್ರೆ ಖಂಡಿತ ನನಗೆ ಇಷ್ಟ. ಅವರು ತುಂಬಾ ಟ್ಯಾಲೆಂಟೆಡ್. ಅವರೊಂದಿಗೆ ಕೆಲಸ ಮಾಡಲು ನಾನು ಇಚ್ಛಿಸುತ್ತೇನೆ'' ಎಂದು ತಮ್ಮ ನಡುವಿನ ವೈಮನಸ್ಯಕ್ಕೆ ಚಂದನ್ ಶೆಟ್ಟಿ ಫುಲ್ ಸ್ಟಾಪ್ ಇಟ್ಟರು

ಧನ್ಯವಾದ ತಿಳಿಸಿದ ರಿಯಾಝ್

ಧನ್ಯವಾದ ತಿಳಿಸಿದ ರಿಯಾಝ್

''ಈ ಸ್ಪಷ್ಟನೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. ಚಂದನ್ ಶೆಟ್ಟಿ ಮತ್ತು ದಿವಾಕರ್ ಅಂದ್ರೆ ನನಗೆ ಇವತ್ತಿಗೂ ತುಂಬಾ ಇಷ್ಟ. ದೇವ್ರಾಣೆಗೂ ಹೇಳ್ತೀನಿ, ಐ ಲವ್ ಯು ಬೋತ್. ನನ್ನ ಕಡೆಯಿಂದ ತಪ್ಪಾಗಿದ್ದರೆ, ದಯವಿಟ್ಟು ಕ್ಷಮಿಸಿ'' ಎಂದರು ರಿಯಾಝ್

ದಿವಾಕರ್ ಹೇಳಿದ್ದೇನು.?

ದಿವಾಕರ್ ಹೇಳಿದ್ದೇನು.?

''ನೀವು ನನಗೆ ಅಣ್ಣ ಇದ್ಹಂಗೆ. ನೀವು ಯಾವಾಗಲೂ ನಗು ನಗುತ್ತಾ ಇರಿ'' ಎಂದು ದಿವಾಕರ್ ಕೂಡ ರಿಯಾಝ್ ಜೊತೆಗೆ ಸ್ನೇಹಕ್ಕೆ ಜೈ ಎಂದರು.

ಒಂದಾದ ಸ್ನೇಹಿತರು

ಒಂದಾದ ಸ್ನೇಹಿತರು

ಅಲ್ಲಿಗೆ, ಕಿಚ್ಚ ಸುದೀಪ್ ಕೃಪಾಕಟಾಕ್ಷದಿಂದ ಮೂವರು ಸ್ನೇಹಿತರು - ಚಂದನ್ ಶೆಟ್ಟಿ, ದಿವಾಕರ್ ಹಾಗೂ ರಿಯಾಝ್ ಒಂದಾಗಿದ್ದಾರೆ.

More from Filmibeat

English summary
By forgetting the past, Chandan Shetty, Riyaz Basha and Diwakar patch up during Bigg Boss Kannada 5 Grand Finale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X