ತಂದೆಯ ಕನಸು ನನಸು, ನಾನು ಹೊಸ ಜೀವನ ಶುರು ಮಾಡಿದ್ದೇನೆ ಎಂದ ಚಂದನ್ ಶೆಟ್ಟಿ !

By ಅನಿತಾ ಬನಾರಿ

ಕನ್ನಡದ ರ್ಯಾಪರ್ ಮತ್ತು ಗಾಯಕ ಚಂದನ್ ಶೆಟ್ಟಿ ಈಗ ಒಂದು ಹೊಸ ಅಧ್ಯಾಯ ಆರಂಭಿಸಿದ್ದಾರೆ. ನಾನಾ ವಿಚಾರಗಳಲ್ಲಿ ಸುದ್ದಿಯಾಗುತ್ತಿದ್ದ ಅವರು, ಇದೀಗ ತಮ್ಮ ತಂದೆಯ ಬಹುದಿನಗಳ ಕನಸು ನನಸಾಗಿಸುತ್ತಿದ್ದಾರೆ. ಮೇ 9ರಂದು ಅವರ ಹೊಸ ಸಿನಿಮಾಗೆ ಮುಹೂರ್ತ ನಿಗದಿಯಾಗಿದೆ. ಇದನ್ನು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ ಚಂದನ್, "ಅಪ್ಪನ ಕನಸು ಈಡೇರುತ್ತಿದೆ. ನನಗೂ ಇದು ಹೊಸ ಜೀವನದ ಆರಂಭ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಚಂದನ್ ಶೆಟ್ಟಿ ಇತ್ತೀಚಿಗೆ 'ಕಾಟನ್ ಕ್ಯಾಂಡಿ' ಮ್ಯೂಸಿಕ್ ವಿಡಿಯೋದಲ್ಲಿ ನಟಿಸಿದ್ದು ಆ ವಿಡಿಯೋ ರಿಲೀಸ್ ಆದ ಬಳಿಕ ನಿರಂತರ ಚರ್ಚೆಯಲ್ಲಿದ್ದರು. ಇದರ ಜೊತೆಗೆ ತಮ್ಮ ಮಾಜಿ ಪತ್ನಿ ನಿವೇದಿತಾ ಗೌಡ ಜೊತೆಗೂ ಚಂದನ್ ಶೆಟ್ಟಿ ಅಭಿನಯಿಸಿದ್ದರು.

chandan-shetty-says-his-fathers-dream-is-coming-true-this-is-the-beginning

"ಮುದ್ದು ರಾಕ್ಷಸಿ" ಸಿನಿಮಾದ ಚಿತ್ರೀಕರಣದ ವೇಳೆ ಬೇರೆಯಾಗಿದ್ದರೂ, ಇದೇ ಜೋಡಿ ಮಡಿಕೇರಿ ಬಳಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿನಿಮಾದ ಕೊನೆಯ ದೃಶ್ಯಗಳನ್ನು ಶೂಟ್ ಮಾಡಿದ್ದರು. ಅಲ್ಲಿಯೂ ಕೆಲ ದಿನ ಟೀಕೆ, ಟ್ರೋಲ್‌ಗಳ ಬಿರುಗಾಳಿ ಬಂದರೂ, ಅಭಿಮಾನಿಗಳು ಮಾತ್ರ ಚಂದನ್ ಪರವಾಗಿಯೇ ನಿಂತಿದ್ದಾರೆ.

ಇನ್ನು ಚಂದನ್ ಶೆಟ್ಟಿ ನಿರ್ದೇಶನದ "ಸೂತ್ರಧಾರಿ" ಸಿನಿಮಾ ಇದೀಗ ರಿಲೀಸ್ ಗೆ ಸಿದ್ಧವಾಗಿದೆ. ತಮ್ಮ ಹೊಸ ಪ್ರಯಾಣದ ಬಗ್ಗೆ ಮಾತನಾಡಿದ ಚಂದನ್ ಶೆಟ್ಟಿ, "ನನ್ನ ತಂದೆ ಚಿಕ್ಕಂದಿನಿಂದ ನನ್ನನ್ನು ಹೀರೋ ಆಗಿ ನೋಡಬೇಕು ಎಂದು ಬಯಸಿದ್ದರು. ತಂದೆ ಹಾಗೇ ಹೇಳಿದಾಗಲೆಲ್ಲಾ ನಾನು ಅದಕ್ಕೆ ನಗ್ತಾ ಇದ್ದೆ. ಆದರೆ ಇದೀಗ ನನ್ನ ತಂದೆ ಅಂದುಕೊಂಡದ್ದೇ ನಿಜವಾಗುತ್ತಾ ಇದೆ. ಮೇ 9ರಂದು ಅವರ ಕನಸು ನನಸಾಗುತ್ತಿದೆ" ಎಂದು ಹೇಳಿಕೊಂಡಿದ್ದಾರೆ.

'ಸೂತ್ರಧಾರಿ' ಎಂಬ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವ ಚಂದನ್, ಈ ಚಿತ್ರದಲ್ಲಿ ಅಂಡರ್‌ಕವರ್‌ ಪೊಲೀಸ್‌ ಪಾತ್ರದಲ್ಲಿದ್ದಾರೆ. ಇದರ ಬಗ್ಗೆಯೂ ಮಾತನಾಡಿರುವ ಚಂದನ್ ಶೆಟ್ಟಿ "ಈ ಪಾತ್ರ ನನಗೆ ವಿಶೇಷ. ನನ್ನ ಹೊಸ ಬದುಕಿಗೆ ಇದು ನಾಂದಿ. ಈ ಅವಕಾಶ ಕೊಟ್ಟಿರುವ ನಿರ್ಮಾಪಕ ನವರಸನ್ ಅವರಿಗೆ ಧನ್ಯವಾದಗಳು" ಎಂದು ಹೇಳಿಕೊಂಡಿದ್ದಾರೆ ಚಂದನ್ ಶೆಟ್ಟಿ.

ಸಂಗೀತ ನಿರ್ದೇಶಕ, ರ್‍ಯಾಪರ್, ನಟ, ಗಾಯಕ, ಗೀತರಚನೆಕಾರ, ಗಿಟಾರ್ ವಾದಕ, ಡ್ರಮ್ಮರ್ ಹೀಗೆ ಸಕಲಾಕಲಾವಲ್ಲಭ ಆಗಿರುವ ಚಂದನ್ ಶೆಟ್ಟಿ ಇದೀಗ ಮೊದಲ ಬಾರಿಗೆ ನಾಯಕನಾಗಿ ತೆರೆಯ ಮೇಲೆ ಮೋಡಿ ಮಾಡುತ್ತಿರುವುದು ಸಿನಿ ಪ್ರಿಯರಿಗೆ ತಿಳಿದೇ ಇದೆ.

ಬಹುಮುಖ ಪ್ರತಿಭೆಯ ಚಂದನ್ ಶೆಟ್ಟಿ

'ಅಲೆಮಾರಿ' ಸಿನಿಮಾದಲ್ಲಿ ಗೀತರಚನೆಕಾರ ಆಗಿ ಕಾಣಿಸಿಕೊಂಡರು. ಮಾತ್ರವಲ್ಲದೇ ಅದೇ ಸಿನಿಮಾದಲ್ಲಿ ಸಹಾಯಕ ಸಂಗೀತ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಇವರು ಆರಂಭಿಸಿದರು. ಈ ಸಿನಿಮಾಗೆ ಅರ್ಜುನ್ ಜನ್ಯ ಪ್ರಮುಖ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದರು. ಈ ಸಿನಿಮಾ ಮೂಲಕ ಚಂದನ್ ಶೆಟ್ಟಿ ಅವರ ಸಂಗೀತ ಜೀವನ ಶುರುವಾಯಿತು.

ಅಲೆಮಾರಿ ಸಿನಿಮಾದ ಬಳಿಕ ವರದನಾಯಕ, ಪವರ್, ಚಕ್ರವ್ಯೂಹ ಮತ್ತು ಭಜರಂಗಿ ಸಿನಿಮಾಗಳಿಗೂ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದರು ಚಂದನ್ ಶೆಟ್ಟಿ.

ಮುಂದೆ ಅಪ್ಪುಗೆ, ಸೀಸರ್, ಗಾಂಚಲಿ, ಸಂಜೀವ, ಜೋಶ್ಲೆ ಧ್ವನಿಮುದ್ರಿಕೆಗಳಲ್ಲಿ ಚಂದನ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ 2 ಪೆಗ್, ಚಾಕೊಲೇಟ್ ಗರ್ಲ್, ಟಕಿಲಾ, ನನ್ನ ಪ್ರೀತಿ ಸುಳ್ಳಲ್ಲ, ಬೆಂಕಿ ಎಂಬ ಆಲ್ಬಂ ಹಾಡುಗಳ ಮೂಲಕ ಸಂಗೀತ ಪ್ರಿಯರ ಮನ ಸೆಳೆದಿದ್ದರು.

ಇದೆಲ್ಲದರ ಜೊತೆಗೆ ಕನ್ನಡ ಕಿರುತೆರೆಯ ಜ‌ನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ರ ಸ್ಪರ್ಧಿಯಾಗಿ ಕಾಣಿಸಿಕೊಂಡ ಚಂದನ್ ಶೆಟ್ಟಿ ಪ್ರಸ್ತುತ ಶೋವಿನ ವಿನ್ನರ್ ಆಗಿ ಹೊರಹೊಮ್ಮಿದರು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಾಸ್ಟರ್ ಡಾನ್ಸರ್ ರಿಯಾಲಿಟಿ ಶೋ ತೀರ್ಪುಗಾರರಾಗಿಯೂ ಚಂದನ್ ಶೆಟ್ಟಿ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡ ಕೋಗಿಲೆಯ ಎರಡು ಸೀಸನ್​​​​​​​​​​​​​ಗಳಲ್ಲಿ ತೀರ್ಪುಗಾರರಾಗಿ ಮಿಂಚಿದ್ದರು. ಮಾತ್ರವಲ್ಲದೇ 'ಕನ್ನಡ ಕೋಗಿಲೆ ಸೂಪರ್ ಸೀಸನ್' ತೀರ್ಪುಗಾರರಾಗಿ ಚಂದನ್ ಶೆಟ್ಟಿ ಮೋಡಿ ಮಾಡಿದ್ದರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X