For Quick Alerts
  ALLOW NOTIFICATIONS  
  For Daily Alerts

  ಕೋಗಿಲೆಯ ಹುಡುಕಾಟದಲ್ಲಿ ಚಂದನ್ ಶೆಟ್ಟಿ

  By Pavithra
  |
  ಯಾರ ಹುಡಕುಕಾಟದಲ್ಲಿದ್ದರೆ ಚಂದನ್ ಶೆಟ್ಟಿ | Filmibeat Kannada

  ಜೂನ್ ತಿಂಗಳು ಸೂಪರ್ ತಿಂಗಳು. ಹೌದು ಕಲರ್ಸ್ ಸೂಪರ್ ವಾಹಿನಿ ಜೂನ್ ತಿಂಗಳಲ್ಲಿ ನಿಮ್ಮ ಮನೆಗೆ ಭರ್ಜರಿ ಮನರಂಜನೆ ನೀಡುವ ಕಾರ್ಯಕ್ರಮಗಳನ್ನು ಹೊತ್ತು ತರಲಿದೆ. ಇದೊಂದು ವಿಭಿನ್ನ ಪ್ರಯೋಗವಾಗಿದ್ದು ಎಂಟು ಹೊಚ್ಚ ಹೊಸ ಕಾರ್ಯಕ್ರಮಗಳು ಕಲರ್ಸ್ ಸೂಪರ್ ವಾಹಿನಿ ಪ್ರೇಕ್ಷಕರಿಗೆ ಸಿಗಲಿದೆ.

  ಎಂಟು ಕಾರ್ಯಕ್ರಮಗಳು ಜೂನ್ ತಿಂಗಳಿನಲ್ಲಿ ಪ್ರಸಾರವಾಗಲಿದೆ. ಆರು ಭಿನ್ನ ಕಥಾ ಹಂದರವುಳ್ಳ ಧಾರಾವಾಹಿಗಳು ಮತ್ತು ಎರಡು ರಿಯಾಲಿಟಿ ಶೋಗಳು ಪ್ರೇಕ್ಷಕರನ್ನು ರಂಜಿಸಲು ಆಗಮಿಸುತ್ತಿದೆ.

  ಇದೇ ಸೋಮವಾರದಿಂದ ನಿಮ್ಮ ಮನೆಗೆ ಕಾಲಿಡುತ್ತಾಳೆ 'ಕಮಲಿ'ಇದೇ ಸೋಮವಾರದಿಂದ ನಿಮ್ಮ ಮನೆಗೆ ಕಾಲಿಡುತ್ತಾಳೆ 'ಕಮಲಿ'

  ಬಿಗ್ ಬಾಸ್ ಖ್ಯಾತಿಯ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ನೇತೃತ್ವದಲ್ಲಿ ಕನ್ನಡ ಕೋಗಿಲೆ ಎನ್ನುವ ಸಿಂಗಿಂಗ್ ರಿಯಾಲಿಟಿ ಶೋ ಇವುಗಳಲ್ಲೊಂದು. ಸಾಕಷ್ಟು ಜನರು ಅವಕಾಶಗಳಿಗಾಗಿ ಕಾದಿರುವ ಗಾಯಕರಿಗೆ ಕಲರ್ಸ್ ಸೂಪರ್ ಉತ್ತಮ ವೇದಿಕೆ ರೂಪಿಸಿಕೊಟ್ಟಿದೆ. ಹಾಗಾದರೆ ಹೇಗೆ ನಡೆಯಲಿದೆ ಕೋಗಿಲೆಗಳ ಹುಡುಕಾಟ. ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

  ಕೋಗಿಲೆ ಹುಟುಕಾಟ

  ಕೋಗಿಲೆ ಹುಟುಕಾಟ

  ರ್ಯಾಪ್ ಸಾಂಗ್ ಗಳ ಮೂಲಕ ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಚಂದನ್ ಶೆಟ್ಟಿ ತೆರೆಮರೆಯಲ್ಲಿರುವ ಪ್ರತಿಭಾನ್ವಿತ ಹಾಡುಗಾರರಿಗಾಗಿ ಕನ್ನಡ ಕೋಗಿಲೆ ಮೂಲಕ ಹೊಸ ಅವಕಾಶ ಒದಗಿಸಿಕೊಡುತ್ತಿದ್ದಾರೆ.

  ದಿಗ್ಗಜರು ಹಾಗೂ ಚಂದನ್ ಶೆಟ್ಟಿ

  ದಿಗ್ಗಜರು ಹಾಗೂ ಚಂದನ್ ಶೆಟ್ಟಿ

  ಚಂದನ್ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಇನ್ನು ಹಲವು ದಿಗ್ಗಜರು ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಕರ್ನಾಟಕದ ಪ್ರಮುಖ ಏಳು ಪ್ರಮುಖ ನಗರಗಳಲ್ಲಿ ಪ್ರತಿಭಾನ್ವಿತ ಹಾಡುಗಾರರನ್ನು ಹುಡುಕಲು ಆಡಿಷನ್ ನಡೆಯುತ್ತಿದೆ.

  ನಲವತ್ತು ಸ್ಪರ್ಧೆಗಳಿಗೆ ಅವಕಾಶ

  ನಲವತ್ತು ಸ್ಪರ್ಧೆಗಳಿಗೆ ಅವಕಾಶ

  ಆಡಿಷನ್ ನಡೆಯುವ ಸಂದರ್ಭದಲ್ಲಿ ಸ್ವತಃ ಚಂದನ್ ಶೆಟ್ಟಿ ಅವರು ಉಪಸ್ಥಿತರಿದ್ದು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಗಮಿಸುವವರಿಗೆ ಪ್ರೋತ್ಸಾಹ ನೀಡಲಿದ್ದಾರೆ. ಜಡ್ಜ್ ಸಮ್ಮುಖದಲ್ಲಿ ಆಡಿಷನ್ನಲ್ಲಿ ಆಯ್ಕೆಯಾದ ನಲವತ್ತು ಸ್ಪರ್ಧೆಗಳನ್ನು ಪ್ರತ್ಯೇಕ ಗುಂಪುಗಳನ್ನಾಗಿ ವಿಂಗಡಿಸಿ ನಂತರ ಅವರಿಗೆ ಮೆಂಟರ್ ಮತ್ತು ನುರಿತ ಹಾಡುಗಾರರಿಂದ ತರಬೇತಿ ನೀಡಲಾಗುತ್ತದೆ.

  ಬೇಕಾದರೂ ಹಾಡಬಹುದು

  ಬೇಕಾದರೂ ಹಾಡಬಹುದು

  ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ವಯೋಮಿತಿ ಆರರಿಂದ ಅರವತ್ತು ವರ್ಷಗಳು ಬಾತ್ ರೂಮ್ ಸಿಂಗರ್ ಆಗಿದ್ರೂ ಓಕೆ, ಪ್ರೊಫೆಷನಲ್ ಸಿಂಗರ್ ಆಗಿದ್ರೂ ಓಕೆ, ಆಸಕ್ತರು ಆಡಿಶನ್ ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸುಳ್ಳವರು ಈ ಸದಾವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

  ಕೊನೆಯ ಹಂತದ ಆಡಿಷನ್

  ಕೊನೆಯ ಹಂತದ ಆಡಿಷನ್

  ಈಗಾಗಲೇ ಕರ್ನಾಟಕದ ಆರು ಪ್ರಮುಖ ನಗರಗಳಲ್ಲಿ ಆಡಿಷನ್ ಮುಗಿಸಿದ ಕೊನೆಯ ಹಂತದ ಆಡಿಷನ್ ಬೆಂಗಳೂರಿನಲ್ಲಿ ಮೇ 27 ಭಾನುವಾರದಂದು ನಡೆಯುತ್ತಿದೆ. ಕಲರ್ಸ್ ಸೂಪರ್ ಮನರಂಜನಾ ವಾಹಿನಿ ಆಗಿದ್ದು ವೀಕ್ಷಕರಿಗೆ ಸದಾಭಿರುಚಿಯ ಗುಣಮಟ್ಟದ ಹಾಗೂ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಕನ್ನಡ ಸೊಗಡಿನ ಕಾರ್ಯಕ್ರಮಗಳನ್ನು ನೀಡುತ್ತಿದೆ.

  English summary
  In an attempt that’s never been done before, COLORS Super is changing the face of television programming by launching 8 new shows in phases, all in the month of June.Chandan Shetty’s successful alliance with the channel has turned a new page with “Kannada Kogile”.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X