'ಬಿಗ್ ಬಾಸ್' ಮುಗಿದ ಬಳಿಕ ಮತ್ತೊಂದು ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ.!

By Harshitha

Recommended Video

'ಬಿಗ್ ಬಾಸ್' ಮುಗಿದ ಬಳಿಕ ಮತ್ತೊಂದು ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಸಮಾಪ್ತಿ ಆಯ್ತು. 106 ದಿನಗಳ ಕಾಲ 'ಬಿಗ್ ಬಾಸ್' ಮನೆಯೊಳಗೆ ಇದ್ದು ಎಲ್ಲರಿಗೂ ಮನರಂಜನೆ ನೀಡಿದ್ದ ಚಂದನ್ ಶೆಟ್ಟಿ ಗೆಲುವಿನ ನಗೆ ಬೀರಿದ್ದೂ ಆಯ್ತು.

ಸದ್ಯ ಮಾಧ್ಯಮ ಹಾಗೂ ಪತ್ರಿಕೆಗಳಿಗೆ ಸಂದರ್ಶನ ನೀಡುವುದರಲ್ಲಿಯೇ ಬಿಜಿಯಾಗಿರುವ ಚಂದನ್ ಶೆಟ್ಟಿ ಕಲರ್ಸ್ ಸೂಪರ್ ನಲ್ಲಿ ಶುರು ಆಗಲಿರುವ 'ಮಜಾ ಟಾಕೀಸ್' ಸೂಪರ್ ಸೀಸನ್ ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ.

ಈ ಎಲ್ಲದರ ಮಧ್ಯೆ ಮತ್ತೊಂದು ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಯಾವುದು ಆ ರಿಯಾಲಿಟಿ ಶೋ ಅಂತೀರಾ.? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿರಿ...

ಮತ್ತೆ ಕಿರುತೆರೆಯಲ್ಲಿ ಚಂದನ್ ಶೆಟ್ಟಿ

ಮತ್ತೆ ಕಿರುತೆರೆಯಲ್ಲಿ ಚಂದನ್ ಶೆಟ್ಟಿ

ಇಷ್ಟು ದಿನ 'ಬಿಗ್ ಬಾಸ್' ಕಾರ್ಯಕ್ರಮದ ಮೂಲಕ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಚಂದನ್ ಶೆಟ್ಟಿ, ಇದೀಗ ಮತ್ತೆ ಕಿರುತೆರೆ ಕಡೆ ಮುಖ ಮಾಡಿದ್ದಾರೆ ಎನ್ನಲಾಗಿದೆ.

ಹೊಸ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ

ಹೊಸ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ

ಕಲರ್ಸ್ ವಾಹಿನಿಯಲ್ಲಿ ಶುರು ಆಗಲಿರುವ 'ಮಾಸ್ಟರ್ ಡ್ಯಾನ್ಸರ್' ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿರಲಿದ್ದಾರಂತೆ ಚಂದನ್ ಶೆಟ್ಟಿ.

ಮಯೂರಿ, ಶ್ರುತಿ ಜೊತೆ ಚಂದನ್ ಶೆಟ್ಟಿ

ಮಯೂರಿ, ಶ್ರುತಿ ಜೊತೆ ಚಂದನ್ ಶೆಟ್ಟಿ

ಈಗಾಗಲೇ 'ಮಾಸ್ಟರ್ ಡ್ಯಾನ್ಸರ್' ಕಾರ್ಯಕ್ರಮಕ್ಕೆ 'ನಾಟ್ಯ' ಮಯೂರಿ ಹಾಗೂ ನಟಿ ಶ್ರುತಿ ಹರಿಹರನ್ ತೀರ್ಪುಗಾರರ ಸ್ಥಾನ ತುಂಬಿದ್ದಾರೆ. ಇವರಿಬ್ಬರ ಜೊತೆಗೆ ಚಂದನ್ ಶೆಟ್ಟಿ ಕೂಡ ಸಾಥ್ ಕೊಡ್ತಾರೆ ಎಂದು ಕಲರ್ಸ್ ವಾಹಿನಿಯ ಮೂಲಗಳು ತಿಳಿಸಿವೆ

ಒಂದೇ ಶೋ... ಇಬ್ಬರೂ 'ಬಿಗ್ ಬಾಸ್' ವಿಜೇತರು

ಒಂದೇ ಶೋ... ಇಬ್ಬರೂ 'ಬಿಗ್ ಬಾಸ್' ವಿಜೇತರು

'ಮಾಸ್ಟರ್ ಡ್ಯಾನ್ಸರ್' ಕಾರ್ಯಕ್ರಮಕ್ಕೆ 'ಬಿಗ್ ಬಾಸ್ ಕನ್ನಡ-2' ವಿನ್ನರ್ ಅಕುಲ್ ಬಾಲಾಜಿ ನಿರೂಪಣೆ ಇರಲಿದೆ. ಇತ್ತ 'ಬಿಗ್ ಬಾಸ್ ಕನ್ನಡ-5' ವಿನ್ನರ್ ಚಂದನ್ ಶೆಟ್ಟಿ ಜಡ್ಜ್ ಸೀಟ್ ಅಲಂಕರಿಸಲಿರುವುದು ಮತ್ತೊಂದು ವಿಶೇಷ.

More from Filmibeat

English summary
According to sources, Kannada Rapper Chandan Shetty to judge 'Master Dancer', a Dance reality show in Colors Channel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X