Chandana Ananthakrishna: ಗ್ಯಾಪ್ ಕೊಟ್ಟು ಕಿರುತೆರೆಗೆ ಮರಳಿದ ಚಂದನಾ.. ಯಾವ ಧಾರಾವಾಹಿ ಗೊತ್ತಾ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಭರ್ಜರಿ ಬ್ಯಾಚುಲರ್ಸ್' ಶೋವಿನಲ್ಲಿ ರುದ್ರ ಮಾಸ್ಟರ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದ ಚಂದನಾ ಅನಂತಕೃಷ್ಣ ಶೋವಿನಿಂದ ಅರ್ಧಕ್ಕೆ ಹೊರಬಂದಿದ್ದರು. ಆದರೆ, ಅವರು ಯಾಕೆ ಶೋವಿನಿಂದ ಅರ್ಧಕ್ಕೆ ಹೊರಬಂದರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹೌದು, ಚಂದನಾ ಅನಂತಕೃಷ್ಣ ಅವರು ಇದೀಗ ನಟನೆಯ ಮೂಲಕ ನಿಮ್ಮ ಮನ ಸೆಳೆಯಲಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಲಕ್ಷ್ಮಿ ನಿವಾಸ'ದಲ್ಲಿ ಚಂದನಾ ಅನಂತಕೃಷ್ಣ ನಟಿಸಲಿದ್ದಾರೆ. ಜೀ ಕನ್ನಡ ವಾಹಿನಿಯು ಈಗಾಗಲೇ ಧಾರಾವಾಹಿಯ ಪ್ರೋಮೋವೊಂದನ್ನು ರಿಲೀಸ್ ಮಾಡಿದ್ದು ಅದರಲ್ಲಿ ಚಂದನಾ ಅವರನ್ನು ಕಾಣಬಹುದು.

ಇದರ ಜೊತೆಗೆ ಸ್ವತಃ ಚಂದನಾ ಅನಂತಕೃಷ್ಣ ಅವರು ಕೂಡಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕೂಡಾ ಧಾರಾವಾಹಿಯ ಪ್ರೋಮೋವೊನ್ನು ಹಂಚಿಕೊಂಡಿದ್ದು "ಜನರು ಮುಂದೆ ಏನು ಮಾಡ್ತೀರಾ ಅಂಥ ಕೇಳುತ್ತಿದ್ದರು. ಅದಕ್ಕೆ ಇದುವೇ ಉತ್ತರ. ನಾನು ಮರಳಿ ಬರುತ್ತಿದ್ದೇನೆ. ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹವನ್ನು ಬಯಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಮಲ್ಲಿ' ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಚಂದನಾ ಅನಂತಕೃಷ್ಣ ತದ ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜರಾಣಿ' ಧಾರಾವಾಹಿಯಲ್ಲಿ ನಾಯಕಿ ಯಡವಟ್ ರಾಣಿ ಅಲಿಯಾಸ್ ಚುಕ್ಕಿಯಾಗಿ ಕಾಣಿಸಿಕೊಂಡರು. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಚಂದನಾ ಮುಂದೆ ಕಾಣಿಸಿಕೊಂಡಿದ್ದು ರಿಯಾಲಿಟಿ ಶೋವಿನಲ್ಲಿ.
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 7'ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಚಂದನಾ ಬರೋಬ್ಬರಿ 84 ದಿನಗಳ ಕಾಲ ದೊಡ್ಮನೆಯೊಳಗಿದ್ದರು. ಫಿನಾಲೆಗೆ ಹದಿನೈದು ದಿನಗಳಷ್ಟೇ ಬಾಕಿ ಇರುವಾಗ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಈ ನಟಿ ತದ ನಂತರ ಭಡ್ತಿ ಪಡೆದಿದ್ದು ನಿರೂಪಕಿಯಾಗಿ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹಾಡು ಕರ್ನಾಟಕ' ರಿಯಾಲಿಟಿ ಶೋವಿನ ನಿರೂಪಕಿಯಾಗಿ ಚಂದನಾ ಅನಂತಕೃಷ್ಣ ಮೋಡಿ ಮಾಡಿದರು. ಮುಂದೆ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹೂಮಳೆ' ಧಾರಾವಾಹಿಯಲ್ಲಿ ನಾಯಕಿ, ಕಾರ್ಪೋರೇಟರ್ ಕಾವೇರಿ ಮಗಳು ಲಹರಿಯ ಪಾತ್ರಕ್ಕೆ ಚಂದನಾ ಜೀವ ತುಂಬಿದರು.
'ಹೂಮಳೆ' ಧಾರಾವಾಹಿಯ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಡ್ಯಾನ್ಸಿಂಗ್ ಚಾಂಪಿಯನ್ ನ ಸ್ಪರ್ಧಿಯಾಗಿಯೂ ಈಕೆ ಕಾಣಿಸಿಕೊಂಡಿದ್ದರು. ನಟನೆಯ ಜೊತೆಗೆ ನೃತ್ಯದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಚಂದನಾ ಅನಂತಕೃಷ್ಣ ಇತ್ತೀಚೆಗಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ಭರ್ಜರಿ ಬ್ಯಾಚುಲರ್ಸ್'ನಲ್ಲಿ ರುದ್ರ ಮಾಸ್ಟರ್‌ಗೆ ಜೋಡಿಯಾಗಿ ಚಂದನಾ ಕಮಾಲ್ ಮಾಡಿದ್ದರು.


Click it and Unblock the Notifications











