ನಟಿ ಚಂದ್ರಕಲಾ ಮೋಹನ್ ಅವರ ಹೊಸ ಧಾರಾವಾಹಿ: ಮತ್ತೆ ಪೌರಾಣಿಕ ಪಾತ್ರದಲ್ಲಿ ಅಜ್ಜಮ್ಮ!

By ಪ್ರಿಯಾ ದೊರೆ

ಕಿರುತೆರೆಯಲ್ಲಿ ಬಾಯಿ ಜೋರು ಮಾಡುತ್ತಲೇ ಅಭಿಮಾನಿಗಳನ್ನು ಪಡೆದಿರುವ ನಟಿ ಚಂದ್ರಕಲಾ ಮೋಹನ್ ಈಗ ಮತ್ತೊಂದು ಪೌರಾಣಿಕ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು ಯಾವುದು ಎಂದು ತಿಳಿಯೋಣ ಬನ್ನಿ.

ಚಂದ್ರಕಲಾ ಮೋಹನ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟಿ. 'ಪುಟ್ಟಗೌರಿ' ಮದುವೆ ಸೀರಿಯಲ್‌ನ ಅಜ್ಜಮ್ಮ ಪಾತ್ರದ ಮೂಲಕ ಪ್ರಸಿದ್ಧಿ ಪಡೆದವರು.

ಚಂದ್ರಕಲಾ ಮೋಹನ್ 'ಅಭಿಸಾರಿಕೆ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇದೀಗ 'ಸೂಪರ್‌ ಕ್ವೀನ್ಸ್‌' ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ.

ರಾಜ್ಯ ಪ್ರಶಸ್ತಿ ಪಡೆದಿರುವ ನಟಿ

ರಾಜ್ಯ ಪ್ರಶಸ್ತಿ ಪಡೆದಿರುವ ನಟಿ

ಬೆಳ್ಳಿತೆರೆಯಲ್ಲಿ 'ಋಣಾನುಬಂಧ' ಚಿತ್ರದ ಸೌಮ್ಯ ಸ್ವಭಾವದ ಪಾತ್ರಕ್ಕೆ ಶ್ರೇಷ್ಠ ಪೋಷಕ ನಟಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ನಟಿ ಚಂದ್ರಕಲಾ ಮೋಹನ್, ಕಿರುತೆರೆಯಲ್ಲಿ ಕಿರುಚಾಡುವ ಗಯ್ಯಾಳಿ ಪಾತ್ರಗಳಲ್ಲೇ ಹೆಚ್ಚು ಪರಿಚಿತ. ಮಂಡ್ಯದ ಹೊಸಹಳ್ಳಿಯವರಾದ ಚಂದ್ರಕಲಾ ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದವರು. ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು ಕುರುಕ್ಷೇತ್ರ, ದಕ್ಷಯಜ್ಞ, ಶ್ರೀ ಕೃಷ್ಣ ಸಂಧಾನ, ರ್ತನ ಮಾಂಗಲ್ಯ, ಬಸ್ ಕಂಡಕ್ಡರ್, ಸತಿ ಸಂಸಾರದ ಜ್ಯೋತಿ, ಗೌಡ್ರ ಗದ್ಲ, ಹೀಗೆ ಬಹಳಷ್ಟು ನಾಟಕಗಳಲ್ಲಿ ನಟಿಸಿದ್ದಾರೆ.

ವಿಲನ್‌ ಪಾತ್ರಗಳೇ ಹೆಚ್ಚು

ವಿಲನ್‌ ಪಾತ್ರಗಳೇ ಹೆಚ್ಚು

ಮದುವೆಯಾದ ನಂತರ ದೂರದರ್ಶನದಲ್ಲಿ ಪ್ರಸಾರವಾದ 'ಮರೀಚಿಕೆ' ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶ ಮಾಡಿದ ಇವರು ನಂತರ ಜೀವನ, ಕುಸುಮಾಂಜಲಿ, ರಂಗೋಲಿ, ಗೋಧೂಳಿ, ಎಸ್ಸೆಸ್ಸೆಲ್ಸಿ ನನ್ಮಕ್ಳು, ಮೂಡಲ ಮನೆ ಮುಂತಾದ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಜೊತೆಗೆ ರಾಜಧಾನಿ, ಭದ್ರ ಮುಂತಾದ ಸಿನಿಮಾಗಳಲ್ಲಿಯೂ ನಟಿಸಿ ಎಲ್ಲಾ ಕಡೆ ಸಲ್ಲಬಲ್ಲವರು ಎನಿಸಿಕೊಂಡಿದ್ದಾರೆ. ಇನ್ನು ಕೃಷ್ಣ-ರುಕ್ಮಿಣಿ ಧಾರಾವಾಹಿಯ ಗೌಡ್ತಿಯಾಗಿ, ಬೆಂಕಿಯಲ್ಲಿ ಅರಳಿದ ಹೂವು ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ಪುಟ್ಟ ಗೌರಿ ಮದುವೆ' ಧಾರಾವಾಹಿಯಲ್ಲಿ ಅಜ್ಜಿ ಪಾತ್ರ ಮಾಡಿ ಮನೆ ಮನೆ ಮಾತಾದರು. ಬಹುತೇಕ ಧಾರಾವಾಹಿಯಲ್ಲಿ ವಿಲನ್‌ ಪಾತ್ರಗಳಿಗೇ ಬಣ್ಣ ಹಚ್ಚಿದ್ದಾರೆ.

ರಿಯಾಲಿಟಿ ಶೋನಲ್ಲಿ ಭಾಗಿ

ರಿಯಾಲಿಟಿ ಶೋನಲ್ಲಿ ಭಾಗಿ

ಚಿಕ್ಕವಯಸ್ಸಿಗೆ ಮದುವೆಯಾದ ಚಂದ್ರಕಲಾ ಅವರು ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಅನುಭವಿಸಿದ್ದಾರೆ. ಮದುವೆ, ಮಕ್ಕಳೂ ಎಂದು ಬ್ಯುಸಿಯಾಗಿದ್ದ ಚಂದ್ರಕಲಾ ಅವರು ನಟನೆಯ ಹವ್ಯಾಸವನ್ನು ಕಷ್ಟದ ಸಮಯದಲ್ಲೂ ಬಿಡದೇ ಇದ್ದ ಚಂದ್ರಕಲಾಗೆ ಕೊನೆಗೆ ನಟನೆಯೇ ಕೈ ಹಿಡಿಯಿತು. ಮಗ ಅನಾರೋಗ್ಯ ತಪ್ಪಿದಾಗಲೂ ನಟನೆಯನ್ನು ಮುಂದುವರಿಸಿದ್ದರು. ಅವರ ಜೀವನದ ಕಷ್ಟದ ಬಗ್ಗೆ ಬಿಗ್ ಬಾಸ್ ಮನೆಯಲ್ಲಿದ್ದಾಗ ಹೇಳಿಕೊಂಡಿದ್ದಾರೆ.

ಪೌರಾಣಿಕ ಧಾರಾವಾಹಿಯಲ್ಲಿ ಚಂದ್ರಕಲಾ

ಪೌರಾಣಿಕ ಧಾರಾವಾಹಿಯಲ್ಲಿ ಚಂದ್ರಕಲಾ

ಇನ್ನು ಕಳೆದ ಒಂದು ವರ್ಷದಿಂದ 'ದಾಸ ಪುರಂದರ' ಎಂಬ ಧಾರಾವಾಹಿಯಲ್ಲಿ ಅತ್ತೆಯ ಪಾತ್ರವನ್ನು ಚಂದ್ರಕಲಾ ಅದ್ಭುತವಾಗಿ ನಿಭಾಯಿಸಿದ್ದರು. ಈ ಧಾರಾವಾಹಿಯಿಂದ ಅರ್ಧಕ್ಕೆ ಹೊರ ನಡೆದು ನಂತರ ಜೀ ಕನ್ನಡದಲ್ಲಿ ಮೂಡಿ ಬಂದ 'ಸೂಪರ್ ಕ್ವೀನ್ಸ್' ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಚಂದ್ರಕಲಾ ನಟನೆಯ ಪೌರಾಣಿಕ ಧಾರಾವಾಹೊ ಇದೇ ತಿಂಗಳ 23ರಿಂದ ರಾತಿ 8.30ಗೆ ಪ್ರಸಾರವಾಗಲಿದೆ. 'ಉಧೋ ಉಧೋ ರೇಣುಕಾದೇವಿ ಯಲ್ಲಮ್ಮ' ಧಾರಾವಾಹಿಯಲ್ಲಿ ಮಂಜಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಧಾರಾವಾಹಿಯಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಚಂದ್ರಕಲಾ ಅವರು ಎಲ್ಲರನ್ನು ಧನ್ಯವಾದ ಹೇಳಿದ್ದಾರೆ. ಈ ಧಾರಾವಾಹಿ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಮೂಡಿ ಬರಲಿದೆ.

More from Filmibeat

English summary
Chandrakala mohan acted New Kannada serial Udho Udho Renukadevi set to entertain soon. Here is the details about chandrakala Next Serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X