For Quick Alerts
  ALLOW NOTIFICATIONS  
  For Daily Alerts

  'ವೀಕೆಂಡ್ ವಿತ್ ರಮೇಶ್'ನಲ್ಲಿ ಚಂದ್ರಶೇಖರ್ ಕಂಬಾರ

  |

  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರರು ಈ ವಾರದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಅತಿಥಿ ಆಗಿದ್ದಾರೆ. ಜೀ ಕನ್ನಡ ವಾಹಿನಿ ಸಾಹಿತ್ಯಾಸಕ್ತರಿಗೆ ಖುಷಿಯ ಸುದ್ದಿ ನೀಡಿದೆ.

  ಈ ಶನಿವಾರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಸಂಚಿಕೆ ಪ್ರಸಾರ ಆಗಲಿದೆ. ಭಾನುವಾರ ರಾತ್ರಿ 9.30ಕ್ಕೆ ಚಂದ್ರಶೇಖರ ಕಂಬಾರ ಸಂಚಿಕೆ ಪ್ರಸಾರ ಆಗುತ್ತಿದೆ. ಫೋಟೋದ ಮೂಲಕ ಈ ವಾರದ ಅತಿಥಿಗಳ ಹೆಸರನ್ನು ವಾಹಿನಿ ಬಹಿರಂಗಪಡಿಸಿದೆ.

  Breaking News : ಅಂತ್ಯ ಆಗ್ತಿದೆ 'ವೀಕೆಂಡ್ ವಿತ್ ರಮೇಶ್ 4'Breaking News : ಅಂತ್ಯ ಆಗ್ತಿದೆ 'ವೀಕೆಂಡ್ ವಿತ್ ರಮೇಶ್ 4'

  ಜೀ ವಾಹಿನಿ ಜ್ಞಾನಪೀಠ ಪ್ರಶಸ್ತಿ ಪಡೆದ ಮತ್ತೊಬ್ಬ ಸಾಹಿತಿ ಗಿರೀಶ ಕಾರ್ನಾಡರನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕರೆತರುವ ಪ್ಲಾನ್ ಮಾಡಿತ್ತು. ಆದರೆ, ಆ ಕನಸು ನನಸಾಗುವ ಮುಂಚೆಯೇ ಕಾರ್ನಾಡ್ ವಿಧಿವಶರಾದರು.

  ಕಾರ್ನಾಡರನ್ನು ಕಾರ್ಯಕ್ರಮಕ್ಕೆ ಕರೆ ತರಲು ಆಗಿಲಿಲ್ಲ ಎನ್ನುವ ಬೇಸರದ ನಡುವೆಯೇ, ಇದೀಗ ಚಂದ್ರಶೇಖರ ಕಂಬಾರರನ್ನು ಸಾಧಕರ ಕುರ್ಚಿ ಮೇಲೆ ಕುಳಿತು ಕೂರಿಸುವ ಪ್ರಯತ್ನದಲ್ಲಿ ಜೀ ವಾಹಿನಿ ಯಶಸ್ವಿಯಾಗಿದೆ.

  ಚಂದ್ರಶೇಖರ ಕಂಬಾರರು ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ಕವಿಯಾಗಿದ್ದಾರೆ. ತಮ್ಮ ಕಾದಂಬರಿ, ನಾಟಕ, ಕಾವ್ಯಗಳ ಮೂಲಕ ದೊಡ್ಡ ಜನಪ್ರಿಯತೆ ಪಡೆದಿದ್ದಾರೆ.

  English summary
  Kannada poet, writer Chandrashekhara Kambara will the next guest of zee kannada popular show 'Weekend With Ramesh 4'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X