ಬಿಗ್ ಬಾಸ್ ಶೋ ತಾರಕಕ್ಕೇರಿದ ಚಂದ್ರಿಕಾ ರಂಪಾಟ

By Rajendra

Next »

« Previous

ವಿಜಯ್ ರಾಘವೇಂದ್ರ ತಮ್ಮ ಮೈಮೇಲೆ ಕರಡಿ ಆವಾಹನೆಯಾದಂತೆ ರಿಂಗ್ ಮಾಸ್ಟರ್ ಚಂದ್ರಿಕಾ ಮೇಲೆ ಹರಿಹಾಯ್ದರು. ನಿಕಿತಾ ಅವರ ತಲೆಕೂದಲು ಎಳೆದದ್ದು ತಪ್ಪು ಎಂದು ಎಲ್ಲರೂ ಹೇಳಿದರು. ತಾವು ಅಷ್ಟೊಂದು ಒರಟಾಗಿ ನಡೆದುಕೊಳ್ಳಬಾರದಿತ್ತು ಎಂದು ಎಲ್ಲರೂ ಸಲಹೆ ಕೊಡಲು ಮುಂದಾದರು.

ಆದರೆ ಚಂದ್ರಿಕಾ ಅವರು ತಾನು ಮಾಡಿದ್ದೇ ಸರಿ ಎಂದು ವಾದಿಸಿದರು. ಮನೆಯಲ್ಲಿ ಏನಾಯಿತೆಂದರೆ ಎಲ್ಲ ಪ್ರಾಣಿಗಳು ರಿಂಗ್ ಮಾಸ್ಟರ್ ವಿರುದ್ಧ ತಿರುಗಿ ಬಿದ್ದವು. ಇದರಿಂದ ಇನ್ನಷ್ಟು ದೃತಿಗೆಟ್ಟ ಚಂದ್ರಿಕಾ ಕೂಗಾಡಲು ಶುರು ಮಾಡಿದರು.

Bigg Boss Kannada

ಇಷ್ಟೆಲ್ಲಾ ರಾದ್ಧಾಂತ ಆದ ಮೇಲೆ ಎಂಬತ್ತನೇ ದಿನ ರಾತ್ರಿ ನಿಕಿತಾ ಒಬ್ಬರೇ ಕೂತು ತಮ್ಮ ತಾಯಿಯನ್ನು ನೆನೆದು ಬಿಕ್ಕಿಬಿಕ್ಕಿ ಅತ್ತರು. ತನ್ನ ಜಡೆ ಎಳೆದರು ಎಂಬ ಕಾರಣಕ್ಕೆ ಆರಂಭವಾದ ಜಗಳ ಮುಗಿಯುವ ಸೂಚನೆಗಳೇ ಕಾಣಲಿಲ್ಲ. ಇನ್ನೊಂದು ಕಡೆ ಬ್ರಹ್ಮಾಂಡ ಶರ್ಮಾ ಅವರು ಚಂದ್ರಿಕಾ ಮೇಲೆ ಮುನಿಸಿಕೊಂಡು ಕೂತು ಬಿಟ್ಟರು.

ಶ್ವೇತಾ ಅವರ ವಿಚಾರ ಈಗ ಕೆದಕಬಾರದಿತ್ತು ಎಂಬುದು ಅವರ ಅಸಹನೆಗೆ ಕಾರಣವಾಗಿತ್ತು. ಟಾಸ್ಕ್ ನಲ್ಲಿ ನಾನು ಭಾಗವಹಿಸುವುದೇ ಇಲ್ಲ ಎಂದು ಮೌನವಾಗಿ ಕುಳಿತುಬಿಟ್ಟರು. ಚಂದ್ರಿಕಾ ಮಾಡಿದ್ದು ತಪ್ಪು ಎಂದು ವಾದಿಸಿದರು.

ಶರ್ಮಾ ಅವರು ಮತ್ತೆ ಹಳೆ ರಾಗ ಹಾಡಿದರು. ಕಾಲುಗಳೆಲ್ಲಾ ಊದಿಕೊಂಡಿವೆ. ಚೈನ್ ಹಾಕಿಸಿಕೊಂಡು ರಾತ್ರಿಯಲ್ಲಾ ನಿದ್ದೆ ಇಲ್ಲದೆ ಕಳೆಯುವುದು ನನಗೆ ಸಾಧ್ಯವಿಲ್ಲಪ್ಪ. ದಯವಿಟ್ಟು ನನ್ನನ್ನು ಇಲ್ಲಿಂದ ಕಳುಹಿಸಿ ಬಿಡಿ ಎಂದು ಚಿಕ್ಕಮಕ್ಕಳಂತೆ ಬಿಗ್ ಬಾಸ್ ಬಳಿ ವಿನಂತಿಸಿಕೊಂಡರು.

Next »

« Previous

More from Filmibeat

English summary
All was well in the latest task about 'a hunter and animals'. But it took a serious turn when Bigg Boss tried to modify the game by asking Nikita, who was playing the role of a monkey, to escape from the hunter and assigned her to bail out other animals played by Narendra Babu Sharma (Elephant), Arun Sagar (Lion) and Vijay Raghavendra (Bear). Here is the day 80th highlights.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X