ನಿಕಿತಾ ಬಗ್ಗೆ ಕತ್ತಿಮಸೆಯುತ್ತಲೇ ಇರುವ ಚಂದ್ರಿಕಾ
ಇನ್ನೊಂದು ಕಡೆ ನಿಕಿತಾ ಎಲ್ಲರಿಗೂ ನೀರು ಎರಚುತ್ತಾ ಸಂಭ್ರಮಿಸಿದರು. ಅದರಲ್ಲೂ ಮುಖ್ಯವಾಗಿ ಯೋಗಿಗೆ ನೀರು ಎರಚಿ ಖುಷಿಪಟ್ಟರು. ಇದರಿಂದ ಪ್ರೇರಿತರಾದ ರಾಘು, ಅನುಶ್ರೀ ಸಹ ನೀರಿನಾಟಕ್ಕೆ ಇಳಿದರು. ಇವರ ಜಲಕ್ರೀಡೆಯಿಂದ ಅವರಿಗೆ ಕೊಟ್ಟಿದ್ದ ಮೈಕ್ ಗಳು ಹಾಳಾದವು. ಬಳಿಕ ಬಿಗ್ ಬಾಸ್ ಕೆಂಗಣ್ಣಿಗೂ ಗುರಿಯಾಗಬೇಕಾಯಿತು.
ಮೈಕ್ ಗಳನ್ನು ಹಾಳು ಮಾಡಿದ್ದಕ್ಕೆ ನಿಕಿತಾ, ಯೋಗಿ ಹಾಗೂ ಅನುಶ್ರೀ ಅವರಿಗೆ ಬಿಗ್ ಬಾಸ್ ಕೊಟ್ಟ ಶಿಕ್ಷೆ ನೂರು ಬಸ್ಕಿ. ಹಾಗೆಯೇ ಮನೆಗೆ ನೀರಿನ ಸರಬರಾಜು ನಿಲ್ಲಿಸಲಾಯಿತು. ಸ್ವಿಮ್ಮಿಂಗ್ ಫೂಲ್ ನೀರನ್ನೂ ಖಾಲಿ ಮಾಡಲಾಯಿತು. ಎಲ್ಲರೂ ಕಿವಿಹಿಡಿದುಕೊಂಡು ಬಿಗ್ ಬಾಸ್ ನಮ್ಮನ್ನು ಕ್ಷಮಿಸಿ, ನಾಳೆಯಿಂದ ಮೈಕ್ ಬಗ್ಗೆ ಹುಷಾರಾಗಿರುತ್ತೇವೆ ಎಂದು ಹೇಳುತ್ತಾ ನೂರು ಬಸ್ಕಿ ಹೊಡೆದರು.

ಇನ್ನೊಂದು ಕಡೆ ನಿಕಿತಾ ಬಗ್ಗೆ ಚಂದ್ರಿಕಾ ಕತ್ತಿ ಮಸೆಯುತ್ತಲೇ ಇದ್ದಾರೆ. ಎಲ್ಲವೂ ಅವಳಿಂದಲೇ ಆಗಿದ್ದು. ಅವಳ ಜೊತೆ ಸೇರಿ ಅನುಶ್ರೀ ಅರ್ಧ ಹಾಳಾಗಿದ್ದಾಳೆ. ಇನ್ನೂ ಎಳೆಹುಡುಗಿ ತರಹ ಆಡುತ್ತಾಳೆ. ನಾವೆಲ್ಲಾ ಮನೆಯಲ್ಲಿ ಕೆಲಸ ಮಾಡುತ್ತಿದ್ದರೆ ಇವರೆಲ್ಲಾ ಒಳ್ಳೆ ಪಿಕ್ ನಿಕ್ ಗೆ ಬಂದಂತೆ ಆಡುತ್ತಿದ್ದಾರೆ. ಅವಳಿಗೆ ಒಂಚೂರು ಮಾನ ಮರ್ಯಾದೆ ಬೇಡವೆ...
ಮಾಡೋದೆಲ್ಲಾ ಅನಾಚಾರ. ಯೋಗಿ ಬಂದು ಇನ್ನೂ ಒಂದೆರಡು ದಿನ ಆಗಿಲ್ಲ. ಆಗಲೆ ನೋಡಿ ಅವನ ಜೊತೆ ಹೇಗೆ ನಡೆದುಕೊಳ್ಳುತ್ತಿದ್ದಾಳೆ. ನನಗಂತೂ ಸಾಕಾಗಿ ಹೋಗಿದೆ. ಇವರ ಆಟ ನೋಡಿ ನೋಡಿ. ನಾನಂತೂ ಇಲ್ಲಿಂದ ಹೋಗಲು ರೆಡಿಯಾಗಿದ್ದೀನಿ ಎಂದು ಸಾಗಿತ್ತು ಚಂದ್ರಿಕಾ ಅವರ ಮಾತು.


Click it and Unblock the Notifications











